Political News:
Feb:26:ಬೆಂಗಳೂರು : ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಇದೆ. ಈಗಾಗ್ಲೇ ಎಲ್ಲಾ ಪಕ್ಷಗಳು ಬೇರೆ ಬೇರೆ ಹೆಸರಲ್ಲಿ ಯಾತ್ರೆ, ಸಮಾವೇಶ, ಸಮಾರಂಭ, ಕಾರ್ಯಕ್ರಮಗಳನ್ನ ಶುರು ಮಾಡಿವೆ. ಮಾರ್ಚ್ ಕೊನೇ ವೇಳೆಗೆ ಚುನಾವಣೆ ಘೋಷಣೆಯೂ ಆಗಿರುತ್ತೆ. ಹೀಗಾಗಿ ಯಾವ ಪಕ್ಷಕ್ಕೆ ಬಹುಮತ ಬರುತ್ತೆ.? ಯಾವ ಪಕ್ಷಕ್ಕೆ ಎಷ್ಟು ಸೀಟು ಬರುತ್ತೆ.? ಯಾವ ಕ್ಷೇತ್ರದಲ್ಲಿ ಯಾರು ಗೆಲ್ಲಬಹುದು ಅನ್ನೋ ಕುತೂಹಲ ಇಡೀ ರಾಜ್ಯಾದ್ಯಂತ ಮನೆ ಮಾಡಿದೆ. ಈ ನಡುವೆ, ಕರ್ನಾಟಕದ ನಂಬರ್ 01 ಡಿಜಿಟಲ್ ಮೀಡಿಯಾ, ಕರ್ನಾಟಕ ಟಿವಿ ಡಿಜಿಟಲ್ ಮಾಧ್ಯಮ ಕಳೆದ 4 ತಿಂಗಳಿನಿಂದ ಪ್ರತಿ ತಿಂಗಳು ಎಲ್ಲಾ 224 ಕ್ಷೇತ್ರಗಳ ಟ್ರೆಂಡ್ ನೀಡ್ತಿದೆ. ಅದರಂತೆ ಫೆಬ್ರವರಿಯಲ್ಲಿ ಯಾವ ಪಕ್ಷಕ್ಕೆ ಎಷ್ಟು ಸೀಟು.? ಯಾವ ಜಿಲ್ಲೆಯಲ್ಲಿ ಯಾರ ಪ್ರಾಬಲ್ಯ ಹೇಗಿದೆ.? ಕ್ಷೇತ್ರವಾರು ಟ್ರೆಂಡ್ ಏನು ಅನ್ನೋ ಸಮೀಕ್ಷೆಯನ್ನ ಪ್ರಸಾರ ಮಾಡಿದೆ. ಕರ್ನಾಟಕ ಟಿವಿಯ ಫೆಬ್ರವರಿ ಸರ್ವೆಯ ಟ್ರೆಂಡ್ ನೋಡೋದಾದ್ರೆ..
ಮಂಡ್ಯ 7 ಕ್ಷೇತ್ರದಲ್ಲಿ ಯಾರಿಗೆ ಎಷ್ಟು ಸೀಟು.?
ಕರ್ನಾಟಕ ಟಿವಿ ಫೆಬ್ರವರಿ ಟ್ರೆಂಡ್
ಮಂಡ್ಯ ಅಂದ್ರೆ ಇಂಡಿಯಾ. ಮಂಡ್ಯ ಎಲೆಕ್ಷನ್ ಒಂದ್ ರೀತಿ ಮಹಾಯುದ್ಧದಂತೆ. ಅದ್ರಲ್ಲೂ ಈ ಬಾರಿ ಜೆಡಿಎಸ್ ವರ್ಸಸ್ ಕಾಂಗ್ರೆಸ್ ಜೊತೆ ಬಿಜೆಪಿ ಕೂಡ ಎಲೆಕ್ಷನ್ ಅನ್ನ ಗಂಭೀರವಾಗಿ ಪರಿಗಣಿಸಿದೆ. ಅಮಿತ್ ಶಾ ಸಮಾವೇಶದ ಬಳಿಕ ಬಿಜೆಪಿ ಕೂಡ ಸೇರಿಗೆ ಸವ್ವಾಸೇರು ಎನ್ನುವಂತೆ ಪೈಪೋಟಿ ನೀಡಲು ತಯಾರಿ ನಡೆಸಿದೆ. ಸುಮಲತಾ ಬಿಜೆಪಿಗೆ ಬರ್ತಾರಂತೆ ಅನ್ನೋ ಚರ್ಚೆ ಇದೆ. ಹೀಗಾಗಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ ಮಂಡ್ಯ ಜಿಲ್ಲೆ.
ಸದ್ಯ ಮಂಡ್ಯ ಜಿಲ್ಲೆಯ 7 ಕ್ಷೇತ್ರಗಳಲ್ಲಿ ಯಾವ ಪಕ್ಷಕ್ಕೆ ಎಷ್ಟು ಸೀಟು ಅನ್ನೋ ಕುತೂಹಲಕ್ಕೆ ಕರ್ನಾಟಕ ಟಿವಿ ಫೆಬ್ರವರಿ ಸಮೀಕ್ಷೆಯಲ್ಲಿ ಸಿಕ್ಕ ಉತ್ತರ ಏನಂದ್ರೆ, 7 ಕ್ಷೇತ್ರಗಳಲ್ಲಿ ಕಾಂಗ್ರೆಸ್ 3 ಕ್ಷೇತ್ರ, ಜೆಡಿಎಸ್ 4 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಬಿಜೆಪಿ ನೆಲೆಯೂರಲಿ ಪ್ರಯತ್ನ ಮಾಡ್ತಿದೆ.
ಮಂಡ್ಯ 7 ಕ್ಷೇತ್ರ ಯಾರಿಗೆ ಎಷ್ಟು.?
ಕರ್ನಾಟಕ ಟಿವಿ ಫೆಬ್ರವರಿ ಟ್ರೆಂಡ್
ಬಿಜೆಪಿ – 0
ಕಾಂಗ್ರೆಸ್ – 3
ಜೆಡಿಎಸ್ – 4
ಮಂಡ್ಯ ಯಾವ ಕ್ಷೇತ್ರಗಳಲ್ಲಿ ಯಾವ ಪಕ್ಷಕ್ಕೆ ಮುನ್ನಡೆ.?
ಕರ್ನಾಟಕ ಟಿವಿ ಫೆಬ್ರವರಿ ಟ್ರೆಂಡ್
ಮಳವಳ್ಳಿ : ಕಾಂಗ್ರೆಸ್ ಮುನ್ನಡೆ
ಮದ್ದೂರು : ಜೆಡಿಎಸ್ ಮುನ್ನಡೆ
ಮೇಲುಕೋಟೆ : ಜೆಡಿಎಸ್ ಮುನ್ನಡೆ
ಮಂಡ್ಯ : ಕಾಂಗ್ರೆಸ್ ಮುನ್ನಡೆ
ಶ್ರೀರಂಗಪಟ್ಟಣ : ಕಾಂಗ್ರೆಸ್ ಮುನ್ನಡೆ
ನಾಗಮಂಗಲ : ಜೆಡಿಎಸ್ ಮುನ್ನಡೆ
ಕೆ.ಆರ್.ಪೇಟೆ : ಜೆಡಿಎಸ್ ಮುನ್ನಡೆ
ಇದು ಫೆಬ್ರವರಿ ಟ್ರೆಂಡ್ ಮಾತ್ರ ಅಷ್ಟೇ. ಇನ್ನೂ ಅಭ್ಯರ್ಥಿಗಳ ಪಟ್ಟಿ ಅಧಿಕೃತವಾಗಿ ಪ್ರಕಟವಾಗಿಲ್ಲ. ಅಭ್ಯರ್ಥಿಗಳ ಪಟ್ಟಿ ಅಧಿಕೃತವಾಗಿ ಪ್ರಕಟವಾದ ಬಳಿಕ ಜೊತೆಗೆ ಚುನಾವಣೆ ಘೋಷಣೆಯಾದ ಬಳಿಕ ಟ್ರೆಂಡ್ನಲ್ಲಿ ಸಾಕಷ್ಟು ಬದಲಾವಣೆ ಆಗೋ ಸಾಧ್ಯತೆ ಇದೆ. ನೀವೂ ಕೂಡ ನಿಮ್ಮ ಅಭಿಪ್ರಾಯವನ್ನ ಕಾಮೆಂಟ್ನಲ್ಲಿ ತಿಳಿಸಬಹುದು. ನಿಮ್ಮ ಕ್ಷೇತ್ರ ಯಾವುದು.? ನಿಮ್ಮ ಕ್ಷೇತ್ರದಲ್ಲಿ ಯಾರ್ ಆಗ್ತಾರೆ ಶಾಸಕರು.? ಕಾಮೆಂಟ್ ಮಾಡಿ, ನಿಮ್ಮ ಅಭಿಪ್ರಾಯ ತಿಳಿಸಿ.
ಪೊಲಿಟಿಕಲ್ ಬ್ಯುರೋ, ಕರ್ನಾಟಕ ಟಿವಿ.
ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023 : ರಾಮನಗರ ಜಿಲ್ಲೆಯ 4 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.?
ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023 : ತುಮಕೂರು ಜಿಲ್ಲೆಯ 11 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.?
ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023 : ಕಲಬುರಗಿ ಜಿಲ್ಲೆ 9 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.?
ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023 : ಚಿಕ್ಕಬಳ್ಳಾಪುರ ಜಿಲ್ಲೆಯ 5 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.?
ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023 : ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.?
ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023 : ಉತ್ತರ ಕನ್ನಡ ಜಿಲ್ಲೆಯ 6 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.?
ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023 : ಉಡುಪಿ ಜಿಲ್ಲೆಯ 5 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.?
ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023 : ದಕ್ಷಿಣ ಕನ್ನಡ ಜಿಲ್ಲೆಯ 8 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.?
ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023 : ಚಿಕ್ಕಮಗಳೂರು 5 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.?