ಉತ್ತರ ಪ್ರದೇಶ: ರೈಲು ಹಳಿ ತಪ್ಪಿದ ಕುರಿತಾಗಿ ವರದಿ ಮಾಡಲು ತೆರಳಿದ್ದ ಪತ್ರಕರ್ತನ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಲ್ಲದೆ ಆತನ ಬಾಯಿಯಲ್ಲಿ ಮೂತ್ರ ವಿಸರ್ಜನೆ ಮಾಡಿರುವ ಆರೋಪ ಕೇಳಿಬಂದಿದೆ.
ಉತ್ತರಪ್ರದೇಶದ ದಿಮ್ನಾಪುರ ರೈಲ್ವೇ ನಿಲ್ದಾಣ ಬಳಿ ಗೂಡ್ಸ್ ರೈಲೊಂದು ಹಳಿ ತಪ್ಪಿದ ಸುದ್ದಿಯನ್ನು ವರದಿ ಮಾಡೋದಕ್ಕಾಗಿ ಪತ್ರಕರ್ತ ಅಲ್ಲಿಗೆ ತೆರಳಿದ್ದ. ಆದ್ರೆ ಆತನನ್ನು ಸಿವಿಲ್ ಡ್ರಸ್ ನಲ್ಲಿದ್ದ ಪೊಲೀಸರು ಹಾಗೂ ರೈಲ್ವೇ ಪೊಲೀಸರು ತಡೆಯಲೆತ್ನಿಸಿದ್ರು. ಅಲ್ಲದೆ ಆತನ ಕ್ಯಾಮರಾವನ್ನು ತೆಗೆದು ಬಿಸಾಡಿದ್ರು ಎನ್ನಲಾಗಿದೆ. ಬಳಿಕ ಪತ್ರಕರ್ತನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ ಪೊಲೀಸರು ಆತನನ್ನು ಅಕ್ರಮವಾಗಿ ಪೊಲೀಸ್ ಠಾಣೆಯ ಸೆಲ್ ನಲ್ಲಿ ಕೂಡಿಹಾಕಿದ್ದರು. ಈ ಎಲ್ಲಾ ದೃಶ್ಯಗಳು ಕ್ಯಾಮರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿವೆ.
ಇನ್ನು ಘಟನೆ ಕುರಿತಂತೆ ಮಾತನಾಡಿದ ಪತ್ರಕರ್ತ, ತನ್ನನ್ನು ಸೆಲ್ ನಲ್ಲಿ ಕೂಡಿಹಾಕಿದ್ದಲ್ಲದೆ, ಪೊಲೀಸರು ತನ್ನನ್ನು ವಿವಸ್ತ್ರಗೊಳಿಸಿ ಬಾಯಿಯಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಾರೆ ಅಂತ ಆರೋಪಿಸುತ್ತಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆ ಅಧಿಕಾರಿ ರಾಕೇಶ್ ಕುಮಾರ್ ಮತ್ತು ರೈಲ್ವೇ ಪೊಲೀಸ್ ಪೇದೆ ಸುನಿಲ್ ಎಂಬುವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಕುರಿತ ಬರವಣಿಗೆ ಪ್ರಕರಣದಲ್ಲಿ ಜೈಲಿನಲ್ಲಿದ್ದ ಪತ್ರಕರ್ತ ಪ್ರಶಾಂತ್ ಕನೋಜಿಯಾ ಬಿಡುಗಡೆಗೆ ನಿನ್ನೆ ಸುಪ್ರೀಂ ಆದೇಶ ನೀಡಿತ್ತು. ಇದರ ಬೆನ್ನಲ್ಲೇ ಇದೀಗ ಮತ್ತೆ ಪತ್ರಕರ್ತನ ಮೇಲೆ ದೌರ್ಜನ್ಯ ಪ್ರಕರಣ ನಡೆದಿದ್ದು, ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.
ವರ್ಕೌಟ್ ಆಗುತ್ತಾ ಬಿಜೆಪಿ ಪ್ಲಾನ್?? ಮಿಸ್ ಮಾಡದೇ ಈ ವಿಡಿಯೋ ನೋಡಿ