ಬೆಂಗಳೂರು: ಕರ್ನಾಟಕ ಟಿವಿ ನಡೆಸಿದ ಪ್ರಾಂತ್ಯವಾರು ಸರ್ವೆಯಲ್ಲಿ ಬೆಂಗಳೂರು ನಗರ 28 ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ 13, ಕಾಂಗ್ರೆಸ್ 13, ಜೆಡಿಎಸ್ 2 ಮತ್ತು ಇತರೆ ಸೊನ್ನೆ ಸ್ಥಾನವನ್ನು ಪಡೆದುಕೊಂಡಿದೆ.
ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಎಸ್.ಆರ್.ವಿಶ್ವನಾಥ್, ಕಾಂಗ್ರೆಸ್‌ನಿಂದ ಕೇಶವ ರಾಜಣ್ಣ, ಜೆಡಿಎಸ್‌ನಿಂದ ಮುನೇಗೌಡ ಸ್ಪರ್ಧಿಸುತ್ತಿದ್ದಾರೆ. ಇಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ವಿಶ್ವನಾಥ್ ಅವರನ್ನ ಶತಾಯ ಗತಾಯ ಸೋಲಿಸಬೇಕೆಂದು ಜೆಡಿಎಸ್, ಕಾಂಗ್ರೆಸ್ ಪಣ ತೊಟ್ಟಂತಿದೆ.
ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಭೈರತಿ ಬಸವರಾಜು, ಕಾಂಗ್ರೆಸ್‌ನಿಂದ ಮೋಹನ್ ಬಾಬು ಸ್ಪರ್ಧಿಸುತ್ತಿದ್ದಾರೆ. ತನಗ್ಯಾರೂ ವಿರೋಧಿಗಳಿಲ್ಲ ಅಂತಿದ್ದ ಭೈರತಿ ವಿರುದ್ಧ ಡಿಕೆಶಿ ಆಪ್ತ ಮೋಹನ್ ಬಾಬು ಸ್ಪರ್ಧೆಗಿಳಿದಿದ್ದಾರೆ. ಹಾಗಾಗಿ ಇಲ್ಲಿಯೂ ಪೈಪೋಟಿ ಭರ್ಜರಿಯಾಗಿದೆ.
ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ತಮ್ಮೇಶ್ ಗೌಡ, ಕಾಂಗ್ರೆಸ್‌ನಿಂದ ಕೃಷ್ಣಭೈರೇಗೌಡ, ಜೆಡಿಎಸ್‌ನಿಂದ ನಾರಾಯಣಗೌಡ ಕಣಕ್ಕಿಳಿದಿದ್ದಾರೆ. ಇಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂದು ಅಂದಾಜಿಸಲಾಗಿದೆ.
ಯಶವಂತಪುರ ಕ್ಷೇತ್ರದಲ್ಲಿ ಬಿಜೆಪಿಯಿಂದ ಎಸ್.ಟಿ.ಸೋಮಶೇಖರ್, ಕಾಂಗ್ರೆಸ್‌ನಿಂದ ಬಾಲರಾಜ್ ಗೌಡ, ಜೆಡಿಎಸ್‌ನಿಂದ ಜವರಾಯಿಗೌಡ ಸ್ಪರ್ಧಿಸುತ್ತಿದ್ದಾರೆ. ಇಲ್ಲಿ ಸೋಮಶೇಖರ್ ಮತ್ತು ಜವರಾಯಿಗೌಡ ಮಧ್ಯೆ ತೀವ್ರ ಪೈಪೋಟಿ ಇದೆ. ಇನ್ನೂ ಹೆಚ್ಚಿನ ಮಾಹಿತಿಯನ್ನ ಈ ವೀಡಿಯೋ ಮೂಲಕ ತಿಳಿದುಕೊಳ್ಳಿ..