Friday, April 11, 2025

Latest Posts

‘ನಾನು ಯಾರ ಬಿಂಬಿತ ಅಭ್ಯರ್ಥಿಯಲ್ಲ, ಎಲ್ಲಾರೂ ಒಪ್ಪಿದ್ರೆ ಅಭ್ಯರ್ಥಿ, ಇಲ್ಲಾದ್ರೆ ಯಾರ ಪರವಾಗಿಯೂ ಪ್ರಚಾರಕ್ಕೆ ಸಿದ್ಧ’

- Advertisement -

ಹಾಸನ: ನಾನು ಯಾರ ಬಿಂಬಿತ ಅಭ್ಯರ್ಥಿಯಲ್ಲ. ಜೆಡಿಎಸ್ ನಲ್ಲಿ ಎಲ್ಲಾರೂ ಒಪ್ಪಿಗೆ ನೀಡಿದ್ರೆ ಮಾತ್ರ ಸ್ಪರ್ದೆ ಮಾಡುತ್ತೇನೆ. ಆದ್ರೆ ನನ್ನ ಬಗ್ಗೆ ಒಂದೊಂದು ಹೇಳಿಕೆಗಳು ಕೇಳಿ ಬರುತ್ತಿದ್ದು, ನಾನು ಯಾರ ವಿರುದ್ಧವು ಇರುವುದಿಲ್ಲ. ಪಕ್ಷದಲ್ಲಿ ಸೂಚಿಸದ ಅಭ್ಯರ್ಥಿಗೆ ಪ್ರಚಾರ ಮಾಡುವುದಾಗಿ ಜೆಡಿಎಸ್ ಮುಖಂಡರಾದ ಕೆ.ಎಂ. ರಾಜೇಗೌಡ ತಮ್ಮ ಮನದಾಳದ ಮಾತುಗಳನ್ನು ಇದೆ ವೇಳೆ ಮಾಧ್ಯಮದೊಂದಿಗೆ ಹೇಳಿಕೊಂಡರು.

​ ​ ​ ​ ​ ಕುವೆಂಪು ನಗರ ಬಳಿ ಇರುವ ತಮ್ಮ ನಿವಾಸದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಹಾಸನ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಬಗ್ಗೆ ಅದರಲ್ಲೂ ನನ್ನ ಬಗ್ಗೆ ಒಂದೊಂದು ರೀತಿ ಹೇಳಿಕೆಗಳು ಬರುತ್ತಿದ್ದು, ಒಂದು ಕಡೆ ರೇವಣ್ಣರ ಅಭ್ಯರ್ಥಿ ರಾಜೇಗೌಡ, ಎಂದು ಪರವಾಗಿ ಮತ್ತು ವಿರೋಧವಾಗಿ ಇನ್ನೊಂದು ಕಡೆ ಬರುತ್ತಿದೆ. ಆದರೆ ನಾನು ಯಾರ ವಿರುದ್ಧವು ಇಲ್ಲ ಎಂದಿದ್ದಾರೆ.

ಅಲ್ಲದೇ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ನಮ್ಮ ಜೆಡಿಎಸ್ ಪಕ್ಷದ ಸರ್ವ ನಾಯಕರು. ದಿವಂಗತ ಹೆಚ್.ಎಸ್. ಪ್ರಕಾಶಣ್ಣನವರು ಇದ್ದಾಗ ದೇವೇಗೌಡರ ಜೊತೆ ನಮ್ಮ ಮನೆಗೆ ಬಂದಿದ್ದು, ಈ ಬಾರಿ ಪ್ರಕಾಶ್ ಅವರು ಹಾಸನದ ಅಭ್ಯರ್ಥಿ ಅವರಿಗೆ ಸಹಾಯ ಮಾಡಿ, ಮುಂದಿನ ಸಾರಿ ಪ್ರಕಾಶ್ ಅವರು ಸ್ಪರ್ದೆ ಮಾಡುವುದಿಲ್ಲ ಎಂದು ಅಶ್ವಾಸನೆ ನೀಡಿದ್ದರು. ಅವರ ಸಲಹೆಯಂತೆ ಪ್ರಕಾಶ್ ಪರ ಕೆಲಸ ಮಾಡಿದ್ದು, ಅಂದು ಗೆಲುವು ಪಡೆದಿದ್ದರು. ಇದಾದ ಮೇಲೆ 2018 ರಲ್ಲಿ ಮತ್ತೊಂದು ವಿಧಾನಸಭಾ ಚುನಾವಣೆ ಬಂದಿತ್ತು. ಈ ವೇಳೆ ಪ್ರಕಾಶ್ ಅವರ ಆರೋಗ್ಯ ಸರಿಯಾಗಿಲ್ಲ. ಈ ವೇಳೆ ಸೀಟು ತಪ್ಪಿಸಿದರೇ ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು, ಮಾನಸಿಕವಾಗಿ ಹಿಂಸೆ ಕೊಡುವುದು ಬೇಡ ಎಂದಾಗ ಅವರ ಆರೋಗ್ಯದ ಹಿತಾದೃಷ್ಠಿಯಲ್ಲಿ ಸಂಪೂರ್ಣ ಸಹಕಾರ ಕೊಟ್ಟಿದ್ದೇನು. ಈ ವೇಳೆ ಪರಜಿತರಾಗಿದ್ದರು ಎಂದಿದ್ದಾರೆ.

ಇನ್ನು ಈಗ 2023ರ ಚುನಾವಣೆ ಬಂದಿದ್ದು, ಈ ವೇಳೆ ಮಾಜಿ ಸಚಿವ ಹೆಚ್.ಡಿ. ರೇವಣ್ಣನವರು ಮತ್ತು ಭವಾನಿ ರೇವಣ್ಣನವರು ಹಾಸನ ಕ್ಷೇತ್ರಕ್ಕೆ ಅಭ್ಯರ್ಥಿ ಎಂದು ಪ್ರಸ್ತಾಪ ಬಂದಾಗ ಅವರು ಬಂದ್ರೆ ಇನ್ನು ಒಳ್ಳೆಯದು. ಅವರಿಂದ ಇನ್ನು ಹೆಚ್ಚಿನ ಅಭಿವೃದ್ಧಿ ಆಗುತ್ತದೆ. ನನಗೆ ಕ್ಷೇತ್ರದ ಅಭಿವೃದ್ಧಿ ಆಗುವುದು ಮುಖ್ಯ ಎಂದು ನಾನು ತಟಸ್ಥವಾಗಿದ್ದು, ಯಾವ ಟಿಕೆಟ್ ಕೇಳಿರಲಿಲ್ಲ. ನಂತರದಲ್ಲಿ ಬೆಳವಣಿಗೆಗಳು ನಡೆದಿದೆ. ವರಿಷ್ಠರಾದ ಹೆಚ್.ಡಿ. ದೇವೇಗೌಡರು ಮತ್ತು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ಕೇಳಿ ಹಾಸನದಲ್ಲಿ ಟಿಕೆಟ್ ವಿಚಾರದಲ್ಲಿ ಸಲ್ಪ ಗೊಂದಲಗಳು ಸೃಷ್ಠಿಯಾಗಿದ್ದು, ಈ ಕ್ಷೇತ್ರದಲ್ಲಿ ಗೆಲುವು ಪಡೆಯಲು ಏನಾದರೂ ಒಂದು ಒಗ್ಗಟ್ಟು ಸೃಷ್ಠಿ ಮಾಡಬೇಕು.

ಈ ಚುನಾವಣೆಯಲ್ಲಿ ಭ್ರಷ್ಠಾಚಾರದ ಹಣದಲ್ಲಿ ಹೊಳೆಯೇ ಹರಿಸುತ್ತಿದ್ದಾರೆ. ಕೆಲ ಅಕ್ರಮಗಳು ಬೇಕಾದಷ್ಟು ನಡೆಯುತ್ತಿದೆ. ನಾವೆಲ್ಲಾ ಜಾಗೃತರಾಗಿ ಒಟ್ಟಾಗಿ ಕೆಲಸ ಮಾಡಿದರೇ ಅನುಕೂಲವಾಗುತ್ತದೆ ಎಂದಿದ್ದರು. ಆಗ ನಾನು ಪಕ್ಷದಿಂದ ಟಿಕೆಟ್ ಯಾರಿಗಾದರೂ ಕೊಡಿ ಅಭ್ಯಂತರವಿಲ್ಲ. ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರಲು ಯಾವ ಶ್ರಮ ಆಗುವುದಿಲ್ಲ. ಗೆಲ್ಲಿಸಿಕೊಂಡು ಬರುತ್ತೇನೆ ಎಂದು ವ್ಯಕ್ತಪಡಿಸಿದೆ ಎಂದು ಹೇಳಿದರು. ಈ ವೇಳೆ ನನ್ನ ಹೆಸರು ಪ್ರಸ್ತಾಪಗೊಂಡಿರುವುದರಿಂದ ನಿಮಗೆ ಆಸಕ್ತಿ ಇದಿಯಾ ಎಂದು ಕೇಳಿದರು. ಈ ಹಿಂದೆ ಅಭ್ಯರ್ಥಿ ಆಗುವಂತೆ ಎರಡು ಬಾರಿ ಆಶ್ವಾಸನೆ ಕೊಡಲಾಗಿದ್ದು, ಏನು ಸನ್ನಿವೇಶ ಸಂದರ್ಭಕ್ಕೆ ಅವಕಾಶ ತಪ್ಪಿಹೋಗಿತ್ತು. ನೀವೆಲ್ಲಾ ಒಟ್ಟಾಗಿ ಕೆಲಸ ಮಾಡುವುದಾದರೇ ನಾನು ಅಭ್ಯರ್ಥಿ ಆಗುತ್ತೇನೆ ಎಂದು ಉತ್ತರಿಸಿದೆ. ನಾನು ಯಾರ ಬಿಂಬಿತ ಅಭ್ಯರ್ಥಿಯಲ್ಲ. ಎಲ್ಲಾರು ಒಟ್ಟಾಗಿ ಸೇರಿ ಮೂರು ಜನ ವರಿಷ್ಠರು ತೀರ್ಮಾನಿಸುವುದಾಗ ಬದ್ಧರಾಗಿರುತ್ತೀರಾ ಎಂದು ಕೇಳಿದಾಗ ಒಪ್ಪಿಗೆ ಕೊಟ್ಟಿದ್ದೇನೆ ಅಷ್ಟೆ.

​ ​ ​ ​ ​ ​ ಈಗಲು ನಾನು ಹೇಳವುದು ಒಂದೆ ಜೆಡಿಎಸ್ ನಿಂದ ಹಾಸನ ಕ್ಷೇತ್ರದಲ್ಲಿ ಯಾರೆ ಅಭ್ಯರ್ಥಿಯಾದರೂ ಕೆಲಸ ಮಾಡಲು ನಾನು ಸಿದ್ಧ. ಚುನಾವಣೆಯಲ್ಲಿ ಜೆಡಿಎಸ ಅಧಿಕೃತ ಅಭ್ಯರ್ಥಿಯಾಗಿ ಘೋಷಣೆ ಆಗುವವರೆಗೂ ನಾನು ಯಾರಿಗೂ ಪ್ರಚಾರ ಮಾಡುವುದಕ್ಕೆ ಹೋಗುವುದಿಲ್ಲ. ನಮ್ಮ ಪಕ್ಷದಲ್ಲಿ ಒಗ್ಗಟ್ಟಾಗಿರಬೇಕು. ಒಟ್ಟಾಗಿ ಹೋಗಬೇಕು ಎಂಬುದು ನನ್ನ ಅಪೇಕ್ಷೆ. ಕೆಲ ದಿನಗಳ ಹಿಂದೆ ಹೆಚ್.ಡಿ. ರೇವಣ್ಣನವರು ನಮ್ಮ ಮನೆಗೆ ಬಂದಾಗ ಸೀಟಿನ ಪ್ರಸ್ತಾಪ ಬಂದು ನನ್ನ ಜೊತೆ ಚರ್ಚಿಸಿದರು. ನಾವು ಒಗ್ಗಟ್ಟಾಗಿ ಮೂರು ಜನ ತೀರ್ಮಾನಿಸುತ್ತೇವೆ. ಅದಕ್ಕೆ ಒಪ್ಪಿಕೊಂಡು ಗೆಲ್ಲಿಸಬೇಕು. ನನ್ನ ಹೆಸರು ಕೂಡ ಪ್ರಸ್ತಾಪ ಮಾಡಿರುವುದಾಗಿ ಹೇಳಿದರು. ಜೆಡಿಎಸ್ ನಲ್ಲಿ ಎಲ್ಲಾರು ಒಪ್ಪಿ ನನ್ನ ಹೆಸರು ಬಂದರೇ ಸ್ಪರ್ದೆ ಮಾಡುತ್ತೇನೆ. ಮತ್ತೆ ಯಾರ ಹೆಸರು ಸೂಚಿಸಿದರೂ ನಾನು ಪ್ರಚಾರ ಮಾಡುವುದಾಗಿ ತಮ್ಮ ನಿರ್ಧಾರ ತಿಳಿಸಿದರು. ದಿವಂಗತ ಹೆಚ್.ಎಸ್. ಪ್ರಕಾಶ್ ಅವರ ಪುತ್ರ ಈ ಹಿಂದೆ ನನ್ನ ಜೊತೆ ಸಂಪರ್ಕದಲ್ಲಿದ್ದು, ರೇವಣ್ಣರವರಿಗೆ ನನ್ನ ಹೆಸರು ಪ್ರಸ್ತಾಪ ಮಾಡುವಂತೆ ಹೇಳಲಾಗಿತ್ತು. ಈ ವೇಳೆ ನಾನು ಊರಲ್ಲಿ ಇರಲಿಲ್ಲ. ಹೊರಗೆ ಇದ್ದೆನು. ಅಂದಿನಿಂದ ನಾನು ಇದುವರೆಗೂ ರೇವಣ್ಣ ಅವರನ್ನು ನೋಡುವುದಕ್ಕೆ ಹೋಗಿರುವುದಿಲ್ಲ. ಮುಂದೆ ಮಾತನಾಡುತ್ತೇನೆ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ವಿಶ್ವಾಸ ವ್ಯಕ್ತಪಡಿಸಿದರು.

ಜಗ್ಗೇಶ್ ನಟನೆಯ “ರಾಘವೇಂದ್ರ ಸ್ಟೋರ್” ಚಿತ್ರಮಂದಿರಕ್ಕೆ ಏಪ್ರಿಲ್ 28 ರಂದು

ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಬಗ್ಗೆ ಟಿಕೇಟ್ ಆಕಾಂಕ್ಷಿ ಶ್ರೀನಿವಾಸ್ ಹೇಳಿಕೆ..

‘ಅಲ್ಲಿ ಸಲ್ಲದವರು ಎಲ್ಲಿಯೂ ಸಲ್ಲುವುದಿಲ್ಲ ಎಂಬಂತೆ ಸಿದ್ದರಾಮಯ್ಯ ಪರಿಸ್ಥಿತಿ ಆಗಿದೆ‌’

- Advertisement -

Latest Posts

Don't Miss