Friday, June 20, 2025

Latest Posts

ಕರ್ನಾಟಕ ಟಿವಿ ಪ್ರಾಂತ್ಯವಾರು ಸರ್ವೆ: ಮಧ್ಯ ಕರ್ನಾಟಕ ಯಾರ ಪಾಲು..?

- Advertisement -

ಕರ್ನಾಟಕ ಟಿವಿ ಪ್ರಾಂತ್ಯವಾರು ಮೆಗಾ ಸರ್ವೆಯಲ್ಲಿ ಮಧ್ಯ ಕರ್ನಾಟಕದಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ. 25 ವಿಧಾನಸಬಾ ಕ್ಷೇತ್ರದಲ್ಲಿ 11 ಸ್ಥಾನವನ್ನ ಬಿಜೆಪಿಯೇ ಗೆಲ್ಲುವ ಸಾಧ್ಯತೆ ಹೆಚ್ಚಿದೆ.

ಚಿತ್ರದುರ್ಗ ಜಿಲ್ಲೆಯಲ್ಲಿ 6 ವಿಧಾನಸಭಾ ಕ್ಷೇತ್ರಗಳಿದ್ದು, ಬಿಜೆಪಿ ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಇದೆ. ಹಾಗಾಗಿ ಇಲ್ಲಿ ಕಾಂಗ್ರೆಸ್ ಜೆಡಿಎಸ್ ಸಮವಾಗಿ ಗೆಲ್ಲುವ ನಿರೀಕ್ಷೆ ಇದೆ.

ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು 7 ಸ್ಥಾನಗಳಿದ್ದು, ಬೆಣ್ಣೆನಗರಿಯಲ್ಲಿ ಕಾಂಗ್ರೆಸ್ ಬೆಂಬಲಿಗರು ಹೆಚ್ಚಾಗಿದ್ದಾರೆ. ಹಾಗಾಗಿ ಕಾಂಗ್ರೆಸ್‌ಗೆ 4 ಸ್ಥಾನ ಸಿಕ್ಕರೆ, ಬಿಜೆಪಿಗೆ 3 ಸ್ಥಾನ ಸಿಗಲಿದ್ದು, ಉಳಿದ ಪಕ್ಷಗಳು ಸೋಲುಣ್ಣುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ 7 ಸ್ಥಾನಗಳಿದ್ದು, ಬಿಜೆಪಿಗೆ 3 ಸ್ಥಾನ, ಕಾಂಗ್ರೆಸ್‌ಗೆ 2, ಜೆಡಿಎಸ್‌ಗೆ 2 ಸ್ಥಾನ ಸಿಗುವ ಸಾಧ್ಯತೆ ಇದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ 5 ಸ್ಥಾನಗಳಿದ್ದು, ಕಾಫಿನಾಡಿನ ಜನ ಬಿಜೆಪಿಯನ್ನ ಗೆಲ್ಲಿಸುವ ಹಾಗಿದ್ದಾರೆ. ಬಿಜೆಪಿ 2 ಸ್ಥಾನ ಗೆದ್ದರೆ, ಕಾಂಗ್ರೆಸ್, ಜೆಡಿಎಸ್ ಮತ್ತು ಇತರೆ ತಲಾ ಒಂದೊಂದು ಸ್ಥಾನ ಗೆಲ್ಲುವ ನಿರೀಕ್ಷೆ ಇದೆ.

 

‘ನಾನು ಇಂಜಿನಿಯರ್ ಆಗಬೇಕು ಎಂಬುದು ನನ್ನ ಅಪ್ಪನ ಕನಸಾಗಿತ್ತು, ಆದರೆ… ‘

‘ಈ ಚುನಾವಣೆ ನಾಲ್ವಡಿ ಕೃಷ್ಣರಾಜ ಒಡೆಯರ್‌ರ ಗೌರವ ಉಳಿಸುವ ಚುನಾವಣೆ’

ಶಿಡ್ಲಘಟ್ಟದಲ್ಲಿ ಕಾಂಗ್ರೆಸ್ ಜೆಡಿಎಸ್‌ಗೆ ಖೆಡ್ಡಾ ತೋಡಿದ ನಡ್ಡಾ

- Advertisement -

Latest Posts

Don't Miss