ಎಲ್‌ಪಿಜಿ ಗ್ರಾಹಕರೇ ಗಮನಿಸಿ – ಈ ಡೆಡ್‌ಲೈನ್‌ ಮಿಸ್ ಮಾಡಲೇಬೇಡಿ!

ನೀವೂ ಕೂಡ ಮನೆಯಲ್ಲಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬಳಸುತ್ತೀರಾ? ಹಾಗಾದ್ರೆ ಈ ಸುದ್ದಿ ಪಕ್ಕಾ ನಿಮ್ಮ ಗಮನಕ್ಕೆ ಇರಲೇಬೇಕು. ಯಾಕಂದ್ರೆ, ಗ್ಯಾಸ್ ಇ-ಕೆವೈಸಿ ಮಾಡಿಸೋಕೆ ಈಗ ಕೊನೆಯ ಗಡುವು ಹತ್ತಿರ ಬಂದಿದೆ! ಬರೀ ಕೆಲವೇ ದಿನಗಳು ಬಾಕಿ ಇವೆ ಎಂದು ಹೇಳಲಾಗ್ತಿದೆ!

ಹೌದು, ಇಂಡಿಯನ್ ಆಯಿಲ್, ಭಾರತ್ ಗ್ಯಾಸ್ ಹಾಗೂ ಎಚ್‌ಪಿ ಗ್ಯಾಸ್ ಕಂಪನಿಗಳು ಈಗ ಗ್ರಾಹಕರಿಗೆ ಸತತವಾಗಿ ಮೆಸೇಜ್ ಕಳಿಸ್ತಿವೆ. ಬಹುತೇಕ ಕಡೆಗಳಲ್ಲಿ ಆಗಸ್ಟ್ 15 ಮತ್ತು 16 ರೊಳಗೆ ಇ-ಕೆವೈಸಿ ಮುಗಿಸಿ ಅಂತ ಎಚ್ಚರಿಕೆ ನೀಡಲಾಗಿದೆ. ಇನ್ನು ಮಂಗಳೂರು ಸೇರಿದಂತೆ ಕೆಲವು ಕಡೆಗಳಲ್ಲಂತೂ ಆಗಸ್ಟ್ 15 ನೇ ತಾರೀಖೇ ಲಾಸ್ಟ್ ಡೇಟ್ ಅಂತಾನೂ ಹೇಳಲಾಗಿದೆ. ಒಂದು ವೇಳೆ ನಿಮ್ಮ ಮೆಸೇಜ್ ಬಾಕ್ಸ್ ಚೆಕ್ ಮಾಡಿಲ್ಲ ಅಂದ್ರೆ, ಈಗಲೇ ಒಮ್ಮೆ ನೋಡ್ಕೊಳ್ಳಿ!

ಎಸ್ ಇದರ ನಡುವೆ ‘ಬಹಳ ಜನರಿಗೆ ಒಂದು ಭಯ ಇರುತ್ತೆ – ಇ-ಕೆವೈಸಿ ಮಾಡ್ಸಿಲ್ಲ ಅಂದ್ರೆ ಗ್ಯಾಸ್ ಕನೆಕ್ಷನ್ ಅನ್ನೇ ಕಟ್ ಮಾಡಿಬಿಡ್ತಾರಾ?’ ಅಂತ. ಖಂಡಿತ ಇಲ್ಲ! ತೈಲ ಸಂಸ್ಥೆಗಳು ಸ್ಪಷ್ಟನೆ ಕೊಟ್ಟಿರೋ ಪ್ರಕಾರ, ಕನೆಕ್ಷನ್ ಏನು ರದ್ದಾಗಲ್ಲ. ಆದ್ರೆ, ತಾತ್ಕಾಲಿಕವಾಗಿ ಸಸ್ಪೆಂಡ್ ಆಗೋ ಚಾನ್ಸ್ ಇರುತ್ತೆ. ಅದರಲ್ಲೂ ಮುಖ್ಯವಾಗಿ ಉಜ್ವಲ ಯೋಜನೆ ಅಡಿಯಲ್ಲಿ ಬರುವವರಿಗೆ ಬರೋ ₹300 ಸಬ್ಸಿಡಿ ಹಣ ನಿಂತುಹೋಗಬಹುದು. ಸಾಮಾನ್ಯ ಗ್ರಾಹಕರಿಗೂ ಸಬ್ಸಿಡಿ ಸಿಗದೆ ತೊಂದರೆಯಾಗಬಹುದು, ಹಾಗಾಗಿ ರಿಸ್ಕ್ ತಗೋಬೇಡಿ.

ಗ್ಯಾಸ್ ಏಜೆನ್ಸಿ ಹತ್ರ ಹೋಗಿ ಕ್ಯೂ ನಿಲ್ಲೋಕೆ ಟೈಮ್ ಇಲ್ವಾ? ತಲೆಕೆಡಿಸಿಕೊಳ್ಳಬೇಡಿ ‘ನೀವೇ ಮನೆಯಲ್ಲಿ ಕುಳಿತು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲೇ ಇ-ಕೆವೈಸಿ ಮುಗಿಸಬಹುದು. ಅದು ಹೇಗೆ ಅಂತೀರಾ? ತುಂಬಾ ಸಿಂಪಲ್!

ಮೊದಲು ನಿಮ್ಮ ಗ್ಯಾಸ್ ಕಂಪನಿಗೆ ತಕ್ಕಂತೆ IndianOil One, Hello BPCL ಅಥವಾ HP Pay ಆಪ್ ಡೌನ್‌ಲೋಡ್ ಮಾಡಿಕೊಳ್ಳಿ. ಇದರ ಜೊತೆಗೆ Aadhaar Face RD ಆಪ್ ಕೂಡ ಡೌನ್‌ಲೋಡ್ ಮಾಡ್ಕೊಳ್ಳಿ. ಈಗ ನಿಮ್ಮ ಗ್ಯಾಸ್ ನಂಬರ್‌ಗೆ ಲಿಂಕ್ ಆಗಿರೋ ಮೊಬೈಲ್ ನಂಬರ್ ಹಾಕಿ ಒಟಿಪಿ ಮೂಲಕ ಲಾಗಿನ್ ಆಗಿ. ಅಲ್ಲಿ ‘e-KYC’ ಅಥವಾ ‘My Profile’ ಆಪ್ಷನ್ ಸಿಗುತ್ತೆ, ಅದನ್ನ ಕ್ಲಿಕ್ ಮಾಡಿ. ಕೊನೆಯದಾಗಿ ನಿಮ್ಮ ಫೇಸ್ ಸ್ಕಾನ್ ಮಾಡಿದ್ರೆ ಸಾಕು, ನಿಮಿಷಗಳಲ್ಲಿ ನಿಮ್ಮ ಇ-ಕೆವೈಸಿ ಮುಗಿಯುತ್ತೆ!

ಹಾಗಾದರೆ ಇನ್ನು ತಡ ಯಾಕೆ ಮಾಡ್ತೀರಾ? ಈ ಕೂಡಲೇ ನಿಮ್ಮ ಫೋನ್ ತೆಗೆದು ಇ-ಕೆವೈಸಿ ಕಂಪ್ಲೀಟ್ ಮಾಡಿ, ಸಬ್ಸಿಡಿಯನ್ನ ಸೇವ್ ಮಾಡ್ಕೊಳ್ಳಿ.

About The Author