ಮತ್ತೆ ತೆರೆ ಮೇಲೆ ಮಿಂಚಲು ಬಂದ ಕರೀನಾ, ತಬು: ಸಾಥ್ ಕೊಟ್ಟ ಕೃತಿ ಸನನ್

Bollywood News: ಬಾಲಿವುಡ್‌ನಲ್ಲಿ ಹೆಸರು ಮಾಡಿದಂಥ ಚೆಲುವೆಯರಾದ ಕರೀನಾ ಕಪೂರ್ ಮತ್ತು ತಬು ಹಲವು ವರ್ಷಗಳ ನಂತರ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ಇವರಿಗೆ ನಟಿ ಕೃತಿ ಸನನ್ ಸಾಥ್ ನೀಡಿದ್ದಾರೆ.

ಕ್ರೇವ್ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಸಖತ್ ರೆಸ್ಪಾನ್ಸ್ ಪಡೆದಿದೆ. ಈ ಸಿನಿಮಾದಲ್ಲಿ ಕರೀನಾ, ತಬು ಮತ್ತು ಕೃತಿ ಏರ್ ಹೋಸ್ಟೆಸ್ ಪಾತ್ರದಲ್ಲಿ ಮಿಂಚಿದ್ದಾರೆ. ಸರಿಯಾಗಿ ಸಂಬಳ ಕೊಡದ ಕಂಪನಿಯಲ್ಲಿ ಇವರು ಕೆಲಸ ಮಾಡುತ್ತಿದ್ದಾಗ, ಇವರಿಗೆ ಆ ಕಂಪನಿಯವರು ಗೋಲ್ಡ್ ಸ್ಮಗ್ಲಿಂಗ್ ಮಾಡುತ್ತಿರುವುದು ಕಂಡು ಬರುತ್ತದೆ.

ಅದನ್ನೇ ಬಂಡವಾಗಿರಿಸಿಕೊಂಡು, ತಾವು ಕೂಡ ಗೋಲ್ಡ್ ಪಡೆದು ಐಶಾರಾಮಿ ಜೀವನ ನಡೆಸುವ ಕನಸು ಕಾಣುತ್ತಾರೆ. ಅಷ್ಟರಲ್ಲೇ ಎಡವಟ್ಟಾಗಿ, ಮೂವರು ಏರ್‌ಹೋಸ್ಟೆಸ್‌ಗಳ ಬಂಡವಾಳ ಬಯಲಾಗುತ್ತದೆ. ಬಳಿಕ ಏನಾಗುತ್ತದೆ ಅನ್ನೋದನ್ನ ಸಿನಿಮಾ ಮೂಲಕ ನೋಡಬೇಕೆಂದು ಎಂದು, ಟ್ರೇಲರ್‌ನಲ್ಲಿ ಕುತೂಹಲ ಮೂಡಿಸಲಾಗಿದೆ.

ಕರೀನಾ ಮೊದಲಿನಂತೆ, ತಮ್ಮ ಬೋಲ್ಡ್ ಆ್ಯಕ್ಟಿಂಗ್‌ನಿಂದ ಕಾಮಿಡಿ ಮಾಡುತ್ತ, ಜನರ ಗಮನ ಸೆಳೆದಿದ್ದಾರೆ. ತಬು ಅದೇ ಗಂಭೀರವಾದ ಆ್ಯಕ್ಟಿಂಗ್ ಮುಂದುವರಿಸಿದರೆ, ಕೃತಿ ಜ್ಯೂನಿಯರ್ ಆ್ಯಕ್ಟರ್ ಆಗಿಯೇ, ಮಿಂಚಿದ್ದಾರೆ. ಇನ್ನು ಈ ಸಿನಿಮಾದಲ್ಲಿ ಕಪಿಲ್ ಶರ್ಮಾ ಸೇರಿ, ಹಲವು ಕಲಾವಿದರು ನಟಿಸಿದ್ದಾರೆ.

ರಾಜೇಶ್ ಎ ಕೃಷ್ಣನ್ ನಿರ್ದೇಶನದ ಸಿನಿಮಾವನ್ನು ಶೋಭಾ ಕಪೂರ್, ಅನಿಲ್ ಕಪೂರ್, ಏಕ್ತಾ ಕಪೂರ್, ರಿಹಾ ಕಪೂರ್ ನಿರ್ಮಾಣ ಮಾಡಿದ್ದಾರೆ. ಮಾರ್ಚ್ 29ಕ್ಕೆ ಈ ಸಿನಿಮಾ ರಿಲೀಸ್ ಆಗಲಿದ್ದು, ಈ ಬಾರಿ ಈ ಮೂವರು ನಟಿಯರ ಕಾಂಬಿನೇಷನ್ ಜಾದೂ ಮಾಡತ್ತಾ ಅಂತಾ ಕಾದು ನೋಡಬೇಕಿದೆ.

ಗೂಗಲ್ ಪೇ, ಫೋನ್‌ ಪೇ ಮೇಲೂ ಚುನಾವಣಾ ಆಯೋಗ ಕಣ್ಗಾವಲು ಇರಿಸಲಿದೆ: ರಾಜೀವ್ ಕುಮಾರ್

ಕಾಂಗ್ರೆಸ್ ಒಳಗೊಳಗೇ ಟ್ಯಾಂಕರ್ ಮಾಫಿಯಾಗಳಿಗೆ ಬೆಂಬಲ ನೀಡಿ ದುಡ್ಡು ಹೊಡೆಯುತ್ತಿದೆ: ಪ್ರೀತಂಗೌಡ

ಗಾಯಕಿ ಅನುರಾಧಾ ಪಡ್ವಾಲ್ ಬಿಜೆಪಿಗೆ ಸೇರ್ಪಡೆ..

About The Author