- Advertisement -
www.karnatakatv.net- ರಾಜ್ಯ: ಕೊನೆಗೂ ಎರಡು ತಿಂಗಳ ಮನೆ ವಾಸಕ್ಕೆ ಮುಕ್ತಿ ಸಿಕ್ಕಿದ್ದು, ರಾಜ್ಯದ 16 ಜಿಲ್ಲೆಗಳು ಅನ್ ಲಾಕ್ ಆಗಿದೆ. 16 ಜಿಲ್ಲೆಗಳಿಗೆ ಹೊಸ ಲೈಫ್ ಸಿಕ್ಕಿದ್ದು, ಜನರಿಗೆ ಬಿಗ್ ರಿಲೀಫ್ ದೊರತಂತಾಗಿದೆ. ಹೀಗಾಗಿ, ಜನರು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಇನ್ನು, ಸಡಿಲಿಕೆಯಿಂದ ಬೆಂಗಳೂರು ತೊರೆದಿದ್ದ ಜನ ರಸ್ತೆಗಿಳಿದಿದ್ದು, ಬೆಂಗಳೂರು ರಸ್ತೆಗಳೆಲ್ಲಾ ಗಿಜುಗುಡುತ್ತಿವೆ. ಇನ್ನು, ಬಿಎಂಟಿಸಿ ಬಸ್, ಹಾಗೂ ನಮ್ಮ ಮೆಟ್ರೊ ಸಂಚಾರ ಸಹ ಆರಂಭವಾಗಿದೆ. ಆದ್ರೆ, ಮೈಸೂರು ಮಾತ್ರ ಸಂಪೂರ್ಣ ಲಾಕ್ ಆಗಿದೆ. ಜುಲೈ 5ರವರೆಗೂ ನೈಟ್ ಕರ್ಪ್ಯೂ ಜಾರಿಯಲ್ಲಿದ್ದು, ಸಂಜೆ 7 ಗಂಟೆಗೆಲ್ಲಾ ಲಾಕ್ ಆಗಲಿದೆ.
- Advertisement -