ಮೇಷ: ಕಾರ್ಯರಂಗದಲ್ಲಿ ಹಿತಶತ್ರುಗಳ ಉಪಟಳ ತೋರಿಬರುತ್ತದೆ. ಉದ್ಯೋಗಿಗಳಿಗೆ ವರ್ಗಾವಣೆಯ ಸೂಚನೆ ಗೋಚರಕ್ಕೆ ಬರಲಿದೆ. ಸಾಂಸಾರಿಕವಾಗಿ ಅಭಿವೃದ್ಧಿಯು ಗೋಚರಕ್ಕೆ ಬಂದು ಸಮಾಧಾನವಾದೀತು.

ವೃಷಭ: ಎಡರು ತೊಡರುಗಳಿದ್ದರೂ ನವಚೈತನ್ಯ ಅನುಭವಕ್ಕೆ ಬರಲಿದೆ. ಧರ್ಮ ಕಾರ್ಯಗಳಲ್ಲಿ ಆಸಕ್ತಿ ಕಂಡುಬರಲಿದೆ. ನಿಮ್ಮ ಸದಾಕ್ರಿಯಾಶೀಲತೆ ಮುನ್ನಡೆಗೆ ಸಾಧಕವಾದೀತು. ಆರ್ಥಿಕವಾಗಿ ಸುಧಾರಣೆ ಇದೆ.
ಮಿಥುನ: ಮುಖ್ಯವಾಗಿ ಕಾರ್ಯಾನೂಕೂಲಕ್ಕೆ ಅವಸರಿಸದಿರಿ. ಅವಿರತ ಚಟುವಟಿಕೆಗಳು ದೇಹಾರೋಗ್ಯದ ಮೇಲೆ ಪರಿಣಾಮ ಬೀರದಂತೆ ಜಾಗೃತೆ ವಹಿಸಬೇಕು. ನ್ಯಾಯಾಲಯದ ಕೆಲಸ ಕಾರ್ಯಗಳು ಸದ್ಯಕ್ಕೆ ಮುಕ್ತಾಗೊಳ್ಳದು.
ಕರ್ಕ: ಕಾರ್ಯರಂಗದಲ್ಲಿ ದುಡಿಮೆ ಹೆಚ್ಚಿ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಬೇಕಾದಿತು. ದೈವಾನುಗ್ರಹ ಇರುವ ಕಾರಣ ಅನಿರಿಕ್ಷಿತ ರೀತಿಯಲ್ಲಿ ಕೆಲಸ ಕಾರ್ಯಗಳು ನಡೆದು ಅಚ್ಚರಿ ತಂದಾವು. ದಿನಾಂತ ಶುಭವಿದೆ.
ಸಿಂಹ: ಶನಿಯ ದೈವಾನುಗ್ರಹದಿಂದ ವ್ಯಾಪಾರ ವ್ಯವಹಾರಗಳು ಸುಸ್ಥಿತಿಯಲ್ಲಿ ಮುಂದುವರಿದು, ಆರ್ಥಿಕ ಸ್ಥಿತಿಯಲ್ಲಿ ಹೆಚ್ಚಿನ ಸಮಾಧಾನವಿರುತ್ತದೆ. ಇಷ್ಟಮಿತ್ರರ ಪ್ರೀತಿ, ಸಹಕಾರ ಮನೋಭಾವನೆಗಳಿಂದ ಸಂತೋಷವಿದೆ.
ಕನ್ಯಾ: ಬೇಡಿಕೆ, ಈಡೇರಿಕೆಗಳ ತಾಕಲಾಟದಿಂದ ಮನಸ್ಸಿಗೆ ಕಿರಿಕಿರಿ ತೋರಿಬಂದೀತು. ಸತ್ಕಾರ ಆದಿಗಳಿಗೆ ಧನವ್ಯಯವಾದರೂ ಸಂತೃಪ್ತಿ ದೊರಕಲಿದೆ. ಗೃಹದಲ್ಲಿ ಶುಮಂಗಲ ಚಿಂತೆಯೂ ಕಾಡಲಿದೆ.
ತುಲಾ: ವ್ಯಾಪಾರ ವ್ಯವಹಾರದಲ್ಲಿ ಹೊಸ ಹೂಡಿಕೆ ಅಲ್ಪ ಸ್ವಲ್ಪ ಆದಾಯವನ್ನು ಹೆಚ್ಚಿಸಲಿದೆ. ಪತ್ನಿಯ ಆರೋಗ್ಯದ ಬಗ್ಗೆ ಗಮನವಿರಲಿ. ಆಗಾಗ ತೋರಿಬರುವ ಅನಿಷ್ಟಗಳನ್ನೆದುರಿಸುವ ಎದೆಗಾರಿಕೆ ತೋರಿಸಿರಿ.
ವೃಶ್ಚಿಕ: ಮುಖ್ಯವಾಗಿ ಸಾಂಸಾರಿಕವಾಗಿ ಹಿರಿಯರ ಸೂಕ್ತ ಸಲಹೆಗಳಿಗೆ ಕಿವಿಗೊಡಿ. ಮನೆಯಲ್ಲಿ ಅತಿಥಿಗಳ ಆಗಮನ ಸಂತಸ ತಂದೀತು. ನೂತನ ಬಾಂಧವ್ಯ ನೆಮ್ಮದಿ ತರಲಿದೆ. ಸಂಚಾರದಲ್ಲಿ ಜಾಗೃತೆ ಇರಲಿ.
ಧನು: ಆಶಾದಾಯಕವಾಗಿ ಮುಂದುವರಿಯಲು ಸಾಧ್ಯವಾಗುತ್ತದೆ. ವೃತ್ತಿರಂಗದಲ್ಲಿ ಚೇತರಿಕೆಯ ದಿನಗಳಾಗಿ ನೆಮ್ಮದಿ ಕಂಡೀತು. ನಡೆ ನುಡಿ ನೇರವಿದ್ದು ನಿಮ್ಮ ಗಮನದಲ್ಲಿರಿಸಿಕೊಳ್ಳಿ. ಉದ್ಯೋಗಿಗಳಿಗೆ ವರ್ಗಾವಣೆ ಇದೆ.
ಮಕರ: ನಿರುದ್ಯೋಗಿಗಳಿಗೆ, ಅವಿವಾಹಿತರಿಗೆ, ವಿದ್ಯಾರ್ಥಿಗಳಿಗೆ ಅಭಿವೃದ್ಧಿ ಗೋಚರಕ್ಕೆ ಬರುವುದು. ಸಾಂಸಾರಿಕವಾಗಿ ಕೂಡ ನೆಮ್ಮದಿಯ ವಾತಾವರಣ ಸಂತೋಷ ತಂದೀತು. ಯೋಗ್ಯರಿಗೆ ಕಂಕಣ ಬಲವಿದೆ.
ಕುಂಭ: ಕೆಲಸ ಕಾರ್ಯಗಳು ಸರಿಯಾಗಿ ನಡೆಯದೇ ಕೋಪ ತಾಪಗಳು, ಉದ್ವೇಗಕ್ಕೆ ಕಾರಣವಾಗಲಿದೆ. ಕಳೆದುದ್ದನ್ನು ಗಳಿಸಲು ಸಮಯವಿದು. ಸದುಪಯೋಗಪಡಿಸಿಕೊಳ್ಳಿರಿ. ದೂರ ಸಂಚಾರದಲ್ಲಿ ಜಾಗೃತಿ ವಹಿಸುವುದು.
ಮೀನ: ಕಾರ್ಯರಂಗದಲ್ಲಿ ದುಡಿಮೆ ಹೆಚ್ಚಿ ಆರೋಗ್ಯದ ಮೇಲೆ ಹೆಚ್ಚಿನ ಗಮನ ನೀಡಬೇಕಾದಿತು. ದುಂದುವೆಚ್ಚ ಒಮ್ಮೊಮ್ಮೆ ಆತಂಕಕ್ಕೆ ಕಾರಣವಾಗುತ್ತದೆ. ಅನಿರಿಕ್ಷಿತವಾಗಿ ವಾಹನ ಖರೀದಿ ಕಾರ್ಯಗತವಾದೀತು.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ, ಮಹೇಶ್ ಭಟ್ ಗುರೂಜಿ, 9686999517,
ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರುಕಾಟ, ಪ್ರೀತಿಯಲ್ಲಿ ನಂಬಿ ಮೋಸ, ಆರೋಗ್ಯ, ಹಣಕಾಸು ಮದುವೆ,ಸಂತಾನ, ಪ್ರೇಮ ವಿವಾಹ, ಮಾಟ- ಮಂತ್ರ ದೋಷ ನಿವಾರಣೆ, ಇನ್ನಿತರ ಯಾವುದೇ ಸಮಸ್ಯೆ ಇದ್ದರೂ ಕರೆ ಮಾಡಿ.