Special Interview: ಯೂತ್ ಕಾಂಗ್ರೆಸ್ ಅಧ್ಯಕ್ಷ ಕಾಂಗ್ರೆಸ್ ಯುವ ನಾಯಕ ನಲಪಾಡ್ ಹ್ಯಾರಿಸ್ ಸಂದರ್ಶನದಲ್ಲಿ ಮಾತನಾಡಿದ್ದು, ತಮ್ಮ ಕೆಲಸದ ಬಗ್ಗೆ ವಿವರಿಸಿದ್ದಾರೆ.
ದೇವರ ದಯೆಯಿಂದ ನಾನು ಪೋಸಿಷನ್‌ನಲ್ಲಿ ಇಲ್ಲದಿದ್ದರೂ ಪ್ರತಿದಿನ ನಮ್ಮ ಮನೆಯ ಮುಂದೆ ದಿನಬೆಳಗಾದರೆ ರಾಜ್ಯದ ಹಲವು ಯುವಕರು ಬಂದು ನಿಂತಿರ್ತಾರೆ. ಧಾರವಾಡ, ಹುಬ್ಬಳ್ಳಿ, ಬೆಳಗಾವಿ ಹೀಗೆ ಅನೇಕ ಕಡೆಯಿಂದ ಯುವಕರು ಪ್ರತಿದಿನ ನಮ್ಮ ಮನೆ ಮುಂದೆ ಬಂದು ನಂತಿರುತ್ತಾರೆ. 30ರಿಂದ 50 ಜನ ಯುವಕರಾದ್ರೂ ಬಂದಿರ್ತಾರೆ ಎಂದು ಹೇಳ್ತಾರೆ ನಲಪಾಡ್.
ಹಾಗೆ ಬಂದವರು ಏನಾದ್ರೂ ಸಮಸ್ಯೆ ಹೇಳ್ತಾರೆ. ಆಗ ನಾನು ಎಸ್ಪಿ, ಡಿಸಿ, ಐಜಿ ಯಾರಿಗಾದ್ರೂ ಕಾಲ್ ಮಾಡಿ, ನಾನು ನಲಪಾಡ್ ಇಂಥ ಸಮಸ್ಯೆ ಇದೆ ಸ್ವಲ್ಪ ಸರಿ ಮಾಡಿ ಎಂದು ಹೇಳಾದಗ, ಯಾರು ನಲಪಾಡ್ ಎನ್ನದೇ, ಹೇಳಿ ಸರ್ ಏನ್ ಮಾಡ್ಬೇಕು ಎಂದು ಕೇಳ್ತಾರೆ. ಅಂಥ ಸ್ಥಿತಿಯಲ್ಲಿ ನಾನು ಇದ್ದೀನಿ ಎಂದಿದ್ದಾರೆ ನಲಪಾಡ್. ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.




