www.karnatakatv.net:ಆರ್,ಆರ್,ಆರ್ ಸದ್ಯ ಇಡಿ ಇಂಡಿಯಾದಲ್ಲೇ ಬಹು ನಿರೀಕ್ಷೆ ಮೂಡಿಸಿರುವ ಸಿನಿಮಾ. ಚಿತ್ರದ ಚಿತ್ರೀಕಣ ಶುರುವಾದ ದಿನದಿಂದಲೇ ಸದ್ದು ಮಾಡುತ್ತಿದೆ. ಈ ಸಿನಿಮಾ ಹೆಚ್ಚು ಗಮನ ಸೆಳೆಯುತ್ತಿರುವುದು ಎಸ್.ಎಸ್.ರಾಜಮೌಳಿ ಯವರ ನಿರ್ದೇಶನ ಹಾಗೆ ಬಹು ಮುಖ್ಯವಾಗಿ ಸಿನಿಮಾದಲ್ಲಿ ರಾಮ್ ಚರಣ್ ಮತ್ತು Jr.ಎನ್,ಟಿ,ಆರ್ ಒಟ್ಟಿಗೆ ಅಭಿನಯಿಸುತ್ತಿರುವುದರಿಂದ. ಈಗಾಗಲೆ ಟೀಸರ್, ಹಾಡಯಗಳಿಂದ ಪ್ರೇಕ್ಷಕರ ಮನ ಗೆದ್ದಿದೆ RRR. ಸದ್ಯ ಇಂದು ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಟ್ರೇಲರ್ ನೋಡಿದ ವೀಕ್ಷಕರು ರೋಮಾಂಚನ ಗೊಳ್ಳುವಂತೆ ಮಾಡಿದೆ.
ಟ್ರೇಲರ್‌ನಲ್ಲಿ ರಾಮ್ ಚರಣ್ ಮತ್ತು Jr.ಎನ್,ಟಿ,ಆರ್ ಅವರ ಸಾಹಸ ಸನ್ನಿವೇಶಗಳು, ಅದ್ಭುತ ದೃಶ್ಯಗಳು, ರಾಮರಾಜು ಮತ್ತು ಭೀಮ್ ಪಾತ್ರಗಳ ಒಡನಾಟದ ಕೆಲತುಣುಕುಗಳು ನೋಡುಗರನ್ನು ಪಕ್ಕ ರಂಜಿಸಿದೆ. ಮಿಲಿಯನ್ ಗಟ್ಟಲೆ ವೀಕ್ಷಣೆ ಪಡೆದು ಮುನ್ನುಗ್ಗುತ್ತಲಿದೆ. ಈ ಎಲ್ಲಾ ವಿಚಾರಗಳು ಒಂದುಕಡೆಯಾದರೆ ಕನ್ನಡದ ಅವತರಿಣಿಕೆಯ ಟ್ರೇಲರ್‌ಗೆ ಸ್ವತಃ ರಾಮ್ ಚರಣ್ ಮತ್ತು Jr.ಎನ್,ಟಿ,ಆರ್ ಅವರೆ ಧ್ವನಿ ನೀಡಿದ್ದಾರೆ. Jr.ಎನ್.ಟಿ.ಆರ್ ಅವರ ತಾಯಿ ಮೂಲತಃ ಕನ್ನಡದವರೇ ಆಗಿದ್ದು ಕನ್ನಡ ಅವರಿಗೇನು ಹೊಸದಲ್ಲ. ಈಗಾಗಲೇ ಕೆಲ ವೇದಿಕೆಗಳ ಮೇಲೆ Jr.ಎನ್.ಟಿ.ಆರ್ ಮಾತನಾಡಿ ಕನ್ನಡಿಗರ ಮನ ಗೆದ್ದಿದ್ದರು. ರಾಮ್ ಚರಣ್‌ಗೆ ಕನ್ನಡ ಬರುವುದಿಲ್ಲ ಆದರು ಡಬ್ಬಿಂಗ್ ಮಾಡಿ ಧ್ವನಿ ನೀಡಿರುವುದು ನಿಜಕ್ಕೂ ಖುಷಿಯ ವಿಚಾರ. ಒಟ್ಟಾರೆ ಸಂಪೂರ್ಣ ಸಿನಿಮಾದಲ್ಲಿ ಇವರಿಬ್ಬರ ಧ್ವನಿ ಇರಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
RRR ನಲ್ಲಿ ನಟ ರಾಮಚರಣ್ ತೇಜ್, ಅಲ್ಲುರಿ ಸೀತಾ ರಾಮರಾಜು ಪಾತ್ರದಲ್ಲಿ ಹಾಗೆ Jr.ಎನ್,ಟಿ,ಆರ್. ಕೊಮರಾಮ್ ಭೀಮ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಅದ್ಭತವಾಗಿ ಕಾಣಿಸಿಕೊಂಡಿದ್ದಾರೆ. ಇಬ್ಬರು ಸ್ವಾತಂತ್ರ‍್ಯ ಹೋರಾಟಗಾರರ ಕಥೆಯನ್ನು `ಆರ್‌ಆರ್‌ಆರ್’ ಹೊಂದಿರಲಿದೆ ಎಂಬ ವಿಷಯಗಳ ತಿಳಿದಿವೆ, ಅಂತೆಯೇ ಟ್ರೇಲರ್ ಕೂಡ ಸ್ವಾತಂತ್ರ‍್ಯ ಹೋರಾಟದ ಕುರಿತಂತೆ ಕಥೆ ಇದೆ ಎಂದು ಮೇಲ್ನೋಟಕ್ಕೆ ಹೇಳುತ್ತಿದೆ. ಆದರೆ ಚಿತ್ರತಂಡ ಈ ಹಿಂದೆಯೇ ‘RRR’ ಸಂಪೂರ್ಣ ಕಾಲ್ಪನಿಕ ಚಿತ್ರ, ಇದು ದೇಶಭಕ್ತಿಯ ಸಿನಿಮಾವಲ್ಲ ಎಂಬ ಮಾಹಿತಿಯನ್ನು ಹೊರಹಾಕಿತ್ತು. ಒಟ್ಟಿನಲ್ಲಿ ಸಿನಿಮಾ ರಿಲೀಸ್ ಆದನಂತರವೇ ಇದು ಯಾವರೀತಿಯ ಕಥೆ, ಸಂಪೂರ್ಣ ಸಿನಿಮಾ ಸ್ವಾತಂತ್ರ‍್ಯ ಹೋರಾಟದ ಕುರಿತು ಇರಲಿದೆಯೇ ಅಥವ ಸ್ವಾತಂತ್ರ‍್ಯ ಹೋರಾಟದ ಅಂಶಗಳ ಆಧಾರದ ಮೇಲೆ ಸಿನಿಮಾ ಮೂಡಿ ಬಂದಿರಲಿವೆಯೆ ಎಂಬುದನ್ನು ಚಿತ್ರ ತೆರೆಕಂಡ ನಂತರವೇ ಸ್ಪಷ್ಟವಾಗಿ ತಿಳಿಯಲಿದೆ.
ಇನ್ನೂ ಆರ್,ಆರ್,ಆರ್ ಸಿನಿಮಾದಲ್ಲಿ ಕನ್ನಡಿಗ ಅರುಣ್ ಸಾಗರ್ ಕೂಡ ಬಣ್ಣ ಹಚ್ಚಿರುವುದು ವಿಶೇಷ. ರಂಗಭೂಮಿ ಪ್ರತಿಭೆ ಅರುಣ್ ಸಾಗರ್ ಅವರು ಸಾಕಷ್ಟು ಶೋಗಳ ನಿರೂಪಣೆ ಮಾಡಿದ್ದಾರೆ, ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಬಿಗ್ ಬಾಸ್ ಕನ್ನಡ ಶೋನಲ್ಲಿಯೂ ಅವರು ರನ್ನರ್ ಅಪ್ ಆಗಿ ಹೊರ ಹೊಮ್ಮಿದ್ದರು. ಸಿಕ್ಕಾಪಟ್ಟೆ ಹೈಪ್ ಉಂಟು ಮಾಡಿರುವ RRR, ಚಿತ್ರದ ಪ್ರಚಾರ ಕೂಡ ಭರ್ಜರಿಯಾಗಿ ನಡೆಯುತ್ತಿದ್ದು. ಕೇವಲ ಯುಟ್ಯೂಬ್‌ನಲ್ಲಿ ಮಾತ್ರವಲ್ಲದೆ, ಈ ಸಿನಿಮಾದ ಟ್ರೇಲರ್ ಬೆಂಗಳೂರಿನ ಊರ್ವಶಿ, ಕಾವೇರಿ, ಪುಷ್ಪ, ಅಂಜನ್ ಸೇರಿದಂತೆ ರಾಜ್ಯದ 30 ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದೆ. ಸಖತ್ ಚಿತ್ರ ನಿರ್ಮಾಣ ಮಾಡಿದ್ದ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯು ‘RRR’ ಚಿತ್ರ ಕರ್ನಾಟಕದಾದ್ಯಂತ ಹಂಚಿಕೆಯ ಜವಬ್ದಾರಿಯನ್ನು ಹೊತ್ತಿದೆ.
ರೂಪೇಶ್, ಫಿಲಂ ಬ್ಯೂರೋ, ಕರ್ನಾಟಕ ಟಿವಿ.




