Tuesday, April 22, 2025

Latest Posts

“ಕಂಡ್ಹಿಡಿ ನೋಡನ”ಅಂತಿದ್ದಾರೆ ನಿರ್ದೇಶಕ ನಾಗೇಂದ್ರ ಅರಸ್..!

- Advertisement -

“ಕಂಡ್ಹಿಡಿ ನೋಡನ”ಅಂತಿದ್ದಾರೆ ನಾಗೇಂದ್ರ ಅರಸ್..!

“ಸೈಕೋ ಶಂಕರ” ಮ‌ೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸಿದ ಪ್ರಣವ ಸೂರ್ಯ ನಾಯಕರಾಗಿ ನಟಿಸಿರುವ, ನಾಗೇಂದ್ರ ಅರಸ್ ನಿರ್ದೇಶನದ “ಕಂಡ್ಹಿಡಿ ನೋಡನ” ಚಿತ್ರದ ಪತ್ರಿಕಾಗೋಷ್ಠಿ ಇತ್ತೀಚೆಗೆ ನಡೆಯಿತು. ಚಿತ್ರತಂಡ ಮಾಧ್ಯಮದ ಮುಂದೆ ಚಿತ್ರದ ಕುರಿತು ಮಾತನಾಡಿತ್ತು.

ನಾನು ಪ್ರಣವ್ ಸೂರ್ಯ ಅವರ ಮ್ಯಾನ್ ಲಿಯೋ ಸ್ಟುಡಿಯೋದಲ್ಲಿ ಹೀಗೆ ಮಾತನಾಡುತ್ತಿರುವಾಗ ಆರಂಭವಾದ ಚಿತ್ರವಿದು. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರವಿದೆ‌. ಚಿತ್ರದಲ್ಲಿ ಮೂರು ತಿರುವುಗಳಿದೆ. ಯಾರು ಊಹಿಸಲಾಗದ ಕ್ಲೈಮ್ಯಾಕ್ಸ್ ‌ಸಹ ಇದೆ. ಚಿತ್ರ ಮೇ ನಲ್ಲಿ ತೆರೆಗೆ ಬರುತ್ತಿದೆ ಎಂದ ನಿರ್ದೇಶಕ ನಾಗೇಂದ್ರ ಅರಸ್, ತಾವು ಈ ಚಿತ್ರದಲ್ಲಿ ನಟಿಸಿರುದಾಗಿ ತಿಳಿಸಿದರು.

“ಸೈಕೋ ಶಂಕರ” ನನಗೆ ಅಂದುಕೊಂಡ ಯಶಸ್ಸು ತಂದುಕೊಡಲಿಲ್ಲ. ಈಗ ವಿಭಿನ್ನ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ನಟಿಸಿದ್ದೇನೆ. ಕಥೆ ತುಂಬಾ ಚೆನ್ನಾಗಿದೆ. ಕ್ಲೈಮ್ಯಾಕ್ಸ್ ನೋಡಿದವರು ಅಚ್ಚರಿಯಾಗುವುದಂತು ಖಚಿತ. ಇದು ತಂತ್ರಜ್ಞರೆ ಸೇರಿ ಮಾಡಿರುವ ಸಿನಿಮಾ ಅಂದರೆ ತಪ್ಪಾಗಲಾರದು. ನಾನು ಮ್ಯಾನ್ ಲಿಯೋ ಸ್ಟುಡಿಯೋ ನಡೆಸುತ್ತಿದ್ದೇನೆ. ನಾಗೇಂದ್ರ ಅರಸ್ ಸಂಕಲನಕಾರರು ಹೌದು. ಶ್ರೀಧರ್ ಕಶ್ಯಪ್ ಅವರಿಗೆ ಸಂಗೀತ ಕ್ಷೇತ್ರದಲ್ಲಿ ಅನುಭವವಿದೆ. ಹೀಗೆ ಹಲವು ತಂತ್ರಜ್ಞರ ಹಾಗೂ ಕಲಾವಿದರ ಸಮಾಗಮದಲ್ಲಿ ಈ ಚಿತ್ರ ಚೆನ್ನಾಗಿ ಮೂಡಿಬಂದಿದೆ ಎಂದರು ನಾಯಕ ಪ್ರಣವ್ ಸೂರ್ಯ.

ಮೂಲತಃ ಸೈನ್ಟಿಸ್ಟ್ ಆಗಿರುವ ದಿವ್ಯ ಚಂದ್ರಧರ, ರಾಜಕೀಯ ಹಾಗೂ ಉದ್ಯಮಿಯಾಗಿರುವ ಶಶಿಕುಮಾರ್ ಹಾಗೂ ಆಹಾರ ಉದ್ಯಮ ನಡೆಸುತ್ತಿರುವ ಯೋಗೀಶ್ ಕೆ ಗೌಡ ಈ ಚಿತ್ರಕ್ಕೆ ಹಣ ಹಾಕಿದ್ದಾರೆ. ಮೂವರು ಸಹ ಈ ಚಿತ್ರದ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು.

ಚಿತ್ರದ ಹಾಡುಗಳ ಬಗ್ಗೆ ಶ್ರೀಧರ್ ಕಶ್ಯಪ್ ಮಾತನಾಡಿದರು. ಆರು ಹಾಡುಗಳಿದೆ. ನಿರ್ದೇಶಕ ಜೋಗಿ ಪ್ರೇಮ್, ರಾಜೇಶ್ ಕೃಷ್ಣನ್, ದಿವ್ಯ ಆಲೂರ್, ಐಶ್ವರ್ಯ ರಂಗರಾಜನ್, ಸಂಗೀತ ಕಟ್ಟಿ, ಮ್ಯಾಥ್ಯೂಸ್ ಮನು ಹಾಡಿದ್ದಾರೆ ಎಂದು ಸಂಗೀತ ನಿರ್ದೇಶಕರು ಮಾಹಿತಿ ನೀಡಿದರು.

ನಾಯಕಿ ಪ್ರಿಯಾಂಕ, ನಟ ವಿಸಿಎನ್ ಮಂಜುರಾಜ್ ಸೂರ್ಯ, ನಟಿ ಗಗನ ಹಾಗೂ ಸಂಕಲನಕಾರ ಎನ್ ಎಂ.ವಿಶ್ವ “ಕಂಡ್ಹಿಡಿ ನೋಡನ” ಚಿತ್ರದ ಬಗ್ಗೆ ಮಾತನಾಡಿದರು. ವಿನೋದ್ ಜೆ ರಾಜ್ ಈ ಚಿತ್ರದ ಛಾಯಾಗ್ರಹಕರು.

ಪ್ರಣವ ಸೂರ್ಯ,ಎಸ್ ಕೆ ನಾಗೇಂದ್ರ ಅರಸ್, ವಿಜಯ್ ಚೆಂಡೂರ್, ಗಿರಿಜಾ ಲೋಕೇಶ್, ಪ್ರಿಯಾಂಕ , ಶಿಲ್ಪ ಬರಿಕೆ, ಗಗನ ಮಧು, VCN ಮಂಜುರಾಜ್ ಸೂರ್ಯ ಹಾಗೂ ಆದರ್ಶ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ನಾಯಕ ಪ್ರಣವ ಸೂರ್ಯ ಕ್ರಿಯೇಟಿವ್ ಹೆಡ್ ಆಗಿ ಸಹ ಕಾರ್ಯ ನಿರ್ವಹಿಸಿದ್ದಾರೆ.

ಕರ್ನಾಟಕ ಟಿವಿ

- Advertisement -

Latest Posts

Don't Miss