- Advertisement -
ಕರ್ನಾಟಕ ಟಿವಿ : ಕಳೆದೊಂದೂವರೆ ತಿಂಗಳಿನಿಂದ ಸೀರಿಯಲ್ ಶೂಟಿಂಗ್ ಸ್ಟಾಪ್ ಆಗಿತ್ತು.. ಹೀಗಾಗಿ ಮನೆಯಲ್ಲಿ ಮಹಿಳೆಯರೆಲ್ಲಾ ಮತ್ತೆ ರಿಪೀಟ್ ಶೋ ಯಾಕಪ್ಪ ನೊಡೋದು ಅಂತ ರಿಮೋಟ್ ಅನ್ನ ಗಂಡಂದಿರ ಕೈಗೆ ಕೊಟ್ಟಿದ್ರು.. ಇದೀಗ ಧಾರವಾಹಿ ಶೂಟಿಂಗ್ ಗೆ ಸರ್ಕಾರ ಷರತ್ತು ಬದ್ಧ ಗ್ರೀನ್ ಸಿಗ್ನಲ್ ನೀಡಿದೆ.. ಇಂದು ಕಿರುತೆರೆ ಕಲಾವಿದರ ಸಂಘ ಸಿಎಂ ಯಡಿಯೂರಪ್ಪ ಭೇಟಿ ಮಾಡಿ ಚಿತ್ರೀಕರಣಕ್ಕೆ ಅವಕಾಶ ಕೊಡುವಂತೆ ಕೇಳಿಕೊಂಡಿದ್ರು.. ಆದ್ರೆ, ಮನೆ ಒಳಗೆ ಮಾತ್ರ ಸೀರಿಯಲ್ ಶೂಟಿಂಗ್ ಮಾಡಬೇಕು.. ರಸ್ತೆಯಲ್ಲಿ ಶೂಟಿಂಗ್ ಮಾಡದಂತೆ ಸಚಿವ ಅಶೋಕ್ ಹೇಳಿದ್ದಾರೆ. ಈ ನಡುವೆ ರಿಯಾಲಿಟಿ ಶೋ ಹಾಗೂ ಸಿನಿಮಾ ಶೂಟಿಂಗ್ ಮಾಡದಂತೆ ಸರ್ಕಾರ ಹೇಳಿದೆ..

ಶಿವಕುಮಾರ್ ಬೆಸಗರಹಳ್ಳಿ, ಕರ್ನಾಟಕ ಟಿವಿ, ಬೆಂಗಳೂರು
- Advertisement -