ಪ್ರಾಂತ್ಯವಾರು ಯಾವ ಪಕ್ಷಕ್ಕೆ ಎಷ್ಟು ಸೀಟು.? ಕಲ್ಯಾಣ ಕರ್ನಾಟಕ..

ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಕರ್ನಾಟಕ ಟಿವಿ ಡಿಸೆಂಬರ್ ತಿಗಂಳ ಸರ್ವೆ ನಡೆಸಿದೆ. ಎಲೆಕ್ಷನ್‌ಗೆ ಇನ್ನು 4 ತಿಂಗಳಷ್ಟೇ ಬಾಕಿ ಇದ್ದು, ಯಾವ ಕ್ಷೇತ್ರದಲ್ಲಿ ಯಾವ ಪಕ್ಷ ಎಷ್ಟರ ಮಟ್ಟಿಗೆ ಮೇಲುಗೈ ಸಾಧಿಸುತ್ತದೆ ಅನ್ನೋ ಬಗ್ಗೆ ಸಮೀಕ್ಷೆ ಮಾಡಲಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಜನ ಯಾರ ಬಗ್ಗೆ ಒಲವು ತೋರಿದ್ದಾರೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಕರ್ನಾಟಕ ವಿಧಾನಸಭೆ ಅತಂತ್ರ..!? ಕರ್ನಾಟಕ ಟಿವಿ ಡಿಸೆಂಬರ್​ ಸರ್ವೇ ಟ್ರೆಂಡ್ ಹೀಗಿದೆ ನೋಡಿ

41 ವಿಧಾನಸಭಾ ಕ್ಷೇತ್ರವನ್ನ ಹೊಂದಿರುವ ಕಲ್ಯಾಣ ಕರ್ನಾಟಕದಲ್ಲಿ 6 ಜಿಲ್ಲೆಗಳು ಸೇರಿದೆ. 9 ಸ್ಥಾನವನ್ನು ಹೊಂದಿರುವ ಕಲಬುರಗಿಯಲ್ಲಿ ಬಿಜೆಪಿ 4, ಕಾಂಗ್ರೆಸ್ 5, ಜೆಡಿಎಸ್ ಮತ್ತು ಜನಾರ್ಧನ ರೆಡ್ಡಿ ಪಾರ್ಟಿ ಸೊನ್ನೆ ಸ್ಥಾನದಲ್ಲಿ ಮುಂದಿದೆ.

ಯಾದಗಿರಿಯಲ್ಲಿ 4 ಸ್ಥಾನವಿದ್ದು, ಬಿಜೆಪಿ 1, ಕಾಂಗ್ರೆಸ್ 2, ಜೆಡಿಎಸ್ 1, ರೆಡ್ಡಿ ಪಾರ್ಟಿ ಸೊನ್ನೆ ಸ್ಥಾನದಲ್ಲಿ ಮುನ್ನಡೆ ಹೊಂದಿದೆ.

ಬೀದರ್‌ನಲ್ಲಿ 6 ವಿಧಾನಸಭಾ ಕ್ಷೇತ್ರವಿದ್ದು, ಇದರಲ್ಲಿ ಬಿಜೆಪಿ 2, ಕಾಂಗ್ರೆಸ್ 4, ಜೆಡಿಎಸ್, ಮತ್ತು ರೆಡ್ಡಿ ಪಾರ್ಟಿ ಸೊನ್ನೆ ಸ್ಥಾನದಲ್ಲಿದೆ.

ರಾಯಚೂರು ವಿಧಾನಸಭಾ ಕ್ಷೇತ್ರದಲ್ಲಿ 7 ಸ್ಥಾನವಿದ್ದು, ಬಿಜೆಪಿ 1, ಕಾಂಗ್ರೆಸ್ 2, ಜೆಡಿಎಸ್ 4, ಮತ್ತು ರೆಡ್ಡಿ ಪಾರ್ಟಿ 0 ಸ್ಥಾನದಲ್ಲಿದೆ.

ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ 5 ಸ್ಥಾನಗಳಿದ್ದು, ಇಲ್ಲಿ ಕಾಂಗ್ರೆಸ ಮತ್ತು ಜೆಡಿಎಸ್ ಸೊನ್ನೆ ಸ್ಥಾನದಲ್ಲಿದ್ರೆ, ಬಿಜೆಪಿಗೆ 1 ಸ್ಥಾನ ಮತ್ತು ರೆಡ್ಡಿ ಪಾರ್ಟಿಗೆ 4 ಸ್ಥಾನದಲ್ಲಿ ಮುನ್ನಡೆ ಇದೆ.

ಬಳ್ಳಾರಿ ಮತ್ತು ವಿಜಯನಗರದಲ್ಲಿ 10 ವಿಧಾನಸಭಾ ಕ್ಷೇತ್ರಗಳಿದ್ದು, ಜೆಡಿಎಸ್ ಮತ್ತು ರೆಡ್ಡಿ ಪಾರ್ಟಿಗೆ ಸೊನ್ನೆ ಸ್ಥಾನ ಸಿಕ್ಕಿದ್ದು, ಬಿಜೆಪಿಗೆ 1 ಸ್ಥಾನವಿದ್ದು, ಕಾಂಗ್ರೆಸ್‌ಗೆ 9 ಸ್ಥಾನದಲ್ಲಿ ಮುನ್ನಡೆ ಇದೆ.

ಕಲಬುರಗಿಯಲ್ಲಿ 9 ವಿಧಾನಸಭಾ ಕ್ಷೇತ್ರವಿದ್ದು, ಅದರಲ್ಲಿ ಬಿಜೆಪಿ 4, ಕಾಂಗ್ರೆಸ್ 5, ಜೆಡಿಎಸ್, ರೆಡ್ಡಿ ಪಾರ್ಟಿ ಸೊನ್ನೆ ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ.

ಒಟ್ಟಾರೆಯಾಗಿ ಬಿಜೆಪಿ 10, ಕಾಂಗ್ರೆಸ್ 22, ಜೆಡಿಎಸ್ 5 ಮತ್ತು ರೆಡ್ಡಿ ಪಾರ್ಟಿ 4 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ..

ಪ್ರಾಂತ್ಯವಾರು ಯಾವ ಪಕ್ಷಕ್ಕೆ ಎಷ್ಟು ಸೀಟು..? ಮೈಸೂರು ಕರ್ನಾಟಕ..

ಕರ್ನಾಟಕ ವಿಧಾನಸಭೆ ಅತಂತ್ರ..!? ಕರ್ನಾಟಕ ಟಿವಿ ಡಿಸೆಂಬರ್​ ಸರ್ವೇ ಟ್ರೆಂಡ್

About The Author