Sunday, September 8, 2024

Latest Posts

ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023 : ಕೋಲಾರ ಜಿಲ್ಲೆಯ 6 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.?

- Advertisement -

Political News:

Feb:26:ಬೆಂಗಳೂರು : ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಇದೆ. ಈಗಾಗ್ಲೇ ಎಲ್ಲಾ ಪಕ್ಷಗಳು ಬೇರೆ ಬೇರೆ ಹೆಸರಲ್ಲಿ ಯಾತ್ರೆ, ಸಮಾವೇಶ, ಸಮಾರಂಭ, ಕಾರ್ಯಕ್ರಮಗಳನ್ನ ಶುರು ಮಾಡಿವೆ. ಮಾರ್ಚ್​ ಕೊನೇ ವೇಳೆಗೆ ಚುನಾವಣೆ ಘೋಷಣೆಯೂ ಆಗಿರುತ್ತೆ. ಹೀಗಾಗಿ ಯಾವ ಪಕ್ಷಕ್ಕೆ ಬಹುಮತ ಬರುತ್ತೆ.? ಯಾವ ಪಕ್ಷಕ್ಕೆ ಎಷ್ಟು ಸೀಟು ಬರುತ್ತೆ.? ಯಾವ ಕ್ಷೇತ್ರದಲ್ಲಿ ಯಾರು ಗೆಲ್ಲಬಹುದು ಅನ್ನೋ ಕುತೂಹಲ ಇಡೀ ರಾಜ್ಯಾದ್ಯಂತ ಮನೆ ಮಾಡಿದೆ. ಈ ನಡುವೆ, ಕರ್ನಾಟಕದ ನಂಬರ್ 01 ಡಿಜಿಟಲ್ ಮೀಡಿಯಾ, ಕರ್ನಾಟಕ ಟಿವಿ ಡಿಜಿಟಲ್ ಮಾಧ್ಯಮ ಕಳೆದ 4 ತಿಂಗಳಿನಿಂದ ಪ್ರತಿ ತಿಂಗಳು ಎಲ್ಲಾ 224 ಕ್ಷೇತ್ರಗಳ ಟ್ರೆಂಡ್ ನೀಡ್ತಿದೆ. ಅದರಂತೆ ಫೆಬ್ರವರಿಯಲ್ಲಿ ಯಾವ ಪಕ್ಷಕ್ಕೆ ಎಷ್ಟು ಸೀಟು.? ಯಾವ ಜಿಲ್ಲೆಯಲ್ಲಿ ಯಾರ ಪ್ರಾಬಲ್ಯ ಹೇಗಿದೆ.? ಕ್ಷೇತ್ರವಾರು ಟ್ರೆಂಡ್ ಏನು ಅನ್ನೋ ಸಮೀಕ್ಷೆಯನ್ನ ಪ್ರಸಾರ ಮಾಡಿದೆ. ಕರ್ನಾಟಕ ಟಿವಿಯ ಫೆಬ್ರವರಿ ಸರ್ವೆಯ ಟ್ರೆಂಡ್ ನೋಡೋದಾದ್ರೆ..

ಕೋಲಾರದ 6 ಕ್ಷೇತ್ರದಲ್ಲಿ ಯಾರಿಗೆ ಎಷ್ಟು ಸೀಟು.?
ಕರ್ನಾಟಕ ಟಿವಿ ಫೆಬ್ರವರಿ ಟ್ರೆಂಡ್​

ಹಳೇ ಮೈಸೂರು ಭಾಗದ, ಬೆಂಗಳೂರು ಪಕ್ಕದಲ್ಲೇ ಇರೋ ಜಿಲ್ಲೆ ಕೋಲಾರ. ಆಂಧ್ರ ಹಾಗೂ ತಮಿಳುನಾಡಿಗೆ ಗಡಿ ಹಂಚಿಕೊಂಡಿರೋ ಕೋಲಾರ ಈ ಬಾರಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಮಾಡೋದಾಗಿ ಹೇಳಿರೋದು ರಾಜ್ಯ ರಾಜಕೀಯದಲ್ಲೇ ಸಂಚಲನ ಉಂಟು ಮಾಡಿದೆ. ಹೀಗಾಗಿ ಕೋಲಾರ ಕ್ಷೇತ್ರದ ಜೊತೆ ಕೋಲಾರ ಜಿಲ್ಲೆ ಸಾಕಷ್ಟು ಕುತೂಹಲ ಹಾಗೂ ಚರ್ಚೆಗೆ ಕಾರಣವಾಗಿದೆ.

ಶ್ರೀನಿವಾಸಪುರ, ಮುಳಬಾಗಿಲು, ಕೆಜಿಎಫ್, ಬಂಗಾರಪೇಟೆ, ಕೋಲಾರ ಹಾಗೂ ಮಾಲೂರು. ಕೋಲಾರ ಜಿಲ್ಲೆಯಲ್ಲಿ ಬರುವ 6 ಕ್ಷೇತ್ರಗಳು. ಕಳೆದ ಬಾರಿ ಬಿಜೆಪಿ ಒಂದೇ ಒಂದು ಸ್ಥಾನ ಗೆದ್ದಿರಲಿಲ್ಲ. ಹೇಗಾದ್ರೂ ಮಾಡಿ ಮತ್ತೆ ಖಾತೆ ತೆರೆಯಬೇಕು ಅಂತ ಬಿಜೆಪಿ ನಾಯಕರು ಕಸರತ್ತು ಮಾಡ್ತಿದ್ದಾರೆ. ಸಿದ್ದರಾಮಯ್ಯ ಆಗಮನದಿಂದ ಕಾಂಗ್ರೆಸ್ ಜಾಸ್ತಿ ಸ್ಥಾನ ಗೆಲ್ಲಲು ತಂತ್ರಗಾರಿಕೆ ಮಾಡ್ತಿದೆ. ಜೆಡಿಎಸ್ ಕೂಡ ಹೆಚ್ಚು ಕ್ಷೇತ್ರ ಗೆಲ್ಲಲು ತಯಾರಿ ಮಾಡಿದೆ.

ಸದ್ಯ ಕೋಲಾರ ಜಿಲ್ಲೆಯ 6 ಕ್ಷೇತ್ರಗಳಲ್ಲಿ ಯಾವ ಪಕ್ಷಕ್ಕೆ ಎಷ್ಟು ಸೀಟು ಅನ್ನೋ ಕುತೂಹಲಕ್ಕೆ ಕರ್ನಾಟಕ ಟಿವಿ ಫೆಬ್ರವರಿ ಸಮೀಕ್ಷೆಯಲ್ಲಿ ಸಿಕ್ಕ ಉತ್ತರ ಏನಂದ್ರೆ, 6 ಕ್ಷೇತ್ರಗಳಲ್ಲಿ ಕಾಂಗ್ರೆಸ್ 4 ಕ್ಷೇತ್ರ, ಜೆಡಿಎಸ್ 2 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಬಿಜೆಪಿ ಮಾಲೂರು, ಕೆಜಿಎಫ್​, ಕೋಲಾರ, ಬಂಗಾರಪೇಟೆಯಲ್ಲಿ ಫೈಟ್ ಕೊಡ್ತಿದೆ. ಆದ್ರೆ, ಟಿಕೆಟ್ ವಿಚಾರವಾಗಿ ಗೊಂದಲ ಇರೋದ್ರಿಂದ ಸದ್ಯಕ್ಕೆ ಹಿನ್ನಡೆ ಅನುಭವಿಸಿದೆ.

ಕೋಲಾರ 6 ಕ್ಷೇತ್ರ ಯಾರಿಗೆ ಎಷ್ಟು.?
ಕರ್ನಾಟಕ ಟಿವಿ ಫೆಬ್ರವರಿ ಟ್ರೆಂಡ್​

ಬಿಜೆಪಿ – 0
ಕಾಂಗ್ರೆಸ್​ – 4
ಜೆಡಿಎಸ್ – 2

ಕೋಲಾರ ಯಾವ ಕ್ಷೇತ್ರಗಳಲ್ಲಿ ಯಾವ ಪಕ್ಷಕ್ಕೆ ಮುನ್ನಡೆ.?
ಕರ್ನಾಟಕ ಟಿವಿ ಫೆಬ್ರವರಿ ಟ್ರೆಂಡ್​

ಶ್ರೀನಿವಾಸಪುರ : ಜೆಡಿಎಸ್ ಮುನ್ನಡೆ
ಮುಳಬಾಗಿಲು : ಜೆಡಿಎಸ್ ಮುನ್ನಡೆ
ಕೆಜಿಎಫ್ : ಕಾಂಗ್ರೆಸ್ ಮುನ್ನಡೆ
ಬಂಗಾರಪೇಟೆ : ಕಾಂಗ್ರೆಸ್ ಮುನ್ನಡೆ
ಕೋಲಾರ : ಕಾಂಗ್ರೆಸ್ ಮುನ್ನಡೆ
ಮಾಲೂರು : ಕಾಂಗ್ರೆಸ್ ಮುನ್ನಡೆ

ಇದು ಫೆಬ್ರವರಿ ಟ್ರೆಂಡ್ ಮಾತ್ರ ಅಷ್ಟೇ. ಇನ್ನೂ ಅಭ್ಯರ್ಥಿಗಳ ಪಟ್ಟಿ ಅಧಿಕೃತವಾಗಿ ಪ್ರಕಟವಾಗಿಲ್ಲ. ಅಭ್ಯರ್ಥಿಗಳ ಪಟ್ಟಿ ಅಧಿಕೃತವಾಗಿ ಪ್ರಕಟವಾದ ಬಳಿಕ ಜೊತೆಗೆ ಚುನಾವಣೆ ಘೋಷಣೆಯಾದ ಬಳಿಕ ಟ್ರೆಂಡ್​ನಲ್ಲಿ ಸಾಕಷ್ಟು ಬದಲಾವಣೆ ಆಗೋ ಸಾಧ್ಯತೆ ಇದೆ. ನೀವೂ ಕೂಡ ನಿಮ್ಮ ಅಭಿಪ್ರಾಯವನ್ನ ಕಾಮೆಂಟ್​​ನಲ್ಲಿ ತಿಳಿಸಬಹುದು. ನಿಮ್ಮ ಕ್ಷೇತ್ರ ಯಾವುದು.? ನಿಮ್ಮ ಕ್ಷೇತ್ರದಲ್ಲಿ ಯಾರ್ ಆಗ್ತಾರೆ ಶಾಸಕರು.? ಕಾಮೆಂಟ್ ಮಾಡಿ, ನಿಮ್ಮ ಅಭಿಪ್ರಾಯ ತಿಳಿಸಿ.

ಪೊಲಿಟಿಕಲ್ ಬ್ಯುರೋ, ಕರ್ನಾಟಕ ಟಿವಿ.

ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023 : ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.?

ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023 : ಉತ್ತರ ಕನ್ನಡ ಜಿಲ್ಲೆಯ 6 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.?

ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023 : ಉಡುಪಿ ಜಿಲ್ಲೆಯ 5 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.?

ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023 : ದಕ್ಷಿಣ ಕನ್ನಡ ಜಿಲ್ಲೆಯ 8 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.?

ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023 : ಚಿಕ್ಕಮಗಳೂರು 5 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.?

ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023 : ಶಿವಮೊಗ್ಗ 7 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.?

ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023 : ಚಿತ್ರದುರ್ಗ 6 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.?

ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023 : ಕಲ್ಯಾಣ ಕರ್ನಾಟಕದ 41 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.?

ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023 : ಬಳ್ಳಾರಿ-ವಿಜಯನಗರ 10 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.? ರೆಡ್ಡಿ ಕಥೆ ಏನು.?

ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023 : ಕೊಪ್ಪಳದ 5 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.? ರೆಡ್ಡಿ ಕಥೆ ಏನು.?

ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023 : ರಾಯಚೂರು 7 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.?

ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023 : ಬೀದರ್ ಜಿಲ್ಲೆ 6 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.?

ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023 : ಬೀದರ್ ಜಿಲ್ಲೆ 6 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.?

ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023 : ಯಾದಗಿರಿ ಜಿಲ್ಲೆಯ 4 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.?

ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023 : ಕಿತ್ತೂರು ಕರ್ನಾಟಕದ 50 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.?

ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023 : ಹಾವೇರಿ 6 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.?

ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023 : ವಿಜಯಪುರ 8 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.?

ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023 : ಹುಬ್ಬಳ್ಳಿ-ಧಾರವಾಡ 7 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.?

ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023 : ಗದಗ 4 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.?

ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023 : ಬಾಗಲಕೋಟೆ 7 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.?

ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023 : ಬೆಳಗಾವಿಯ 18 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.?

- Advertisement -

Latest Posts

Don't Miss