ಕರ್ನಾಟಕ ಟಿವಿ ನಡೆಸಿದ ಪ್ರಾಂತ್ಯವಾರು ಮೆಗಾ ಸರ್ವೆಯಲ್ಲಿ ಮೈಸೂರು ಕರ್ನಾಟದಲ್ಲಿ ಇರುವ 61 ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ.
ತುಮಕೂರು ವಿಧಾನಸಭಾ ಕ್ಷೇತ್ರದಲ್ಲಿ 11 ಸ್ಥಾನಗಳಿದ್ದು, ಬಿಜೆಪಿಗೆ 3 ಸೀಟು, ಕಾಂಗ್ರೆಸ್ 5 ಸೀಟು, ಮತ್ತು ಜೆಡಿಎಸ್ಗೆ 3 ಸೀಟ್ ಸಿಗುವ ಭರವಸೆ ಇದೆ.
ಚಿಕ್ಕಬಳ್ಳಾಪುರದಲ್ಲಿ 5 ವಿಧಾನಸಭಾ ಕ್ಷೇತ್ರವಿದ್ದು, ಇಲ್ಲಿ ಪಕ್ಷೇತರರೇ ಹೆಚ್ಚು ಗೆಲ್ಲಲಿದ್ದಾರೆಂದು ಅಂದಾಜಿಸಲಾಗಿದೆ. ಬಿಜೆಪಿ 1, ಕಾಂಗ್ರೆಸ್ 1, ಜೆಡಿಎಸ್1 ಮತ್ತು ಪಕ್ಷೇತರರು 2 ಸೀಟ್ ಗೆಲ್ಲುವ ಸಾಧ್ಯತೆ ಇದೆ.
ಕೋಲಾರದಲ್ಲಿ 5 ವಿಧಾನಸಭಾ ಕ್ಷೇತ್ರಗಳಿದ್ದು, ಇಲ್ಲಿ ಬಿಜೆಪಿ ಗೆಲ್ಲುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗಿದೆ. ಯಾಕಂದ್ರೆ ಕಾಂಗ್ರೆಸ್ ಪರ ಒಲವು ಹೆಚ್ಚಿದ್ದು, 2 ಸೀಟ್ ಜೆಡಿಎಸ್ ಪಾಲಾಗುವ ಸಾಧ್ಯತೆ ಇದೆ.
ಬೆಂಗಳೂರು ಗ್ರಾಮಂತರದಲ್ಲಿ 4 ವಿಧಾನಸಭಾ ಕ್ಷೇತ್ರಗಳಿದ್ದು, ಇಲ್ಲಿ ಬಿಜೆಪಿ 1, ಕಾಂಗ್ರೆಸ್ 3 ಸೀಟ್ ಗೆಲ್ಲುವ ಸಾಧ್ಯತೆ ಇದೆ. ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ, ಇವಿಷ್ಟು ಇಲ್ಲಿನ ವಿಧಾನಸಭಾ ಕ್ಷೇತ್ರಗಳಾಗಿದ್ದು, ಕರ್ನಾಟಕ ಟಿವಿ ಸರ್ವೆ ಪ್ರಕಾರ ಇಲ್ಲಿ ಕಾಂಗ್ರೆಸ್ ಗೆಲ್ಲುವ ವಿಶ್ವಾಸವಿದೆ.
ರಾಮನಗರ ಹೈವೋಲ್ಟೇಜ್ ಕ್ಷೇತ್ರವಾಗಿದ್ದು, ಇಲ್ಲಿ 4 ವಿಧಾನಸಭಾ ಕ್ಷೇತ್ರಗಳಿದೆ. ಇದು ಕೂಡ ಜೆಡಿಎಸ್ ಪಕ್ಷವನ್ನ ಬೆಂಬಲಿಸುವ ಕ್ಷೇತ್ರವೇ ಆಗಿದ್ದರೂ, ಕಾಂಗ್ರೆಸ್ ಮತ್ತು ಬಿಜೆಪಿಗೆ ತಲಾ ಒಂದೊಂದು ಸ್ಥಾನ ಗೆಲ್ಲುವ ಅವಕಾಶವಿದೆ.
ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ 7 ಸ್ಥಾನಗಳಿದ್ದು, ಇದು ಜೆಡಿಎಸ್ ಕೋಟೆ ಅಂತಲೇ ಹೇಳಲ್ಪಡುವ ಕ್ಷೇತ್ರವೆಂದು ಕರೆಯಲ್ಪಟ್ಟರೂ ಕೂಡ, ಈ ಬಾರಿ ಬಿಜೆಪಿಯೂ ಸಮವಾದ ಪೈಪೋಟಿ ಕೊಡಲಿದೆ. ಜೆಡಿಎಸ್ 3 ಸ್ಥಾನ, ಬಿಜೆಪಿ 2 ಸ್ಥಾನ ಮತ್ತು ಕಾಂಗ್ರೆಸ್ 2 ಸ್ಥಾನ ಗೆಲ್ಲುವ ಸಾಧ್ಯತೆ ಇದೆ.
ಹಾಸನದಲ್ಲಿ ಬಿಜೆಪಿ ಜೆಡಿಎಸ್ ನಡುವೆ ಜಿದ್ದಾಜಿದ್ದಿನ ಫೈಟ್ ಇದ್ದು, ಈ ಬಾರಿ ಹಾಸನದ ಸಿಂಹಾಸನ ಏರುವುದು ಯಾರೆಂಬ ಕುತೂಹಲ, ಎಲ್ಲರಲ್ಲೂ ಮನೆ ಮಾಡಿದೆ. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಜೆಡಿಎಸ್ ಜಯಭೇರಿ ಬಾರಿಸುವ ಸಾಧ್ಯತೆ ಇದ್ದು, 4 ಸೀಟ್ ಈ ಪಕ್ಷವೇ ಬಾಚಿಕೊಳ್ಳುಬಹುದು ಎಂದು ಅಂದಾಜಿಸಲಾಗಿದೆ. ಬಿಜೆಪಿ 2 ಸ್ಥಾನ, ಕಾಂಗ್ರೆಸ್ 1 ಸ್ಥಾನ ಪಡೆಯುವ ಸಾಧ್ಯತೆ ಇದೆ.
ಕೊಡಗಿನಲ್ಲಿ ಎರಡು ಸ್ಥಾನವಿದ್ದು, ಆ ಎರಡೂ ಸ್ಥಾನವನ್ನು ಬಿಜೆಪಿ ಗೆಲ್ಲಲಿದೆ.
ಮೈಸೂರು ಜಿಲ್ಲೆಯಲ್ಲಿ 11 ಕ್ಷೇತ್ರಗಳಿದ್ದು, ಇಲ್ಲಿ ಬಿಜೆಪಿ 2 ಸ್ಥಾನ, ಕಾಂಗ್ರೆಸ್ 6 ಸ್ಥಾನ ಮತ್ತು ಜೆಡಿಎಸ್ 3 ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಿದೆ. ವಿ.ಸೋಮಣ್ಣ ಮತ್ತು ಸಿದ್ದರಾಮಯ್ಯ ಕೂಡ ಇಲ್ಲೇ ಸ್ಪರ್ಧಿಸುತ್ತಿದ್ದಾರೆ. ಪಿರಿಯಾಪಟ್ಟಣ, ಕೃಷ್ಣರಾಜನಗರ, ಹುಣಸೂರು, ಹೆಚ್.ಡಿ.ಕೋಟೆ, ನಂಜನಗೂಡು, ಚಾಮುಂಡೇಶ್ವರಿ, ಕೃಷ್ಣರಾಜ ಕ್ಷೇತ್ರ, ಚಾಮರಾಜ ಕ್ಷೇತ್ರ, ನರಸಿಂಹ ರಾಜ ಕ್ಷೇತ್ರ, ವರುಣಾ, ಟೀ ನರಸಿಪುರ ಕ್ಷೇತ್ರಗಳಿದ್ದು, ಇಲ್ಲಿನ ಜನರಿಗೆ ಕಾಂಗ್ರೆಸ್ ಕಡೆ ಹೆಚ್ಚು ಒಲವಿರುವ ಹಾಗಿದೆ.
ಚಾಮರಾಜನಗರದಲ್ಲಿ 4 ಕ್ಷೇತ್ರಗಳಿದ್ದು, 2 ಬಿಜೆಪಿ ಮತ್ತು 2 ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ಇದೆ. ಚಾಮರಾಜನಗರ, ಹನೂರು, ಗುಂಡ್ಲುಪೇಟೆ, ಕೊಳ್ಳೇಗಾಲ ಇವಿಷ್ಟು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬಿಜೆಪಿ ನಡುವೆ ತೀವ್ರ ಪೈಪೋಟಿ ಇದ್ದು, ಇಬ್ಬರಿಗೂ ಸಮಬಲ ಬರುವ ಸಾಧ್ಯತೆ ಇದೆ.
‘ನಾನು ಇಂಜಿನಿಯರ್ ಆಗಬೇಕು ಎಂಬುದು ನನ್ನ ಅಪ್ಪನ ಕನಸಾಗಿತ್ತು, ಆದರೆ… ‘