ಸ್ಯಾಂಡಲ್‌ವುಡ್ ನಟಿ ರಮ್ಯಾಗೆ ಕಮೆಂಟ್ ಮಾಡಿದ್ದಕ್ಕೆ 12 ಜನರನ್ನ ಅರೆಸ್ಟ್ ಮಾಡಿದ್ದಾರೆ. ಧರ್ಮಸ್ಥಳ ಕೇಸ್‌ನಲ್ಲಿ ಯಾಕಿಲ್ಲ? ಧರ್ಮಸ್ಥಳ ಕ್ಷೇತ್ರದ ಬಗ್ಗೆ ಯೂಟ್ಯೂಬ್ ಚಾನೆಲ್‌ಗಳಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಬಳಸಿ ಅವಹೇಳನಕಾರಿ ವಿಡಿಯೋ ಮಾಡ್ತಾರೆ. ತಪ್ಪು ವಿಷಯಗಳನ್ನು ಸೃಷ್ಟಿಸಿ ಪ್ರಸಾರ ಮಾಡಿದ್ದಾರೆ. ಹೀಗೆ ಮಾಡಿದವರವನ್ನ ಎಷ್ಟು ಜನರನ್ನು ಬಂಧಿಸಲಾಗಿದೆ? ಎಷ್ಟು ಮಂದಿ ಜೈಲಿನಲ್ಲಿ ಇದ್ದಾರೆ? ಅಂತ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಪ್ರಶ್ನಿಸಿದ್ದಾರೆ.
ನಟಿ ರಮ್ಯಾ ವಿರುದ್ಧ ಅವಾಚ್ಯ ಶಬ್ದ ಬಳಕೆ ಮಾಡಿದ್ದಕ್ಕಾಗಿ 12 ಜನರನ್ನು ಬಂಧಿಸಲಾಗಿದೆ. ಧರ್ಮಸ್ಥಳ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವಾಗ ಸರ್ಕಾರ ಮಧ್ಯೆ ಪ್ರವೇಶ ಮಾಡಬೇಕಿತ್ತಲ್ವಾ? ಇದೇ ರೀತಿ ಧರ್ಮಸ್ಥಳದ ಕುರಿತು ಅವಹೇಳನಕಾರಿ ವಿಡಿಯೋಗಳನ್ನು ತಯಾರಿಸಿ ಹರಡಿದವರ ಬಗ್ಗೆ ಕೂಡ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಿಟಿ ರವಿ ತಿಳಿಸಿದ್ದಾರೆ.
ಇದೇ ಹಿನ್ನೆಲೆಯಲ್ಲಿ, ಒಂದೊಂದು ದೂರುದಾರರ ಹಿನ್ನೆಲೆಯನ್ನು ಪರಿಶೀಲನೆ ಮಾಡದೇ ಇತರ ವಿಷಯಗಳನ್ನು ರಾಜಕೀಯ ಮಾಡುವ ಪ್ರವರ್ತನೆ ಸರಿಯಲ್ಲ ಎಂದು ಸಿಟಿ ರವಿ ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ.
ಒಬ್ಬ ದೂರುದಾರನ ಹಿನ್ನೆಲೆ ಏನು ಎಂಬುದನ್ನು ಪರಿಶೀಲನೆ ಮಾಡದೇ 15-16 ಕಡೆ ಭೂಮಿ ಅಗೆದರಲ್ಲ ಅದು ರಾಜಕೀಯ. ಚೆನ್ನೈಯಿಂದ, ವಿದೇಶದಿಂದ ದುಡ್ಡು ಬಂದಿದೆ. ಕಾಂಗ್ರೆಸ್ನ ಸಂಸತ್ತು ಸದಸ್ಯರೊಬ್ಬರು ಇದನ್ನು ಡೈರೆಕ್ಟ್ ಮಾಡಿದ್ದಾನೆ. ಮಾಸ್ಟರ್ ಪ್ಲಾನ್ ಮಾಡಿದ್ದಾರೆ ಎನ್ನುವುದು ಸುದ್ದಿ.
ಪೊಲೀಸರ ಬಗ್ಗೆ ನನ್ನ ಸಂಪೂರ್ಣ ಭರವಸೆ ಇದೆ. ಆದರೆ ಈ ಘಟನೆಯಲ್ಲಿ ನಿಮ್ಮ ಪಕ್ಷ ರಾಜಕಾರಣ ಮಾಡಬಾರದು. ನಾನು ದೂರುದಾರರ ಬಗ್ಗೆ ಪರಿಶೀಲನೆ ಮಾಡುವಂತೆ ಕೂಡ ನಾನೇ ಮುಂಚಿತವಾಗಿ ಹೇಳಿದ್ದೇನೆ ಎಂದು ಸಿಟಿ ರವಿ ಹೇಳಿದ್ದಾರೆ.
ವರದಿ : ಲಾವಣ್ಯ ಅನಿಗೋಳ

