Sunday, March 3, 2024

Latest Posts

ನಾಳಿನ ಎಲೆಕ್ಷನ್ ರಿಸಲ್ಟ್ 4 ಗಂಟೆ ಲೇಟ್

- Advertisement -

ಬೆಂಗಳೂರು: ಇಡೀ ದೇಶವೇ ಕಾತುರವಾಗಿ ಕಾಯುತ್ತಿರೋ ನಾಳಿನ ಲೋಕಸಭಾ ಚುನಾವಣಾ ಫಲಿತಾಂಶ ಘೋಷಣೆ ವಿಳಂಬವಾಗಲಿದೆ ಅಂತ ಚುನಾವಣಾ ಆಯೋಗ ತಿಳಿಸಿದೆ.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್, ಪ್ರತಿ ವಿಧಾನಸಭಾ ಕ್ಷೇತ್ರದ ಐದು ವಿವಿಪ್ಯಾಟ್-ಇವಿಎಂ ಮತಗಳನ್ನು ತಾಳೆ ಮಾಡಬೇಕಾದ್ದರಿಂದ ಚುನಾವಣಾ ಫಲಿತಾಂಶ ಘೋಷಣೆಗೆ ಸುಮಾರು 4 ಗಂಟೆ ತಡವಾಗುತ್ತೆ. ಒಂದು ಲೋಕಸಭಾ ಕ್ಷೇತ್ರ ವ್ಯಾಪ್ತಿಯ 40 ವಿವಿ ಪ್ಯಾಟ್ ಯಂತ್ರಳನ್ನ ಲೆಕ್ಕಾಚಾರ ಮಾಡಲು 45ನಿಮಿಷವಾದ್ರೂ ಬೇಕು. ಕೆಲ ಕ್ಷೇತ್ರದಲ್ಲಿ 20ಕ್ಕೂ ಅಧಿಕ ಅಭ್ಯರ್ಥಿಗಳಿದ್ದಾರೆ. ಅಂತಹ ಕ್ಷೇತ್ರದಲ್ಲಿ ಫಲಿತಾಂಶ ಮತ್ತಷ್ಟೂ ವಿಳಂಬವಾಗುತ್ತೆ ಅಂತ ಮಾಹಿತಿ ನೀಡಿದ್ರು.

ಇನ್ನು ಮತ ಎಣಿಕೆ ಪ್ರಕ್ರಿಯೆಗೆ 12,500 ಸಿಬ್ಬಂದಿ ನಿಯೋಜಿಸಲಾಗಿದ್ದು ರಾಜಕೀಯ ಏಜೆಂಟರ ಸಮ್ಮುಖದಲ್ಲಿ ಎಣಿಕೆ ನೆಡೆಸಲಾಗುತ್ತೆ. ಹಾಗೂ ಸಂಪೂರ್ಣವಾಗಿ ಇದರ ವಿಡಿಯೋ ಚಿತ್ರೀಕರಿಸಲಾಗುತ್ತೆ ಎಂದ್ರು. ಹಾಗೇ ಮೊದಲ ಫಲಿತಾಂಶ 3 ಗಂಟೆ ಹೊತ್ತಿಗೆ ಹೊರಬೀಳಬಹುದು, ಇನ್ನು ಎಲ್ಲಾ ಕ್ಷೇತ್ರಗಳ ಫಲಿತಾಂಶ ಸಂಜೆ 6 ಗಂಟೆ ವೇಳೆಗೆ ಪ್ರಕಟವಾಗಲಿದೆ ಅಂತ ಸಂಜೀವ್ ಕುಮಾರ್ ಮಾಹಿತಿ ನೀಡಿದ್ದಾರೆ.

ನಾಳೆ ಎಲೆಕ್ಷನ್ ರಿಸಲ್ಟ್ ದಿನ ನೀವೇನಾದ್ರೂ ಈ ತಪ್ಪು ಮಾಡಿದ್ರೆ ಜೈಲು ಗ್ಯಾರೆಂಟಿ. ಯಾಕೆ ಅಂತ ತಿಳಿದುಕೊಳ್ಳೋಕೆ ಈ ವಿಡಿಯೋ ಮಿಸ್ ಮಾಡದೇ ನೋಡಿ.

- Advertisement -

Latest Posts

Don't Miss