Tuesday, November 18, 2025

Latest Posts

‘ತಮಿಳುನಾಡಿಗೆ ಕಂಗನಾ ಬಂದ್ರೆ ಬಾರಿಸಿ’

- Advertisement -

ತಮಿಳುನಾಡು ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಕೆ.ಎಸ್‌. ಅಳಗಿರಿ, ತಮ್ಮದೇ ಹೇಳಿಕೆಗಳಿಂದ ಹೊಸ ವಿವಾದಕ್ಕೀಡಾಗಿದ್ದಾರೆ. ಬಿಜೆಪಿ ಮಂಡಿ ಸಂಸದೆ, ಬಾಲಿವುಡ್‌ ನಟಿ ಕಂಗನಾ ರಾಣಾವತ್‌ ಏನಾದ್ರೂ ತಮಿಳುನಾಡಿಗೆ ಬಂದ್ರೆ, ಆಕೆಯ ಕಪಾಳಕ್ಕೆ ಬಾರಿಸಬೇಕೆಂದು ಹೇಳಿದ್ದಾರೆ.

ಕೆಲವು ತಿಂಗಳ ಹಿಂದೆ ವಿಮಾನ ನಿಲ್ದಾಣದಲ್ಲಿ, ಒಬ್ಬ ಮಹಿಳಾ ಪೊಲೀಸ್ ಅಧಿಕಾರಿ, ಕಂಗನಾಗೆ ಕಪಾಳಮೋಕ್ಷ ಮಾಡಿದ್ದರು. ಅವರು ಎಲ್ಲೇ ಹೋದರೂ ಎಲ್ಲರನ್ನೂ ನಿಂದಿಸುತ್ತಿರುತ್ತಾರೆ ಎಂದು ಕಾರಣ ಕೊಟ್ಟಿದ್ರು. ಹಾಗಾಗಿ ನಾನು ಕೂಡ ಕೃಷಿ ಕಾರ್ಮಿಕರಿಗೆ ಹೇಳಿದ್ದೆ.

ಏನಾದ್ರೂ ಕಂಗನಾ ತಮಿಳುನಾಡಿಗೆ ಬಂದರೆ, ಆ ಪೊಲೀಸ್ ಅಧಿಕಾರಿ ಮಾಡಿದ್ದನ್ನೇ ಮಾಡಿ. ಆಗ ಅವರು ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳುತ್ತಾರೆ ಅಂತಾ ಹೇಳಿದ್ದೆ. ರಣಾವತ್ ಅವರ ಹಿಂದಿನ ಹೇಳಿಕೆಗಳಿಂದ ಅಸಮಾಧಾನಗೊಂಡು ಹೇಳಿಕೆ ನೀಡಿದ್ದಾಗಿ ಅಳಗಿರಿ ಹೇಳಿದ್ದಾರೆ.

ಕೆ.ಎಸ್‌. ಅಳಗಿರಿ ಹೇಳಿಕೆಗೆ ಕಂಗನಾ ರಾಣಾವತ್‌ ಕೂಲ್‌ ಆಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ನಾವು ಎಲ್ಲಿ ಬೇಕಾದರೂ ಹೋಗಬಹುದು. ಯಾರೂ ನಮ್ಮನ್ನು ತಡೆಯಲು ಸಾಧ್ಯವಿಲ್ಲ. ಕೆಲವರು ನನ್ನನ್ನು ದ್ವೇಷಿಸಿದರೆ, ನನ್ನನ್ನು ಪ್ರೀತಿಸುವವರು ಹಲವರಿದ್ದಾರೆ. ತಮಿಳುನಾಡಿನ ಜನರು, ಯಾವಾಗಲೂ ನನಗೆ ಪ್ರೀತಿಯನ್ನು ನೀಡಿದ್ದಾರೆ. ಒಬ್ಬ ವ್ಯಕ್ತಿಯ ಮಾತುಗಳು ವ್ಯತ್ಯಾಸವನ್ನುಂಟು ಮಾಡುವುದಿಲ್ಲ ಎಂದಿದ್ದಾರೆ.

- Advertisement -

Latest Posts

Don't Miss