Saturday, April 5, 2025

Latest Posts

ತೂಲಿಕಾ ಮಾನ್‍ಗೆ ಬೆಳ್ಳಿ ಪದಕ 

- Advertisement -

ಬರ್ಮಿಂಗ್‍ಹ್ಯಾಮ್:  ಭಾರತದ ತೂಲಿಕಾ ಮಾನ್ ಮಹಿಳಾ ಜೂಡೊ ಸ್ಪರ್ಧೆಯ 78ಕೆಜಿ ವಿಭಾಗದಲ್ಲಿ  ಬೆಳ್ಳಿ ಪದಕ ಗೆದ್ದು ಮಿಂಚಿದರು.

22 ವರ್ಷದ ತೂಲಿಕಾ ಮಾನ್ ಸ್ಕಾಟ್‍ಲ್ಯಾಂಡ್‍ನ  ಸಾರಾ ಅಡ್ಲಿಂಗ್ಟನ್  ಎದುರು 1-0 ಅಂತರದಿಂದ ಸೋತರು.  ಅಂತಿಮ ಹಣಾಹಣಿಯಲ್ಲಿ ಎದುರಾಳಿಯನ್ನು

ನೆಲಕ್ಕುರುಳಿಸಿ ಭಾರೀ ಭರವಸೆ ಮೂಡಿದ್ದರು. ನಂತರ ಪಂದ್ಯದ ಕೊನೆಯಲ್ಲಿ  ಸಾರಾ ಎದುರಾಳಿ ತೂಲಿಕಾ ಅವರನ್ನು ಹೊಡೆದುರುಳಿಸಿ ಅಂಕವನ್ನು ಪಡೆದು ಚಿನ್ನಕ್ಕೆ ಮುತ್ತಿಟ್ಟರು. ಕೊನೆಯ ಸೆಕೆಂಡುಗಳಲ್ಲಿ ತೂಲಿಕಾ ಎದುರಾಳಿಯ ತಂತ್ರವನ್ನೂ ಅರಿತಿದ್ದರೆ ಚಿನ್ನ ಗೆಲ್ಲಬಹುಸಿತ್ತು.

ಮೂರು ಬಾರಿ ರಾಷ್ಟ್ರೀಯ ಚಾಂಪಿಯನ್ ಆಗಿರುವ ಈ ದೆಹಲಿ ಅಥ್ಲೀಟ್ ಸೆಮಿಫೈನಲ್‍ನಲ್ಲಿ  ಸಿಡ್ನಿ ಆದಯಂಡ್ರೂಸ್ ಅವರನ್ನು ಸೋಲಿಸಿದ್ದರು.

ಎೂಡೊದಲ್ಲಿ  ಇದು ಭಾರತಕ್ಕೆ ಮೂರನೆ ಪದಕವಾಗಿದೆ.  ಸುಶೀಲಾ ದೇವಿ ಮತ್ತು ವಿಜಯ್ ಕುಮಾರ್ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದಿದ್ದಾರೆ.

 

- Advertisement -

Latest Posts

Don't Miss