ಮನುಷ್ಯನ ದೇಹದಲ್ಲಿ ಹಿಮೋಗ್ಲೋಬಿನ್ ಅಂಶ ಯಾವಾಗ ಕಡಿಮೆಯಾಗತ್ತೋ ಆ ವೇಳೆ ಮನುಷ್ಯ ಅನಾರೋಗ್ಯಕ್ಕೆ ತುತ್ತಾಗ್ತಾನೆ. ಹಾಗಾಗಿ ಹಿಮೋಗ್ಲೋಬಿನ್ ಹೆಚ್ಚು- ಕಡಿಮೆ ಆಗದಂತೆ ಇರಲು ಕೆಲ ಹಣ್ಣು ತರಕಾರಿಗಳನ್ನ ತಿನ್ನಬೇಕು. ಅದು ಯಾವ ಹಣ್ಣು ತರಕಾರಿ ಅನ್ನೋದನ್ನ ನೋಡೋಣ ಬನ್ನಿ..

ಬೀಟ್‌ರೂಟ್: ಬೀಟ್ರೂಟ್ ತಿನ್ನುವುದರಿಂದ ನಮ್ಮ ದೇಹದಲ್ಲಿ ರಕ್ತದ ಪ್ರಮಾಣ ಸಮತೋಲನದಲ್ಲಿರುತ್ತದೆ. ಇದರಿಂದ ಹಿಮೋಗ್ಲೋಬಿನ್ ಪ್ರಮಾಣದಲ್ಲಿ ಏರುಪೇರಾಗುವುದಿಲ್ಲ. ಅಲ್ಲದೇ, ಬೀಟ್‌ರೂಟ್ ಹೃದಯದ ಆರೋಗ್ಯಕ್ಕೂ ಒಳ್ಳೆಯದು.
ಪಾಲಕ್: ಪಾಲಕ್ ಎಲೆಯಲ್ಲಿ ಹೆಚ್ಚಿ ಪ್ರಮಾಣದಲ್ಲಿ ಐರನ್ ಅಂಶ ಇರುತ್ತದೆ. ಪಾಲಕ್ ಜ್ಯೂಸ್ ಕುಡಿಯುವುದರಿಂದ ದೇಹದಲ್ಲಿ ರಕ್ತ ಪ್ರಮಾಣ ಹೆಚ್ಚುತ್ತದೆ, ಮತ್ತು ಹಿಮೋಗ್ಲೋಬಿನ್ ಪ್ರಮಾಣವೂ ಹೆಚ್ಚುತ್ತದೆ.
ನಿಂಬೆಹಣ್ಣು: ದೇಹದಲ್ಲಿ ಹಿಮೋಗ್ಲೋಬಿನ್ ಅಂಶ ಹೆಚ್ಚಿಸುವುದರಲ್ಲಿ ನಿಂಬೆಹಣ್ಣು ಸಹಕಾರಿಯಾಗಿದೆ. ನಿಯಮಿತವಾಗಿ ಇದರ ಬಳಕೆ ಮಾಡುವುದರಿಂದ, ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚುತ್ತದೆ.
ಸೇಬುಹಣ್ಣು ಮತ್ತು ಪಪ್ಪಾಯಿ ಹಣ್ಣು: ಈ ಎರಡೂ ಹಣ್ಣುಗಳಲ್ಲಿ ವಿಟಾಮಿನ್ ಸಿ ಅಂಶ ಇರುತ್ತದೆ. ಇದು ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಪಪ್ಪಾಯಿ ಮತ್ತು ಸೇಬು ಹಣ್ಣಿನ ಜ್ಯೂಸ್ ಮಾಡಿ ಕುಡಿಯುವ ಬದಲು ಹಾಗೇ ಹಣ್ಣನ್ನ ಸೇವಿಸಿದರೆ ಉತ್ತಮ.
ಹಾಲು: ಪ್ರತಿದಿನ ಹಾಲು ಸೇವಿಸಬೇಕು ಇದು ನಿಮ್ಮ ದೇಹದಲ್ಲಿ ಶಕ್ತಿ ತುಂಬಲು ಸಹಕಾರಿಯಾಗಿದೆ.
ದಾಳಿಂಬೆ ಹಣ್ಣು: ಹಿಮೋಗ್ಲೋಬಿನ್ ಪ್ರಮಾಣ ಸಮ ಪ್ರಮಾಣದಲ್ಲಿರಲು ದಾಳಿಂಬೆಹಣ್ಣನ್ನು ಸೇವಿಸಿ.
ಈ ಎಲ್ಲ ಹಣ್ಣು ತರಕಾರಿ ಸೇವನೆಯೊಂದಿಗೆ ಯತೇಚ್ಛವಾಗಿ ನೀರಿನ ಸೇವನೆ ಮಾಡಿ, ಏಕೆಂದರೆ ಆರೋಗ್ಯ ಅಭಿವೃದ್ಧಿಯಾಗಲು ಶುದ್ಧ ನೀರು ಸಹಕಾರಿಯಾಗಿದೆ.
ಇನ್ನು ಈ ಎಲ್ಲ ಆಹಾರಗಳನ್ನು ತಿಂದರೂ ನಿಮ್ಮ ಆರೋಗ್ಯ ಸುಧಾರಿಸದಿದ್ದಲ್ಲಿ ನಿರ್ಲಕ್ಷ್ಯ ತೋರದೆ ವೈದ್ಯರ ಬಳಿ ತೋರಿಸಿ.
ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.