Hassan News: ಹಾಸನ: ಹಾಸನದಲ್ಲಿ ಕಾಡಾನೆಯೊಂದು ಕಾಫಿ ತೋಟಕ್ಕೆ ನುಗ್ದಿದ್ದು, ಸಿಕ್ಕ ಸಿಕ್ಕವರನ್ನೆಲ್ಲಾ ಅಟ್ಟಾಡಿಸಿಕೊಂಡು ಹೋಗಿದೆ. ಕಾಡಾನೆ ಹೆಣ್ಣಾನೆಯಾಗಿದ್ದು, ಜನರು ಎದ್ದು, ಬಿದ್ದು ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ.
ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ, ಚೀಕನಹಳ್ಳಿ-ಕೈಮರ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಚೀಕನಹಳ್ಳಿ-ಕೈಮರ ರಸ್ತೆ ಪಕ್ಕದಲ್ಲಿರುವ ಗ್ರೋವರ್ಸ್ ಕೆಫೆಗೆ ಆನೆ ನುಗ್ಗಿದೆ. ಅಷ್ಟು ಹೊತ್ತು ಕಾಫಿ ಸವಿಯುತ್ತ ಬಿಂದಾಸ್ ಆಗಿದ್ದ ಜನ, ಕಾಡಾನೆ ಕಂಡು ದಿಕ್ಕಾಪಾಲಾಗಿ ಓಡಿದ್ದಾರೆ. ಇನ್ನು ಕೆಲವರು ಆನೆ ಬಂದಿದ್ದನ್ನು ಕಂಡು, ಕಾರಿನಲ್ಲಿ ಹೋಗಿ ಕುಳಿತಿದ್ದಾರೆ. ಇನ್ನು ಈ ಎಲ್ಲ ದೃಶ್ಯಗಳು ಸ್ಥಳದಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇನ್ನು ಮಲೆನಾಡಿನಲ್ಲಿ ಆನೆಗಳ ಹಾವಳಿ ಹೆಚ್ಚಾಗಿದ್ದು, ಕಾಡಾನೆಗಳು ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡುತ್ತಿದೆ. ಆದರೆ ಅರಣ್ಯ ಇಲಾಖೆ ಮಾತ್ರ ಇದನ್ನ ಸಿರಿಯಸ್ ಆಗಿ ತೆಗೆದುಕೊಳ್ಳುತ್ತಿರುವಂತೆ ಕಾಣುತ್ತಿಲ್ಲ. ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯದ ಅರಣ್ಯ ಇಲಾಖೆ ಹಾಗೂ ಸರ್ಕಾರದ ವಿರುದ್ಧ ಇಲ್ಲಿನ ಜನರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
FIRನಲ್ಲಿ ನಾಸೀರ್ ಹುಸೇನ್ ಹೆಸರು ಸೇರಿಸಬೇಕು: ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ
ಹುಬ್ಬಳ್ಳಿಯ ಬಸವೇಶ್ವರ ಖಾನಾವಳಿಯಲ್ಲಿ ಹೋಳಿಗೆ ಊಟ ಸವಿದ ನಿರ್ದೇಶಕ ಯೋಗರಾಜ್ ಭಟ್