Hubli News: ಹುಬ್ಬಳ್ಳಿ: ಜಗದೀಶ್ ಶೆಟ್ಟರ್ ಮರಳಿ ಬಿಜೆಪಿಗೆ ಬಂದಿದ್ದು, ಈ ಬಗ್ಗೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಈ ಬಗ್ಗೆ ಶಾಸಕ ಅರವಿಂದ ಬೆಲ್ಲದ್ ಮಾತನಾಡಿದ್ದಾರೆ.
ಹೈಕಮಾಂಡ್ ನಿರ್ಧಾರ ನಾವು ಸ್ವಾಗತ ಮಾಡ್ತೀವಿ ಎಂದ ಬೆಲ್ಲದ್, ಧಾರವಾಡ ಲೋಕಸಭೆ ಟಿಕೆಟ್ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಯಾವ ಉಹಾಪೋಹ ಇಲ್ಲ. ನಮ್ಮ ನಾಯಕರು ಜೋಶಿ ಅವರು. ಅವರೇ ನಮ್ಮ ಲೋಕಸಭೆ ಅಭ್ಯರ್ಥಿ ಎನ್ನುವ ಮೂಲಕ ಬೆಲ್ಲದ್, ಜೋಶಿ ಪರ ಬ್ಯಾಟ್ ಬೀಸಿದ್ದಾರೆ. ಟಿಕೆಟ್ ಅವರಿಗೆ ಸಿಗಲಿದೆ ದೊಡ್ಡ ಅಂತರದಿಂದ ಅವರು ಗೆಲ್ಲಲ್ಲಿದ್ದಾರೆ. ಹಾಗಾಗಿ ಯಾವ ಪ್ರಶ್ನೆ ಇಲ್ಲ. ಶೆಟ್ರ ನಿಮ್ಮ ನಾಯಕರ ಅಲ್ವಾ ಅಂದ್ರೆ ನಾನ ಹಾಗೆ ಹೇಳಿಲ್ಲ. ಆದ್ರೆ ನಾನು ಹೇಳೋದು ಪ್ರಲ್ಹಾದ್ ಜೋಶಿ ಬಿಟ್ಟರೆ ಯಾರೂ ಇಲ್ಲ ಎಂದು ಬೆಲ್ಲದ್ ಹೇಳಿದ್ದಾರೆ.
ನನಗೆ ಶೆಟ್ಟರ್ ಸೇರ್ಪಡೆ ಅಸಮಾಧಾನ ಇಲ್ಲ. ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ದ. ಶೆಟ್ಟರ್ ಘರವಾಪ್ಸಿ ನಂತರ ಯಾವ ಬಣಗಳು ಆಗೋದಿಲ್ಲ. ಶೆಟ್ಟರ್ ವಾಪಸ್ ಬರೋ ಬಗ್ಗೆ ನಾವ ಯೋಚನೆ ಮಾಡಿರಲಿಲ್ಲ. ಬರ್ತೀದಾರೆ ಅಂತಾ ನಾಯಕರು ಹೇಳಿದ್ರು,ಸ್ವಾಗತ ಮಾಡಿದ್ದೇವೆ ಎಂದು ಬೆಲ್ಲದ್ ಹೇಳಿದ್ದಾರೆ..
‘ರಾಜ್ಯದಲ್ಲಿ ಏನೇ ಕೆಲಸ ಮಾಡಿದರೂ, ಮೋದಿ ಅವರ ಕೆಲಸವನ್ನು ಓವರ್ ಟೇಕ್ ಮಾಡಲು ಸಾಧ್ಯವಿಲ್ಲ’
ಸಿಎಂ ಸಿದ್ದರಾಮಯ್ಯ- ಡಿ.ಕೆ.ಶಿವಕುಮಾರ್ ನಾಯಕತ್ವದ ಬಗ್ಗೆ ಶೆಟ್ಟರ್ ಹೇಳಿದ್ದೇನು..?


