Thursday, July 10, 2025

Latest Posts

ಕರ್ನಾಟಕದಲ್ಲೂ ಕಾರ್ಮಿಕರ ಹಕ್ಕುಗಳಿಗೆ ಕತ್ತರಿ..!

- Advertisement -

ಕರ್ನಾಟಕ : ಪಂಜಾಬ್. ಉತ್ತರಪ್ರದೇಶ, ಮಧ್ಯಪ್ರದೇಶದಲ್ಲಿ ಕಾರ್ಮಿಕ ಹಕ್ಕುಗಳನ್ನ ಮೊಟಕುಗೊಳಿಸಲಾಗಿತ್ತು.. ಇದೀಗ ಕರ್ನಾಟಕದಲ್ಲೂ ಸಹ ಕಾರ್ಮಿಕರ ಹಕ್ಕುಗಳನ್ನ ಮೊಟಕುಗೊಳಿಸುವಂತಹ ಕೆಲಸಕ್ಕೆ ಸಿಎಂ ಯಡಿಯೂರಪ್ಪ ಕೈಹಾಕಿದ್ದಾರೆ. ಗುತ್ತಿಗೆ ಕಾರ್ಮಿಕರ ಹಕ್ಕುಗಳು ಹಾಗೂ ಸರಿಯಾದದ ಸಮಯಕ್ಕೆ ಸಂಬಳ ಕೇಳುವ ಹಕ್ಕನ್ನ ಕಸಿದುಕೊಳ್ಳುವುದು ಸೇರಿದಂತೆ ಹಲವು ಹಕ್ಕುಗಳನ್ನ ಸರ್ಕಾರ ಮೊಟಕುಗಿಳಿಸಿ ಸುಗ್ರೀವಾಜ್ಞೆ ಹೊರಡಿಸಿದೆ. ಇದನ್ನ ತುರ್ತು ವಿಧಾನಸಭಾ ಅಧಿವೇಶನ ಕರೆದು ಚರ್ಚೆ ಮಾಡಲಿ. ಅದನ್ನ ಬಿಟ್ಟು ಉತ್ತರ ಭಾರತದ ರಾಜ್ಯಗಳು ಮಾಡಿದ್ರು ಅಂತ ಕರ್ನಾಟಕದಲ್ಲೂ ಮಾಡೋದು ಸರಿ ಇಲ್ಲ. ಕಾರ್ಖಾನೆಗಳು ಉಳಿಬೇಕು ಸರಿ, ಹಾಗಂತ ಕಾರ್ಮಿಕರಿಗೆ ಅನ್ಯಾಯ ಮಾಡೋಒದು ಸರಿ ಇಲ್ಲಅಂತ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಒತ್ತಾಯ ಮಾಡಿದ್ರು.

ಪೊಲಿಟಿಕಲ್ ಬ್ಯೂರೋ, ಕರ್ನಾಟಕ ಟಿವಿ

- Advertisement -

Latest Posts

Don't Miss