Sunday, September 8, 2024

Latest Posts

ಕಾಂತಾರ ಇದು ತುಳುನಾಡಿನ ಮಣ್ಣಿನ ಕಥೆ …!

- Advertisement -

Film Review:

ಸೆಪ್ಟೆಂಬರ್ 30ರಂದು ಪ್ರಪಂಚದಾದ್ಯಂತ ಬಿಡುಗಡೆಗೊಂಡು ಎಲ್ಲೆಡೆ ತುಂಬಿದ ಗೃಹದ ಪ್ರದರ್ಶನ ಕಾಣುತ್ತಿರುವ ಕನ್ನಡ ಚಿತ್ರ ಕಾಂತಾರಾವು ಅದ್ಭುತವಾಗಿ ಮೂಡಿಬಂದಿದ್ದು… ಫ್ಯಾಮಿಲಿ ಸಮೇತ ಎಲ್ಲಾ ವರ್ಗದ ಪ್ರೇಕ್ಷಕರು ನೋಡಬಹುದಾದ ಮತ್ತು ನೋಡಲೇಬೇಕಾದ ಚಿತ್ರವಾಗಿದೆ.ನಿಗೂಢ ಕಾಡಿನಲ್ಲಿ ನಡೆವ ಕಥಾಹಂದರವನ್ನು ಕಣ್ಣಿಗೆ ಕಟ್ಟೋ ಹಾಗಿ ಕಟ್ಟಿ ಕೊಟ್ಟಿದ್ದಾರೆ ನಿರ್ದೇಶಕ ರಿಷಬ್ ಶೆಟ್ಟಿ ಅವರು.

ವಿಭಿನ್ನ ಕಥಾವಸ್ತುಗಳನ್ನು ಹೊಂದಿರುವ ಚಿತ್ರಗಳ ಮೂಲಕ ಪ್ರೇಕ್ಷಕರ ಮನಗೆದ್ದು ಸ್ಟಾರ್ ನಿರ್ದೇಶಕನಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ರಿಷಬ್ ಶೆಟ್ಟಿ ಅವರು…. ಬೆಲ್ ಬಾಟಮ್, ಗರುಡಗಮನ ವೃಷಭವಾಹನ ಮೂಲಕ ತನೊಬ್ಬ ಉತ್ತಮ ನಟನೂ ಹೌದು ಎಂದು ಸಾಬೀತು ಪಡಿಸುತ್ತ ಬಂದಿದ್ದು…ಕಾಂತಾರದಲ್ಲಿ ಮಾತ್ರ ತಮ್ಮ ಅದ್ಭುತ ಅಭಿನಯದಿಂದ ಎಲ್ಲರು ಬೆರಗು ಕಣ್ಣಿನಿಂದ ನೋಡುವಂತೆ ಮಾಡಿದ್ದಾರೆ.

ಶಿವನ ಪಾತ್ರದಲ್ಲಿ ಅಬ್ಬರಿಸುವ ರಿಷಬ್ ಶೆಟ್ಟಿ ಚಿತ್ರದ ಕೊನೆಯ 20 ನಿಮಿಷದಲ್ಲಿ ಪ್ರೇಕ್ಷಕ ಅಕ್ಷರಶಃ ಉಸಿರು ಬಿಗಿ ಹಿಡಿದುಕೊಳ್ಳುವ ಅಭಿನಯವನ್ನು ನೀಡಿದ್ದಾರೆ ಅಥವಾ ಅದನ್ನು ಅಭಿನಯ ಎಂದರೆ ತಪ್ಪಾಗಬಹುದೇನೋ ಕಾರಣ ಅಷ್ಟರ ಮಟ್ಟಿಗೆ ರಿಷಬ್ ಅವರು ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ.ಚಿತ್ರವು ಸಾಧಾರಣ ಕತೆಯನ್ನು ಹೊಂದಿದ್ದರೂ ಅಸಾಧಾರಣ ನಿರೂಪಣೆಯಿಂದ ಪ್ರತಿ ಹಂತದಲ್ಲಿಯೂ ಪ್ರೇಕ್ಷಕನನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗುತ್ತದೆ.

ಹೊಂಬಾಳೆ ಸಂಸ್ಥೆ ನಿರ್ಮಿಸಿರುವ ಈ ಅಮೋಘ ಚಿತ್ರವು ತಾಂತ್ರಿಕವಾಗಿ ಶ್ರೀಮಂತವಾಗಿದ್ದು…ಅರವಿಂದ್ ಕಶ್ಯಪ್ ಅವರ ಕಣ್ಣು ಕೊರೈಸುವ ಕ್ಯಾಮರ ಕುಸುರಿ…. ಮೈ ಜುಮ್ಮೆನಿಸುವ ಅಜನೀಶ್ ಲೋಕನಾಥ್ ಅವರ ಹಿನ್ನಲೆ ಸಂಗೀತ ಚಿತ್ರಕ್ಕೆ ಮತ್ತಷ್ಟು ಮೈಲೇಜ್ ಕೊಡುವಲ್ಲಿ ಸಹಕಾರಿಯಾಗಿದೆ.

ಕಾಂತಾರವು ಅತ್ಯುತ್ತಮ ತಾರಾಗಣವನ್ನು ಹೊಂದಿದ್ದು…. ಲೀಲಾ ಪಾತ್ರದಲ್ಲಿ ಸಪ್ತಮಿ ಗೌಡ ಅವರು ಮಿಂಚಿದ್ದು… ಊರ ದಣಿಯಾಗಿ ಅಚ್ಯುತ್ ಅವರದ್ದು ಎಂದಿನಂತೆ ಅಚ್ಚುಕಟ್ಟಾದ ಅಭಿನಯ, ಮುರಳಿ ಪಾತ್ರದಲ್ಲಿ ಕಿಶೋರ್ ಅವರು ಕ್ಲಾಸ್ ಆಕ್ಟಿಂಗ್ ನೀಡಿದ್ದು ಇನ್ನುಳಿದಂತೆ ಶಿವ ಮತ್ತು ಸಂಗಡಿಗರು ಚಿತ್ರದುದ್ದಕ್ಕೂ ತಮ್ಮ ಇರುವಿಕೆಯಿಂದ ಪ್ರೇಕ್ಷಕರಿಗೆ ಮನರಂಜನೆಯನ್ನು ಉಣಬಡಿಸಿದ್ದಾರೆ.

ಒಟ್ಟಿನಲ್ಲಿ ಕ್ಲಾಸಿಕ್ ಕಥೆಯು ಮಾಸ್ ನಿರೂಪಣೆಯ ಮೂಲಕ ಎಲ್ಲಾ ವರ್ಗದ ಪ್ರೇಕ್ಷಕರಿಗೂ ಹೇಳಿ ಮಾಡಿಸಿದಂತಿದ್ದು ತಪ್ಪದೆ ಚಿತ್ರಮಂದಿರಕ್ಕೆ ತೆರಳಿ ಸಿನೆಮಾ ವೀಕ್ಷಿಸಿ ದೈವಿಕ ಅನುಭವವನ್ನು ಪಡೆದುಕೊಳ್ಳಿ.

ದರ್ಶನ್ ‘ಸಾರಥಿ’ಗೆ 11 ರ ಹರುಷ..?!

‘ಕೊನೆಯ 20 ನಿಮಿಷ ರಿಷಬ್ ಮೈಮೇಲೆ ದೈವ ಬಂದಿತ್ತು…’

‘ಕಾಂತಾರ’ ಮೆಚ್ಚಿದ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್

- Advertisement -

Latest Posts

Don't Miss