Friday, March 14, 2025

Latest Posts

Kannada Fact Check: ವೈರಲ್ ಆಗಿರುವ ವಶೀಕರಣ ವೀಡಿಯೋ ಹಿಂದಿರುವ ಸತ್ಯ ರಿವೀಲ್

- Advertisement -

Kannada Fact Check: ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೋ ಒಂದು ವೈರಲ್ ಆಗಿದೆ. ಈ ವೀಡಿಯೋದಲ್ಲಿ ಓರ್ವ ಮುಸುಧಾರಿ ವ್ಯಕ್ತಿ ನಡೆಯುತ್ತ ಬಂದು, ಬೈಕ್‌ನಲ್ಲಿ ಬಂದ ವ್ಯಕ್ತಿಯನ್ನು ನಿಲ್ಲಿಸಿ, ಒಂದು ಕಾಗದ ಕೊಟ್ಟು, ಈ ವಿಳಾಸ ಎಲ್ಲಿ ಬರತ್ತೆ ಎಂದು ಕೇಳುತ್ತಾನೆ. ಬೈಕ್‌ ಮೇಲಿದ್ದ ವ್ಯಕ್ತಿ, ಆ ಕಾಗದ ಓದಲು ಶುರು ಮಾಡಿ, ಹಿಪ್ನೋಟೈಸ್ ಆಗಿ, ಮುಸುಕುಧಾರಿಗೆ ತನ್ನೆಲ್ಲ ಹಣ, ಮೊಬೈಲ್, ವಸ್ತುಗಳನ್ನು ನೀಡುತ್ತಾರೆ.

ಈ ವೀಡಿಯೋ ಅಲ್ಲೆ ಸ್ಥಳದಲ್ಲೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ ವ್ಯಕ್ತಿ ಈ ಘಟನೆ ಭಾರತದಲ್ಲಿ ನಡೆದಿದೆ ಎಂದು ಹೇಳಿದ್ದಾರೆ. ಇದನ್ನು ನೋಡಿರುವ ಭಾರತೀಯರು ದಂಗಾಗಿ ಹೋಗದ್ದು, ನಾವು ಹೀಗೆ ಹೋಗುವಾಗ ನಮಗೂ ಹೀಗಾದರೆ, ಏನಪ್ಪ ಮಾಡೋದು ಅಂತಾ ಟೆನ್ಶನ್ ಆಗಿದ್ದಾರೆ.

ಪಿಟಿಐ ಅನ್ನುವ ಸಂಸ್ಥೆ ಈ ಸುದ್ದಿ ಸತ್ಯವೋ ಸುಳ್ಳೋ ಎಂದು ಫ್ಯಾಕ್ಟ್ ಚೆಕ್ ಮಾಡಿದಾಗ ಗೊತ್ತಾದ ವಿಷಯವೇನೆಂದರೆ, ಈ ಘಟನೆ ನಡೆದಿರುವುದು ಸತ್ಯ. ಆದರೆ ಅದನ್ನು ತಪ್ಪಾಗಿ ಭಾರತದ್ದು ಎಂದು ಲಿಂಕ್ ಮಾಡಲಾಗಿದೆ. ಏಕೆಂದರೆ ಈ ಘಟನೆ ನಡೆದಿದ್ದು ಬಾಂಗ್ಲಾದೇಶದಲ್ಲಿ. ಬಾಂಗ್ಲಾದೇಶದ ಕಂಟೆಂಟ್ ಕ್ರಿಯೇಟರ್ ಈ ರೀತಿ ಕಂಟೆಂಟ್ ಕ್ರಿಯೇಟ್ ಮಾಡಿ, ನಿಮಗೂ ಈ ರೀತಿ ಅನುಭವವಾಗಬಹುದು ಹುಷಾರ್ ಎಂದು ಎಚ್ಚರಿಕೆ ನೀಡಲು ಮಾಡಿದ ಕಂಟೆಂಟ್ ಆಗಿತ್ತು.

ಇದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪಬ್ಲಿಷ್ ಮಾಡಿರುವ ಕಂಟೆಂಟ್ ಕ್ರಿಯೇಟರ್ ಇದನ್ನು ಮನೋರಂಜನೆಗಾಗಿ ಮಾತ್ರ ಮಾಡಲಾಗಿದೆ ಎಂದಿದ್ದಾರೆ.

Claim: ಹಿಪ್ನೋಟಿಸಮ್ ತಂತ್ರ ಬಳಸಿ ಭಾರತದಲ್ಲಿ ಮಾಡಲಾಗಿರುವ ದರೋಡೆ.

Fact Check: ಬಾಂಗ್ಲಾದೇಶದಲ್ಲಿ ಮನೋರಂಜನೆಗಾಗಿ ಮತ್ತು ಜನರಿಗೆ ಎಚ್ಚರಿಕೆ ನೀಡಲು ಮಾಡಿರುವ ವೀಡಿಯೋ.

Conclusion: ಇತ್ತೀಚಿಗೆ ಈ ವೀಡಿಯೋ ಹಿಪ್ನೋಟಿಸಮ್ ಮಾಡಿ, ಭಾರತದ ಬೀದಿಯಲ್ಲಿ ಈ ರೀತಿಯಾಗಿ ದರೋಡೆ ಮಾಡಲಾಗಿದೆ ಎಂದು ವೀಡಿಯೋ ಹಂಚಿಕೊಳ್ಳುತ್ತಿದ್ದಾರೆ. ಆದರೆ ಫ್ಯಾಕ್ಟ್ ಚೆಕ್ನಲ್ಲಿ ಕಂಡು ಬಂದಿದ್ದೇನೆಂದರೆ, ಇದು ಬಾಂಗ್ಲಾದೇಶದ ಕಂಟೆಂಟ್ ಕ್ರಿಯೇಟರ್‌ಗಳು ಮನೋರಂಜನೆಗಾಗಿ ಮಾಡಿದ ವೀಡಿಯೋ. ಈ ವೀಡಿಯೋ ಮಾಡಿದ ಬಳಿಕ ಕೊನೆಯಲ್ಲಿ ಮುಸುಕುಧಾರಿ ವ್ಯಕ್ತಿ, ತನ್ನ ಮುಸುಕನ್ನು ತೆಗೆದು, ಇದು ಎಚ್ಚರಿಕೆಗಾಗಿ ಮಾಡಿದ ವೀಡಿಯೋ ಎಂದು ಹೇಳುತ್ತಾರೆ.

Fact Check by Press Trust of India (Shakti Publishers)

- Advertisement -

Latest Posts

Don't Miss