- Advertisement -
ಕರ್ನಾಟಕ ಟಿವಿ : ಲಾಕ್ ಡೌನ್ ಹಿನ್ನೆಲೆ ಜೀವನಕ್ಕೆ ಕಷ್ಟವಾಗಿದೆ ಅಂತ ರಾಜ್ಯ ಸರ್ಕಾರ ರೈತರು, ಕಾರ್ಮಿಕರು ಹಾಗೂ ಚಾಲಕರಿಗೆ ಸಹಾಯಧನ ನೀಡ್ತಿದೆ.. ಆಟೋ ಹಾಗೂ ಕ್ಯಾಬ್ ಚಾಲಕರು ಸರ್ಕಾರದಿಂದ ಸಿಗುವ 5000 ಪರಿಹಾರ ಹೇಗೆ ಪಡೆದುಕೊಳ್ಳುವುದು ಎಂಬ ಪ್ರಶ್ನೆಗೆ ಸಾರಿಗೆ ಆಯುಕ್ತರು ಇದೀಗ ಮಾಹಿತಿ ನೀಡಿದ್ದಾರೆ.. ಆನ್ ಲೈನ್ ನಲ್ಲಿ ಸೇವಾ ಸಿಂಧು ಪೋರ್ಟಲ್ ಮೂಲಕ ಆಟೋ ಹಾಗೂ ಕ್ಯಾಬ್ ಚಾಲಕರ ಸಹಾಯನಿಧಿಗೆ ಸಂಬಂಧ ಪಟ್ಟ ಫಾರ್ಮ್ ನಲ್ಲಿ ನಿಮ್ಮ ಮಾಹಿತಿಯನ್ನ ಭರ್ತಿ ಮಾಡಿ ಸಲ್ಲಿಸುವಂತೆ ತಿಳಿಸಿದ್ದಾರೆ. ಇನ್ನು ಹೀಗೆ ಸರಿಯಾದ ಮಾಹಿತಿ ನೀಡಿದ ಚಾಲಕರಿಗೆ ಆನ್ ಲೈನ್ ಮೂಲಕವೇ ಬ್ಯಾಂಕ್ ಅಕೌಂಟ್ ಗೆ ಸಹಾಯಧನ ವರ್ಗಾವಣೆ ಆಗಲಿದೆ ಅಂತ ಸಾರಿಗೆ ಆಯುಕ್ತರು ತಿಳಿಸಿದ್ದಾರೆ..
- Advertisement -