Kannada Fact Check: ಇತ್ತೀಚಿನ ದಿನಗಳಲ್ಲಿ AI ಬಂದ ಬಳಿಕ ಜನ ತಮಗೆ ಮನಸ್ಸಿಗೆ ಬಂದಂತೆ ಫೋಟೋ ವೀಡಿಯೋ ಕ್ರಿಯೇಟ್ ಮಾಡಿ, ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಿದ್ದಾರೆ. ಕೆಲವರು ಅದನ್ನೇ ನೋಡಿ ಸತ್ಯ ಎಂದುಕೊಳ್ಳುತ್ತಿದ್ದಾರೆ. ಮತ್ತೆ ಕೆಲವರು ಫಾರ್ವರ್ಡ್ ಮಾಡಿ, ಸುಳ್ಳು ಸುದ್ದಿಯನ್ನೇ ಹಬ್ಬಿಸುತ್ತಿದ್ದಾರೆ.
ಇದೀಗ ಇಂಥದ್ದೇ ಒಂದು ಸುಳ್ಳು ಸುದ್ದಿ ಬಹಿರಂಗವಾಗಿದ್ದು, ಯೋಗಿ ಆದಿತ್ಯನಾಥ್ ಜೊತೆ ಅಖಿಲೇಶ್ ಯಾದವ್ ಸೆಲ್ಫಿ ತೆಗೆದುಕೊಂಡಿರುವಂತೆ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿದೆ. ಟಿಂಕು ಯಾದವ್ ಎಂಬಾತ, ತನ್ನ ಫೇಸ್‌ಬುಕ್ ಅಕೌಂಟ್‌ನಲ್ಲಿ ಇಂಥದ್ದೊಂದು ಫೋಟೋ ಹಾಕಿ, ಕುಂಭ ಮೇಳದಲ್ಲಿ ಯೋಗಿ ಮತ್ತು ಅಖಿಲೇಶ್ ಒಟ್ಟಾಗಿ ಸೆಲ್ಫಿ ತೆಗೆದುಕೊಂಡಿದ್ದಾರೆಂದು ಸುದ್ದಿ ಹಬ್ಬಿಸಿದ್ದಾನೆ.
ಅಲ್ಲದೇ ಯೋಗಿ ಮತ್ತು ಅಖಿಲೇಶ್ ಈ ರೀತಿ ಮಾಡಿರುವುದು ಸರಿಯೋ, ತಪ್ಪೋ ಅಂತಾ ಕಮೆಂಟ್ ಮಾಡಿ ಹೇಳಿ ಎಂದು ಬರೆದುಕೊಂಡಿದ್ದಾನೆ. ಫೇಸ್‌ಬುಕ್ ನ ಇನ್ನೊಂದು ಅಕೌಂಟ್ ಆಗಿರುವ ಸಮಾಜವಾದ್ ಏಕ್ ಸೋಚ್ ಎಂಬ ಫೇಸ್‌ಬುಕ್ ಪೇಜ್‌ನಲ್ಲಿ ಈ ಫೋಟೋ ಬಗ್ಗೆ ನಿಮ್ಮ ಅನಿಸಿಕೆ ಏನು ಎಂದು, ಯೋಗಿ- ಅಖಿಲೇಶ್ ಎಐ ಜನರೇಟೆಡ್ ಫೋಟೋ ಅಪ್ಲೋಡ್ ಮಾಡಲಾಗಿದೆ.
ಹಾಗಾದ್ರೆ ಸತ್ಯವೇನು..?
ಈ ಸೆಲ್ಫಿ ಹಿಂದಿರುವ ಸತ್ಯವೆಂದರೆ, ಕುಂಭ ಮೇಳದಲ್ಲಿ ಅಖಿಲೇಶ್ ಯಾದವ್ ಇನ್ನುವರೆಗೂ ಭಾಗಿಯಾಗಿಲ್ಲ. ಮತ್ತು ಅಖಿಲೇಶ್- ಯೋಗಿ ಆದಿತ್ಯನಾಥ್ ಕಟ್ಟಾ ರಾಜಕೀಯ ವಿರೋಧಿಗಳು. ಈ ರೀತಿಯ ಯಾವುದೇ ನಿಜವಾದ ಸೆಲ್ಫಿಯನ್ನು ತೆಗೆದುಕೊಂಡಿಲ್ಲ. ಇದು ಕಿಡಿಗೇಡಿಗಳು ಎಐ ಮೂಲಕ ಮರ್ಜ್ ಮಾಡಿ, ಹರಿಬಿಟ್ಟಿರುವ ಫೋಟೋವಾಗಿದೆ.