ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಕರ್ನಾಟಕ ಟಿವಿ ಡಿಸೆಂಬರ್ ತಿಗಂಳ ಸರ್ವೆ ನಡೆಸಿದೆ. ಎಲೆಕ್ಷನ್‌ಗೆ ಇನ್ನು 4 ತಿಂಗಳಷ್ಟೇ ಬಾಕಿ ಇದ್ದು, ಯಾವ ಕ್ಷೇತ್ರದಲ್ಲಿ ಯಾವ ಪಕ್ಷ ಎಷ್ಟರ ಮಟ್ಟಿಗೆ ಮೇಲುಗೈ ಸಾಧಿಸುತ್ತದೆ ಅನ್ನೋ ಬಗ್ಗೆ ಸಮೀಕ್ಷೆ ಮಾಡಲಾಗಿದೆ. ಕರಾವಳಿ ಕರ್ನಾಟಕ ಭಾಗದಲ್ಲಿ ಜನ ಯಾರ ಬಗ್ಗೆ ಒಲವು ತೋರಿದ್ದಾರೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಕರಾವಳಿ ಕರ್ನಾಟಕದಲ್ಲಿ 19 ಕ್ಷೇತ್ರಗಳಿದ್ದು, ದಕ್ಷಿಣ ಕನ್ನಡದ 8 ಕ್ಷೇತ್ರಗಳಲ್ಲಿ, ಬಿಜೆಪಿ 5, ಕಾಂಗ್ರೆಸ್ 3 ಮತ್ತು ಜೆಡಿಎಸ್, ಇತರೇ ಪಕ್ಷಗಳು ಸೊನ್ನೆ ಸ್ಥಾನದಲ್ಲಿದೆ.
ಇನ್ನು 5 ಕ್ಷೇತ್ರವನ್ನು ಹೊಂದಿರುವ ಉಡುಪಿಯಲ್ಲಿ ಬಿಜೆಪಿಗೆ 3 ಸ್ಥಾನವಿದೆ. ಕಾಂಗ್ರೆಸ್‌ಗೆ 2 ಸ್ಥಾನವಿದ್ದು, ಜೆಡಿಎಸ್, ಇತರೆ ಪಕ್ಷಗಳ ಬಗ್ಗೆ ಜನ ಒಲವು ತೋರಿಲ್ಲ.
ಇನ್ನು 06 ಕ್ಷೇತ್ರವುಳ್ಳ ಉತ್ತರಕನ್ನಡದಲ್ಲಿ ಬಿಜೆಪಿ 3, ಕಾಂಗ್ರೆಸ್ 3 ಸ್ಥಾದಲ್ಲಿ ಮುನ್ನಡೆ ಗಳಿಸಿದ್ದು, ಜೆಡಿಎಸ್ ಮತ್ತು ಇತರೆ ಪಕ್ಷದ ಬಗ್ಗೆ ಜನ ಒಲವು ತೋರಿಲ್ಲ.
ಒಟ್ಟಾರೆಯಾಗಿ ಕರಾವಳಿ ಕರ್ನಾಟದಲ್ಲಿ ಬಿಜೆಪಿ 11 ಸ್ಥಾನದಲ್ಲಿ ಮುನ್ನಡೆ ಇದ್ದರೆ, ಕಾಂಗ್ರೆಸ್ 8 ಸ್ಥಾನದಲ್ಲಿ ಮುನ್ನಡೆಯಲ್ಲಿದೆ.
ಕರ್ನಾಟಕ ಟಿವಿ ಡಿಸೆಂಬರ್ ಸಮೀಕ್ಷೆ | ದಾವಣಗೆರೆಯ 7 ಕ್ಷೇತ್ರಗಳಲ್ಲಿ ಬಿಜೆಪಿ 3, ಕಾಂಗ್ರೆಸ್ 4 ಸ್ಥಾನಗಳಲ್ಲಿ ಮುನ್ನಡೆ