ಕನ್ನಡತಿ ಧಾರಾವಾಹಿಯಿಂದ ಸಾನಿಯಾ ಔಟ್, ಆರೋಹಿ ಇನ್: ಕಾರಣವೇನು..?

ಎಲ್ಲರ ಅಚ್ಚುಮೆಚ್ಚಿನ ಧಾರಾವಾಹಿಯಾಗಿರುವ ಕನ್ನಡತಿ ಧಾರಾವಾಹಿಯಲ್ಲಿ ಮಹತ್ವದ ಪಾತ್ರದ ಬದಲಾವಣೆಯಾಗಿದೆ. ಧಾರಾವಾಹಿಯಲ್ಲಿ ಸಾನಿಯಾ ಪಾತ್ರ ನಿರ್ವಹಿಸುತ್ತಿದ್ದ ರಮೋಲಾ ಧಾರಾವಾಹಿ ತೊರೆದಿದ್ದು, ಆ ಸ್ಥಾನಕ್ಕೆ ಆರೋಹಿ ಬಂದಿದ್ದಾರೆ. ಕಲರ್ಸ್ ಕನ್ನಡದಲ್ಲಿ ಬರುತ್ತಿದ್ದ ಹೂಮಳೆ ಧಾರಾವಾಹಿಯಲ್ಲಿ ನಾಯಕಿ ನಟಿಯ ಅತ್ತಿಗೆಯ ಪಾತ್ರದಲ್ಲಿ ಮಿಂಚಿದ್ದ ಆರೋಹಿ, ಈಗ ಸಾನಿಯಾ ಆಗಿ ಮಿಂಚೋಕ್ಕೆ ಬರ್ತಿದ್ದಾರೆ.

ಇನ್ನು ಯಾಕೆ ರಮೋಲಾ ಕನ್ನಡತಿ ಧಾರಾವಾಹಿಯಿಂದ ಹೊರಬಿದ್ದಿದ್ದಾರೆ ಅಂತಾ ರಮೋಲಾ ಆಗಲಿ ಕನ್ನಡತಿ ಚಿತ್ರತಂಡವಾಗಲಿ ಎಲ್ಲಿಯೂ ಹೇಳಿಕೊಂಡಿಲ್ಲ. ಆದ್ರೆ ಕೆಲ ಮಾಹಿತಿ ಪ್ರಕಾರ ಸಾನಿಯಾಗೆ ಬೇರೆ ಭಾಷೆಯಲ್ಲಿ ಆಫರ್ ಬಂದಿರಬಹುದು ಎಂದು ಅಂದಾಜಿಸಲಾಗಿದೆ. ಈ ಕಾರಣಕ್ಕೆ ರಮೋಲಾ ಕನ್ನಡತಿ ಧಾರಾವಾಹಿ ತೊರೆದಿರಬಹುದು ಎನ್ನಲಾಗಿದೆ. ಹೀಗಾಗಿ ಈ ಪಾತ್ರವನ್ನ ನಿರ್ವಹಿಸೋಕ್ಕೆ ಆರೋಹಿ ಬಂದಿದ್ದಾರೆ.

ಕೆಲ ದಿನಗಳ ಹಿಂದೆ ಕಲರ್ಸ್ ಕನ್ನಡದಲ್ಲಿ ಮಿನಿ ಬಿಗ್‌ಬಾಸ್ ಪ್ರಸಾರ ಮಾಡಲಾಗಿತ್ತು. ಈ ಮಿನಿ ಬಿಗ್‌ಬಾಸ್‌ ಶೋನಲ್ಲಿ ರಮೋಲಾ ಭಾಗವಹಿಸಿದ್ದರು.  ಈ ವೇಳೆ ಯಾರ ಜೊತೆಯೂ ಅಷ್ಟು ಬೆರೆಯದ ರಮೋಲಾ, ತಮ್ಮಷ್ಟಕ್ಕೆ ತಾವಿರುತ್ತಿದ್ದರು. ತಮ್ಮಷ್ಟಕ್ಕೆ ತಾವು ಡಾನ್ಸ್ ಮಾಡುತ್ತಿದ್ದರು. ನಂತರ ಮನದ ಮಾತನ್ನಾಡುವಾಗ, ತಾನು ಬಾಲ್ಯದಿಂದಲೂ ಹೀಗೆ. ನಾನು ಅಪ್ಪ ಅಮ್ಮನೊಟ್ಟಿಗೆ ಇದ್ದವಳಲ್ಲ. ಹಾಸ್ಟೆಲ್‌ನಲ್ಲಿ, ಪಿಜಿಯಲ್ಲಿ ಓದುತ್ತಿದ್ದೆ. ಹೀಗಾಗಿ ಕುಟುಂಬದ ಒಡನಾಟ ಕಡಿಮೆ. ಹಾಗಾಗಿ ನಾನು ನನ್ನಷ್ಟಕ್ಕೆ ನಾನಿರುತ್ತೇನೆ. ನನಗೆ ಬೇಕಾದ ಹಾಗಿರುತ್ತೇನೆ. ಯಾರಿಗೂ ನಾನು ಕೇರ್ ಮಾಡೋದಿಲ್ಲಾ. ಇಷ್ಟವಾದ್ರೆ ಇಷ್ಟವಾದವ್ರ ಜೊತೆ ನಾನು ಮಾತಾಡುತ್ತೇನೆ. ಇಲ್ಲವಾದರೆ ಇಲ್ಲಾ. ನನಗೆ ಬಂದ ಹಾಗೆ ಅಡುಗೆ ಮಾಡುತ್ತೇನೆ. ನನಗಿಷ್ಟ ಬಂದಂತೆ ನಾನು ಡಾನ್ಸ್ ಮಾಡುತ್ತೇನೆ. ಎದುರಿಗಿದ್ದವರು ಅದನ್ನು ಇಷ್ಟಪಡಲಿ ಬಿಡಲಿ ನಾನು ಕೇರ್ ಮಾಡಲ್ಲ. ನಾನಿರೋದೇ ಹೀಗೆ ಎಂದಿದ್ದರು. ಒಟ್ಟಾರೆಯಾಗಿ ಸೌಂದರ್ಯದ ಜೊತೆ ನಟನೆಯಲ್ಲೂ ಸೈ ಎನ್ನಿಸಿಕೊಂಡಿರುವ ಸಾನಿಯಾ ಊರ್ಫ ರಮೋಲಾ ನಟನಾ ರಂಗದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಭರವಸೆ ನೀಡಿದ್ದಂತೂ ಸುಳ್ಳಲ್ಲ.

About The Author