ಪತ್ರಕರ್ತ ಮಲ್ಲಿಕ್ ಬೆಳಗಲಿ ಕಾಂಗ್ರೆಸ್ ಪಕ್ಷದ ಧಾರವಾಡ ಜಿಲ್ಲಾ ಮಾಧ್ಯಮ ಸಂಯೋಜಕರಾಗಿ ನೇಮಕ

Dharwad News: ಧಾರವಾಡ: ಧಾರವಾಡ ಜಿಲ್ಲಾ ಕಾಂಗ್ರೆಸ್ ಪಕ್ಷದ ಮಾದ್ಯಮ ಸಂಯೋಜಕನರಾಗಿ ಪತ್ರಕರ್ತ ಮಲ್ಲಿಕ್ ಬೆಳಗಲಿ ಅವರನ್ನು ನೇಮಕ ಮಾಡಲಾಗಿದೆ. ಹೌದು ಕಳೆದ ಹಲವು ವರ್ಷಗಳಿಂದ ವಿದ್ಯುನ್ಮಾನ ಮಾದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹುಬ್ಬಳ್ಳಿ ತಾಲ್ಲೂಕಿನ ಬೆಳಗಲಿ ಗ್ರಾಮದ ಪತ್ರಕರ್ತ ಮಲ್ಲಿಕ್ ಬೆಳಗಲಿ ಅವರನ್ನು ಧಾರವಾಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾಧ್ಯಮ ಸಂಯೋಜಕರಾಗಿ ನೇಮಕ ಮಾಡಲಾಗಿದೆ.

ಧಾರವಾಡ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಅನಿಲ್ ಕುಮಾರ್ ಪಾಟೀಲ್ ನೇಮಕಾತಿ ಆದೇಶ ಮಾಡಿದ್ದಾರೆ. ಈ ಕುರಿತಂತೆ ಪತ್ರಕರ್ತ ಮಲ್ಲಿಕ್ ಬೆಳಗಲಿ ಯವರಿಗೆ ನೇಮಕಾತಿಯ ಆದೇಶ ಪ್ರತಿಯನ್ನು ನೀಡಿ ಅಭಿನಂದನೆಗಳನ್ನು ಸಲ್ಲಿಸಿದರು. ಗ್ರಾಮೀಣ ವಿಭಾಗದ ಜಿಲ್ಲಾಧ್ಯಕ್ಷ ರಾಗಿರುವ ಅನಿಲಕುಮಾರ್ ಪಾಟೀಲ್ ಅವರು ಮಲ್ಲಿಕ್ ಬೆಳಗಲಿ ಯವರಿಗೆ ನೇಮಕಾತಿಯ ಆದೇಶ ಪ್ರತಿಯನ್ನು ತಮ್ಮ ಗೃಹ ಕಚೇರಿಯಲ್ಲಿ ನೀಡಿ ಅಭಿನಂದನೆ ಸಲ್ಲಿಸಿದರು.

ಇನ್ನೂ ಇತ್ತ ಈ ಒಂದು ವಿಚಾರ ಕುರಿತಂತೆ ಕಾಂಗ್ರೇಸ್ ಪಕ್ಷದ ಯುವ ಮುಖಂಡರಾಗಿರುವ ರಜತ್ ಉಳ್ಳಾಗಡ್ಡಿಮಠ ಅವರು ಕೂಡಾ ಮಲ್ಲಿಕ್ ಬೆಳಗಲಿ ಯವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ದೇಶದ್ರೋಹಿಗಳಿಗೆ ವಿಧಾನಸಭೆಯಲ್ಲಿ ಜಾಗ ಕೊಟ್ಟಿರುವುದು ಆತಂಕಕಾರಿ ಬೆಳವಣಿಗೆ: ಬಸವರಾಜ್ ಬೊಮ್ಮಾಯಿ

ರಾಜ್ಯದ ರಕ್ಷಣೆಗಾಗಿ ಕಾಂಗ್ರೆಸ್ಸಿಗರೇ ವಿಧಾನಸೌಧ ಬಿಟ್ಟು ತೊಲಗಿ: ಬಿಜೆಪಿ ನಾಯಕರ ಆಕ್ರೋಶ

ಪಾಕ್‌ ಪರ ಘೋಷಣೆ ಕೂಗಿದವರನ್ನು ಒದ್ದು ಒಳಗೆ ಹಾಕಿ -ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಗ್ರಹ

About The Author