ಬೆಂಗಳೂರು: ಅತೃಪ್ತ ಶಾಸಕರ ರಾಜೀನಾಮೆ ಅರ್ಜಿ ಕುರಿತು ಮಧ್ಯಂತರ ತೀರ್ಪು ಪ್ರಕಟಿಸಿದ ಬೆನ್ನಲ್ಲೇ ಇದೀಗ ದೋಸ್ತಿಗಳ ಎದೆಬಡಿತ ಹೆಚ್ಚಾಗಿದೆ ನಾಳೆ ನಡೆಯುವ ವಿಶ್ವಾಸಮತ ಯಾಚನೆಯಲ್ಲಿ ಏನಾಗುತ್ತೋ ಅನ್ನೋ ಭೀತಿ ಶುರುವಾಗಿದ್ದು, ಇತ್ತ ಬಿಜೆಪಿ, ದೋಸ್ತಿ ಸರ್ಕಾರ ಪತನ ಖಚಿತ ಅಂತ ಈಗಾಗಲೇ ಬೀಗುತ್ತಿದೆ.
ಅತೃಪ್ತರ ಅರ್ಜಿ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯದ ಮಧ್ಯಂತರ ತೀರ್ಪು ಮೇಲ್ನೋಟಕ್ಕೆ ಸಮತೋಲನವಾಗಿದೆ ಅಂತ ಭಾಸವಾಗುತ್ತೆ. ಆದರೆ ಇದೀಗ ರಾಜಕೀಯ ನಾಯಕರು ಈ ತೀರ್ಪನ್ನು ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಿಸಿಕೊಂಡು ಸಮಾಧಾನಪಡುತ್ತಿದ್ದಾರೆ. ಅದರಲ್ಲೂ ಸರ್ವೋಚ್ಛನ್ಯಾಯಾಲಯದ ಈ ತೀರ್ಪು ದೋಸಿಗಳಿಗೆ ತಲೆಬಿಸಿ ತಂದಿದೆ. ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರ ಕುರಿತಾಗಿ ಇತ್ಯರ್ಥವಾಗೋವರೆಗೂ ಅವರೆಲ್ಲರನ್ನೂ ಸದನಕ್ಕೆ ಬರಲೇಬೇಕು ಅಂತ ಒತ್ತಡ ಮಾಡಬಾರದು ಅನ್ನೋ ಸುಪ್ರೀಂ ಆದೇಶಕ್ಕೆ ದೋಸ್ತಿಗಳು ಪತರಗುಟ್ಟಿಹೋಗಿದ್ದಾರೆ. ಯಾಕಂದ್ರೆ ದೋಸ್ತಿಗಳ ಬಳಿಯಿದ್ದದ್ದು ವಿಪ್ ಅಸ್ತ್ರ ಮಾತ್ರ. ವಿಪ್ ಜಾರಿಯಾದ್ರೂ ಸದನಕ್ಕೆ ಹಾಜರಾಗದೇ ಮುಂಬೈನತ್ತ ಮುಖ ಮಾಡಿದ್ದ ಶಾಸಕರ ಅನರ್ಹತೆಗೆ ಕಾಂಗ್ರೆಸ್-ಜೆಡಿಎಸ್ ಸಿದ್ಧವಾಗಿತ್ತು. ಆದ್ರೀಗ ವಿಪ್ ಉಲ್ಲಂಘನೆಯನ್ನು ಪರಿಗಣಿಸಿ ಶಾಸಕರನ್ನು ಅನರ್ಹಗೊಳಿಸುವಂತಿಲ್ಲ ಅಂತ ತೀರ್ಪು ನೀಡಿರೋ ಸುಪ್ರೀಂ ನ್ಯಾಯಪೀಠ ಇದೀಗ ಅಡ್ಡಗಾಲಾಗಿದೆ.
ಒಂದು ವೇಳೆ ಅತೃಪ್ತ ಶಾಸಕರು ಸದನಕ್ಕೆ ಹಾಜರಾಗದಿದ್ರೆ ಕಾಂಗ್ರೆಸ್-ಜೆಡಿಎಸ್ ಸಂಖ್ಯಾಬಲ 101ಕ್ಕೆ ಕುಸಿಯಲಿದೆ. ಇನ್ನು ಬಿಜೆಪಿ 105ರಷ್ಟು ಸಂಖ್ಯಾಬಲ ಹೊಂದಿದ್ದು, ಬಿಜೆಪಿ ಸಂಪರ್ಕದಲ್ಲಿದ್ದಾರೆ ಎನ್ನಲಾಗುತ್ತಿರೋ ಇಬ್ಬರು ಪಕ್ಷೇತರ ಶಾಸಕರಾದ ಶಂಕರ್ ಮತ್ತು ನಾಗೇಶ್ ಬಿಜೆಪಿಗೆ ಬೆಂಬಲ ನೀಡಿದ್ದಲ್ಲಿ ಬಿಜೆಪಿ 107ಕ್ಕೆ ಏರಿಕೆಯಾಗಲಿದೆ. ಹೀಗಾಗಿ ದೋಸ್ತಿ ಸರ್ಕಾರಕ್ಕೆ ಇದೀಗ ಕಂಟಕ ಎದುರಾಗಿದ್ದು, ದೋಸ್ತಿಗಳ ಲೆಕ್ಕಾಚಾರದಂತೆ ಎಲ್ಲವೂ ನಡೆದು ಅತೃಪ್ತರ ಮನವೊಲಿಸಲು ಯಶಸ್ವಿಯಾದ್ರೆ ಮಾತ್ರ ಮೈತ್ರಿ ಸರ್ಕಾರ ಮುಂದುವರಿಯಲಿದೆ. ಇಲ್ಲದಿದ್ದರೆ ವಿಪಕ್ಷ ಸ್ಥಾನದಲ್ಲಿರೋ ಬಿಜೆಪಿ ಸರ್ಕಾರ ರಚನೆ ಮಾಡೋ ಎಲ್ಲಾ ಲಕ್ಷಣಗಳು ಸ್ಪಷ್ಟವಾಗಿದೆ.
ಸಕ್ಸಸ್ ಆಗುತ್ತಾ ಯಡಿಯೂರಪ್ಪ ಗೇಮ್ ಪ್ಲ್ಯಾನ್..? ಮಿಸ್ ಮಾಡದೇ ಈ ವಿಡಿಯೋ ನೋಡಿ