International News : ಭಾರತದೊಂದಿಗಿನ ಕಿರಿಕಿರಿ ನಡುವೆ, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊಗೆ ಕೆಟ್ಟ ಸುದ್ದಿ ಬಂದಿದೆ. ಮುಂದಿನ ಸಾರ್ವತ್ರಿಕ ಚುನಾವಣೆ ಸಂಬಂಧ ಕೆನಡಾದ ಮಾಧ್ಯಮಗಳು ನಡೆಸಿದ ಸಮೀಕ್ಷೆಯಲ್ಲಿ, ಟ್ರೂಡೊ ಪ್ರಧಾನಿ ರೇಸ್‌ನಲ್ಲಿ ಹಿಂದುಳಿದಿದ್ದಾರೆ.
ಈ ಸಮೀಕ್ಷೆಯ ಪ್ರಕಾರ, ಕೆನಡಿಯನ್ನರು ಮುಂದಿನ ಚುನಾವಣೆಯಲ್ಲಿ ಪ್ರಧಾನ ಮಂತ್ರಿ ಹುದ್ದೆಗೆ ಟ್ರುಡೊ ಬದಲು ಪ್ರತಿಪಕ್ಷದ ನಾಯಕ ಪಿಯರೆ ಪೊಲಿಯವ್ರೆ ಮೇಲೆ ಹೆಚ್ಚು ಒಲವು ಹೊಂದಿದ್ದಾರಂತೆ.
ಕೆನಡಾದಲ್ಲಿ 2025ರಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯಲಿವೆ.
ಅದಕ್ಕೂ ಮುನ್ನ ಬಂದಿರುವ ಈ ಸಮೀಕ್ಷೆಯು ಟ್ರುಡೊ ಮತ್ತು ಅವರ ಲಿಬರಲ್ ಪಕ್ಷದ ಚಿಂತೆಯನ್ನು ಹೆಚ್ಚಿಸಲಿದೆ. IBSO ನಡೆಸಿದ ಸಮೀಕ್ಷೆಯು ಕೆನಡಿಯನ್ನರು ವಿರೋಧ ಪಕ್ಷದ ನಾಯಕ ಪಿಯರೆ ಪೊಲಿಯೆವ್ರೆಯನ್ನು ಆಯ್ಕೆ ಆಗಲಿ ಎಮದು ಬಯಸುತ್ತಿದ್ದಾರಂತೆ. ಅವ್ರ ಪರ 39% ಜನರು ವೋಟ್ ಮಾಡಿದ್ರೆ, ಟ್ರೂಡೊ ಪರ ಕೇವಲ 30% ಮತಗಳು ಚಲಾವಣೆಯಾಗಿವೆ.
ಇಲ್ಲಿವೆ ಕಂಪ್ಲೀಟ್ ವೀಡಿಯೋ………………………