Wednesday, September 17, 2025

Latest Posts

ಕರ್ನಾಟಕದ ವಕ್ಫ್‌ ಊರಿಗೆ ಊರನ್ನೇ ನುಂಗಿದೆ : ಅಮಿತ್‌ ಶಾ ಸ್ಫೋಟಿಸಿದ ಬಾಂಬ್‌ ಎಂಥದ್ದು..?

- Advertisement -

Political News: ಲೋಕಸಭೆಯಲ್ಲಿ ವಕ್ಫ್‌ ತಿದ್ದುಪಡಿ ಮಸೂದೆಯ ಚರ್ಚೆಯ ವೇಳೆ ರಾಜ್ಯದ ವಕ್ಫ್‌ ಹಗರಣ ಸದ್ದು ಮಾಡಿದೆ. ರಾಜ್ಯದಲ್ಲಿನ ವಕ್ಫ್‌ ಬೋರ್ಡ್‌, ಆಸ್ತಿಗಳ ದುರುಪಯೋಗದ ಕುರಿತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸದನದಲ್ಲಿ ಪ್ರಸ್ತಾಪಿಸಿ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇನ್ನೂ ಪ್ರಮುಖವಾಗಿ 2012ರಲ್ಲಿನ ಕರ್ನಾಟಕ ರಾಜ್ಯ ವಕ್ಫ್‌ ಬೋರ್ಡ್‌ ಭೂ ಹಗರಣ ವಿಚಾರದ ಬಗ್ಗೆ ಮಾತನಾಡಿದ ಅವರು, ಈ ವಕ್ಫ್‌ ಮಂಡಳಿಗಳು ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದು, ಇದರಿಂದ ಭೂ ಕಬಳಿಕೆ ಮಾಡುತ್ತಿವೆ. ಇದಕ್ಕೆ ಕಡಿವಾಣ ತರುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಮುಂದುವರೆದಿದೆ. ಕರ್ನಾಟಕದ ಅನ್ವರ್‌ ಮಾನಪ್ಪಾಡಿ ಸಮಿತಿಯು ಸುಮಾರು 29,000 ಎಕರೆಗಳಷ್ಟು ವಕ್ಫ್‌ ಭೂಮಿಯನ್ನು ವಿದೇಶ ಮೂಲದ ಸಂಸ್ಥೆಗಳಿಗೆ ಗುತ್ತಿಗೆ ನೀಡಿದ್ದನ್ನು ಬಯಲಿದೆ ತಂದಿತ್ತು. ಅಲ್ಲದೆ ಇದರಿಂದ ಬೊಕ್ಕಸಕ್ಕೆ ಹೆಚ್ಚಿನ ರೀತಿಯಲ್ಲಿ ಹಾನಿಗೆ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.

500 ಕೋಟಿ ರೂ. ಮೌಲ್ಯದ ಭೂಮಿ..

ಅಲ್ಲದೆ ವಕ್ಫ್‌ ಬೋರ್ಡ್‌ ಒಡೆತನದ 500 ಕೋಟಿ ರೂಪಾಯಿ ಮೌಲ್ಯದ ಭೂಮಿಯನ್ನು ಪೈವ್‌ ಸ್ಟಾರ್‌ ಹೋಟೆಲ್‌ಗೆ ಮಾಸಿಕ12,000 ರೂಪಾಯಿಗಳಿಗೆ ಬಾಡಿಗೆಗೆ ನೀಡಲಾಯಿತು. ಇದೂ‌ ಕೂಡ ವಕ್ಫ್ ಆಸ್ತಿಯ ದುರುಪಯೋಗಕ್ಕೆ ಕಾರಣವಾಗಿದೆ. ಇನ್ನೂ 2001 ಮತ್ತು 2012ರ ವೇಳೆಗೆ 2 ಲಕ್ಷ ಕೋಟಿ ರೂಪಾಯಿ ಬೆಲೆಯ ಆಸ್ತಿಗಳನ್ನು100 ವರ್ಷದ ಅವಧಿಗೆ ಖಾಸಗಿ ಸಂಸ್ಥೆಗಳಿಗೆ ಗುತ್ತಿಗೆ ನೀಡಲಾಗಿದೆ. ಅಲ್ಲದೆ ದೀರ್ಘಾವಧಿಯ ಕಂಟ್ರೋಲ್‌ ಹಾಗೂ ಈ ಆಸ್ತಿಗಳ ನ್ಯಾಯಸಮ್ಮತ ಬಳಕೆಯ ಕುರಿತು ಆ ಸಮಿತಿಯು ಕಳವಳವನ್ನು ವ್ಯಕ್ತಪಡಿಸಿತ್ತು ಎಂದು ಹೊಸ ಬಾಂಬ್‌ ಸ್ಪೋಟಿಸಿದ್ದಾರೆ.

ಗ್ರಾಮಗಳನ್ನೇ ನುಂಗಿದ ವಕ್ಫ್..!

ಅಂದಹಾಗೆ 602 ಎಕರೆ ವಕ್ಫ್‌ ಭೂಮಿಯ ಅತಿಕ್ರಮಣ ತಡೆಯಲು ಕರ್ನಾಟಕ ಹೈಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆದಿದೆ. ಇನ್ನೂ ವಿಜಯಪುರ ಜಿಲ್ಲೆಯ ಹೊನವಾಡ, ಕೋಲ್ಹಾರ ಗ್ರಾಮಗಳಲ್ಲಿ ವಕ್ಫ್‌ ಮಂಡಳಿಯು ತನ್ನದೆಂದು ಹಕ್ಕನ್ನು ಮಂಡಿಸಿದ ನಂತರ 1,500 ಎಕರೆ ಭೂಪ್ರದೇಶವು ವಿವಾದಕ್ಕೆ ಒಳಗಾಗಿತು. ಬಳಿಕ ಇದು ಆ ಜನರ ಕಾನೂನು ಹಾಗೂ ಆಡಳಿತಾತ್ಮಕ ಘರ್ಷಣೆಗೆ ಕಾರಣವಾಗಿತ್ತು ಎಂದು ರಾಜ್ಯದ ವಕ್ಫ್‌ ವಿಚಾರವನ್ನು ಸದನದಲ್ಲಿ ಅಮಿತ್‌ ಶಾ ಬಯಲಿಗೆ ತಂದಿದ್ದಾರೆ.

ಇನ್ನೂ ಚಿಕ್ಕಮಗಳೂರಿನ ದತ್ತಪೀಠಕ್ಕೆ ಸೇರಿದ ಜಮೀನಿನ ಮೇಲೆ ಕರ್ನಾಟಕ ವಕ್ಫ್‌ ಬೋರ್ಡ್‌ ಹಕ್ಕು ಮಂಡಿಸಿದ್ದರಿಂದ ಬಳಿಕ ಅದು ಕಾನೂನು ವಿವಾದಕ್ಕೆ ಆಸ್ಪದ ಮಾಡಿಕೊಟ್ಟಿತ್ತು ಎಂದು ಹೇಳುವ ಮೂಲಕ ಗೃಹ ಸಚಿವ ಅಮಿತ್‌ ಶಾ ರಾಜ್ಯದ ವಕ್ಫ್‌ ಭೂ ಹಗರಣವನ್ನು ಪ್ರಸ್ತಾಪಿಸಿ ಕಾಂಗ್ರೆಸ್ ವಿರುದ್ಧ ಅಬ್ಬರಿಸಿದ್ದಾರೆ.

ವಿಪಕ್ಷಗಳು ದೇಶ ಒಡೆಯುವ ಕೆಲಸ ಮಾಡುತ್ತಿವೆ..!

ಅಲ್ಲದೆ ವಕ್ಫ್‌ ತಿದ್ದುಪಡಿ ವಿಧೇಯಕವು ಮುಸ್ಲಿಮರ ಧಾರ್ಮಿಕ ವಿಚಾರಗಳಲ್ಲಿ ಹಾಗೂ ಅವರು ದಾನ ಮಾಡಿದ ಆಸ್ತಿಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ವಕ್ಫ್‌ ಮಂಡಳಿಯ ಮುಸ್ಲಿಮೇತರ ಸದಸ್ಯರು ಧಾರ್ಮಿಕ ವ್ಯವಹಾರಗಳನ್ನು ನಿರ್ವಹಿಸುವಲ್ಲಿ ಯಾವುದೇ ಪಾತ್ರವನ್ನು ಹೊಂದಿರುವುದಿಲ್ಲ. ಇದೇ ವಿಚಾರವಾಗಿ ಪ್ರತಿಪಕ್ಷಗಳು ದೇಶವನ್ನು ಒಡೆಯುವ ಕೆಲಸ ಮಾಡುತ್ತಿವೆ. ವೋಟ್‌ ಬ್ಯಾಂಕ್‌ ರಾಜಕಾರಣಕ್ಕಾಗಿ ಪ್ರತಿಪಕ್ಷಗಳು ಈ ಮಸೂದೆಯ ಕುರಿತು ಅಪಪ್ರಚಾರ ನಡೆಸುತ್ತಿವೆ, ಇದಕ್ಕೆ ಯಾರೊಬ್ಬರು ಕಿವಿಗೊಡಬಾರದು ಎಂದು ಅಮಿತ್‌ ಶಾ ಹೇಳಿದ್ದಾರೆ.

ಒಬ್ಬ ಮುಸ್ಲಿಮೇತರರೂ ನಿಮ್ಮ ವಕ್ಫ್‌ಗೆ ಬರುವುದಿಲ್ಲ. ಈ ಕಾಯ್ದೆಯಲ್ಲಿ ಅಂತಹ ಯಾವುದೇ ನಿಬಂಧನೆ ಇಲ್ಲ, ಆದರೆ ವಕ್ಫ್ ಮಂಡಳಿ ಮತ್ತು ವಕ್ಫ್ ಮಂಡಳಿ ಏನು ಮಾಡುತ್ತದೆ? ಅವರು ವಕ್ಫ್ ಆಸ್ತಿಯನ್ನು ಮಾರಾಟ ಮಾಡುವವರನ್ನು ಹಿಡಿದು ಹೊರಹಾಕುತ್ತಾರೆ. ವಕ್ಫ್ ಹೆಸರಿನಲ್ಲಿ ತಮ್ಮ ಆಸ್ತಿಯನ್ನು 100 ವರ್ಷಗಳ ಕಾಲ ಗುತ್ತಿಗೆಗೆ ಪಡೆದವರನ್ನು ಪತ್ತೆ ಮಾಡುತ್ತಾರೆ. ವಕ್ಫ್‌ನ ಆದಾಯ ಕಡಿಮೆಯಾಗುತ್ತಿದೆ. ಅಲ್ಪಸಂಖ್ಯಾತರನ್ನು ಅಭಿವೃದ್ಧಿಪಡಿಸಲು ಮತ್ತು ಅದನ್ನು ಮುಂದಕ್ಕೆ ಕೊಂಡೊಯ್ಯಲು ನಮ್ಮಲ್ಲಿಯ ಹಣವನ್ನು ಕದಿಯಲಾಗುತ್ತಿದೆ. ವಕ್ಫ್ ಮಂಡಳಿ ಅದನ್ನು ಪತ್ತೆ ಹಚ್ಚುತ್ತದೆ ಎಂದಿದ್ದಾರೆ.

2013ರಲ್ಲಿ ಕಾಂಗ್ರೆಸ್ ಪಕ್ಷವು ಭೂಮಿಯನ್ನು ಕಬಳಿಸಿದವರ ದೂರುಗಳನ್ನು ನ್ಯಾಯಾಲಯದ ವ್ಯಾಪ್ತಿಯಿಂದ ಹೊರಗೆ ಇಡುವ ಪಾಪವನ್ನು ಮಾಡಿತ್ತು. ಸರ್ಕಾರ ಅಥವಾ ಯಾವುದೇ ಸಂಸ್ಥೆಯ ಎಂಥದ್ದೆ ನಿರ್ಧಾರವು ನ್ಯಾಯಾಲಯದ ವ್ಯಾಪ್ತಿಯಿಂದ ಹೊರಗುಳಿಯುವುದು ಹೇಗೆ? ಭೂಮಿ ಕಿತ್ತುಕೊಂಡ ವ್ಯಕ್ತಿ ಎಲ್ಲಿಗೆ ಹೋಗುತ್ತಾನೆ? ಕಾಂಗ್ರೆಸ್ ಇದನ್ನು ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಮಾಡಿದೆ. ನಾವು ಅದನ್ನು ತಿರಸ್ಕರಿಸುತ್ತಿದ್ದೇವೆ. ದೂರು ಇರುವ ಯಾವುದೇ ವ್ಯಕ್ತಿ ನ್ಯಾಯಾಲಯಕ್ಕೆ ಹೋಗಬಹುದು ಎಂದು ಅಮಿತ್‌ ಶಾ ತಿಳಿಸಿದ್ದಾರೆ.

- Advertisement -

Latest Posts

Don't Miss