Thursday, May 30, 2024

Latest Posts

ಕನ್ನಡ ಎಲ್ಲಾ ಸ್ಟಾರ್ಸ್ ಬಗ್ಗೆ ಮಾತನಾಡಿ ಜೂನಿಯರ್ ರಾಕಿ..

- Advertisement -

ಜೂನಿಯರ್ ರಾಕಿ ಭಾಯ್ ಅನ್ಮೋಲ್ ವಿಜಯ್ ಭಟ್ಕಳ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ಕನ್ನಡದ ಸ್ಟಾರ್ಸ್ ಬಗ್ಗೆ ಮಾತನಾಡಿದ್ದಾರೆ. ಯಶ್, ಶಿವಣ್ಣ, ದಚ್ಚು, ಉಪ್ಪಿ ಸೇರಿ ಇನ್ನೂ ಹಲವರಿಗೆ ಒಂದೊಂದು ಕ್ವಾಲಿಟಿ ಕದಿತೀನಿ ಅಂತಾ ಹೇಳಿರುವ ಅನ್ಮೋಲ್‌ಗೆ ಈ ನಟರ ಯಾವ ಕ್ವಾಲಿಟಿ ಇಷ್ಟ ಅಂತಾ ತಿಳಿಯೋಣ ಬನ್ನಿ..

ಯಶ್‌: ಯಶ್ ಅವರ ವಾಕಿಂಗ್ ಸ್ಟೈಲ್ ಇಷ್ಟ.

ಅಪ್ಪು: ಡಾನ್ಸಿಂಗ್ ಚಾಂಪಿಯನ್‌ನಲ್ಲಿ ವಿನ್ ಆದಾಗ, ಅಪ್ಪು ಸರ್ ಪೋಸ್ ಇರುವ ಟ್ರೋಫಿ ಗೆದ್ದಿದ್ದೆ. ಆಗ ತುಂಬಾ ಖುಷಿಯಾಗಿತ್ತು. ಅವ್ರನ್ನ ನಾನು ನಿನ್ನಿಂದಲೇ ಸಿನಿಮಾ ಶೂಟ್ ಟೈಮಲ್ಲಿ ಮೀಟ್ ಮಾಡಿದ್ದೆ. ಆ ಸಿನಿಮಾದಲ್ಲಿ ಅವರ ಫ್ಯಾಮಿಲಿ ಮೆಂಬರ್ ಆಗಿ ಆ್ಯಕ್ಟ್ ಮಾಡಿದ್ದೆ. ಅಪ್ಪು ಸರ್ ಅವರ ಸ್ಮೈಲ್ ಇಷ್ಟಾ.

ದರ್ಶನ್: ದರ್ಶನ್ ಸರ್ ಅವರ ರಗಡ್ ಲುಕ್ ಇಷ್ಟಾ.

ಸುದೀಪ್: ಸುದೀಪ್ ಸರಿಂದ ನಾನು ನಟನೆ ಕಲಿಲಿಕ್ಕೆ ಇಷ್ಟ ಪಡ್ತೇನೆ. ಅವರು ಎಲ್ಲ ರೀತಿಯ ನಟನೆ ಮಾಡ್ತಾರೆ. ಹಿರೋ, ವಿಲನ್ ಎಲ್ಲ ರೀತಿಯ ನಟನೆ ಮಾಡ್ತಾರೆ. ಹಾಗಾಗಿ ಅವರ ನಟನಾ ಕ್ವಾಲಿಟಿ ಇಷ್ಟ.

ಶಿವಣ್ಣ: ಅವರ ಸ್ಟೈಲ್ ಚೆನ್ನಾಗಿದೆ. ಅವರ ಸ್ಟೈಲ್‌ನಾ ಬೇರೆ ಯಾರೂ ಚೆನ್ನಾಗಿ ಮಾಡಲು ಸಾಧ್ಯವಿಲ್ಲಾ.

ಉಪೇಂದ್ರ: ಉಪೇಂದ್ರ ಸರ್ ನಟನೆ ಇಷ್ಟ.

ಧ್ರುವ ಸರ್ಜಾ: ಧ್ರುವ ಸರ್ಜಾ ಅವರಿಂದ ಮಾಸ್ ಆ್ಯಕ್ಷನ್ಸ್ ಕಲಿಯೋಕ್ಕೆ ಇಷ್ಟಪಡ್ತೀನಿ.

ಶ್ರೀಮುರುಳಿ: ಶ್ರೀಮುರುಳಿಯವರ ವಾಯ್ಸ್ ಇಷ್ಟ.

ಇನ್ನು ನಿಮ್ಮ ಫೇವರಿಟ್ ಹಿರೋಯಿನ್ ಯಾರು ಅಂತಾ ಕೇಳಿದ್ದಕ್ಕೆ, ರಾಧಿಕಾ ಪಂಡಿತ್ ಅಂದಿರುವ ಅನ್ಮೋಲ್, ಒಟ್ಟಾರೆಯಾಗಿ ನನ್ನ ಫೇವರಿಟ್ ರಾಕಿಂಗ್ ಕಪಲ್ ಅಂತಾ ಹೇಳಿದ್ದಾರೆ.

- Advertisement -

Latest Posts

Don't Miss