Movie News: ಕಳೆದ ವರ್ಷ ನವರಾತ್ರಿಯಲ್ಲಿ ರಿಲೀಸ್ ಆಗಿ, ತನ್ನಿಂದ ತಾನೇ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಬೆಳೆದ ಕನ್ನಡದ ಕಾಂತಾರ ಸಖತ್ ಸೌಂಡ್ ಮಾಡಿತ್ತು. ಇಂದು ಕಾಂತಾರ ಚಾಪ್ಟರ್ 1ರ ಫಸ್ಟ್ ಲುಕ್ ಮತ್ತು ಟೀಸರ್ ರಿಲೀಸ್ ಆಗಿದ್ದು, ಟೀಸರ್ ಅಪ್ಲೋಡ್ ಆದ 20 ನಿಮಿಷದಲ್ಲಿ 3 ಲಕ್ಷಕ್ಕೂ ಹೆಚ್ಚು ವೀವ್ಸ್ ಪಡೆದುಕೊಂಡಿದೆ.
ಗುಹೆಯೊಳಗೆ ಪರಶುರಾಮನಂತೆ ಕೊಡಲಿ, ತ್ರಿಶೂಲ ಹಿಡಿದು ನಿಂತಿರುವ ರಿಷಬ್, ದೈವಗಳ ಕಥೆ ಹೇಳಲು ರೆಡಿಯಾಗಿದ್ದಾರೆ. ಕಳೆದ ಬಾರಿ ಪಂಜುರ್ಲಿ ಮತ್ತು ಗುಳಿಗ ದೈವಗಳ ಕಥೆಗಳನ್ನು ಹೇಳಿದ ರಿಷಬ್, ಈ ಬಾರಿ ಅದರ ಹಿಂದಿನ ಕಥೆಯನ್ನು ಹೇಳಲು ಬರುತ್ತಿದ್ದಾರೆ.
ಟೀಸರ್ ಇಂಗ್ಲಿಷಿನಲ್ಲಿದ್ದು, ಒಟ್ಟು 7 ಭಾಷೆಯಲ್ಲಿ ಕಾಂತಾರ ಸಿನಿಮಾ ರಿಲೀಸ್ ಆಗಲಿದೆ ಎಂದು ಸಿನಿ ತಂಡ ತಿಳಿಸಿದೆ. ಈ ಬಗ್ಗೆ ನಟ ರಿಷಬ್ ಶೆಟ್ಟಿ, ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಅಪ್ಲೋಡ್ ಮಾಡಿದ್ದು, ಸ್ಟೆಪ್ ಇಂಟು ದಿ ಲ್ಯಾಂಡ್ ಆಫ್ ಡಿವೈನ್ ಎಂದು ಬರೆದುಕೊಂಡಿದ್ದಾರೆ. ಒಟ್ಟಾರೆಯಾಗಿ ಆದಷ್ಟು ಬೇಗ, ಕಾಂತಾರ ಚಾಪ್ಟರ್1ಗಾಗಿ ಕಾದು ಕುಳಿತಿದ್ದ, ಸಿನಿ ಪ್ರಿಯರಿಗೆ, ಭರ್ಜರಿ ಮನೋರಂಜನೆ ಜೊತೆಗೆ ದೈವಗಳ ಅಬ್ಬರ ಕಾಣ ಸಿಗುವುದು ಖಚಿತವಾಗಿದೆ.
ಕೃಪೆ: ಹೊಂಬಾಳೆ ಫಿಲ್ಮ್ಸ್
ಕರ್ನಾಟಕ ಟಿವಿ ಮುಖ್ಯಸ್ಥರಾದ ಶಿವು ಬೆಸಗರಹಳ್ಳಿ ಅವರಿಗೆ ‘ಮಾಧ್ಯಮ ರತ್ನ’ ಪ್ರಶಸ್ತಿ
ರಜತ್ ಒತ್ತಡಕ್ಕೆ ಮಣಿದ ಜೋಶಿ: ಕೇಂದ್ರ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಉಳ್ಳಾಗಡ್ಡಿಮಠ
‘ಸರ್ಕಾರವನ್ನು ಕೈಗೊಂಬೆಯಂತೆ ಡಿಕೆಶಿ ಆಡಿಸುತ್ತಿದ್ದಾರೆ. ಜನರೇ ಇವರಿಗೆ ತಕ್ಕ ಉತ್ತರ ನೀಡುತ್ತಾರೆ’