Sunday, September 8, 2024

Latest Posts

ಕಾರ್ತಿಕ ಮಾಸದಲ್ಲಿ ಪ್ರತಿದಿನ ಹೀಗೆ ಪೂಜೆ ಮಾಡಿ…!

- Advertisement -

Devotional:

2022ರ ಕಾರ್ತಿಕ ಮಾಸವು ಅಕ್ಟೋಬರ್ 26ರಿಂದ ಆರಂಭವಾಗಿ ನವೆಂಬರ್ 23ರಂದು ಕೊನೆಗೊಳ್ಳುತ್ತದೆ. ಕಾರ್ತಿಕ ಮಾಸವು ಹಿಂದೂ ಧರ್ಮದಲ್ಲಿ ಅತ್ಯಂತ ಮಂಗಳಕರ ಎಂದು ಪ್ರಸಿದ್ದಿ ಪಡೆದಿದೆ.ಈ ಮಾಸವನ್ನು ದಾಮೋದರ ಮಾಸ, ಕಾರ್ತಿಕ ಮುಂತಾದ ಹೆಸರುಗಳಿಂದ ಕರೆಯಲಾಗುತ್ತದೆ. ಕಾರ್ತಿಕ ಮಾಸದಲ್ಲಿ ರುದ್ರಾಭಿಷೇಕ, ರುದ್ರ ಹವನ, ಶಿವಪೂಜೆ, ಲಿಂಗಾರ್ಚನೆ, ಕೇದಾರೇಶ್ವರ ವ್ರತ ಪೂಜೆ ಮತ್ತು ಸತ್ಯನಾರಾಯಣ ವ್ರತ ಮಾಡಿಸುವುದು ಹೆಚ್ಚು ಶ್ರೇಯಸ್ಕರ. ಕಾರ್ತಿಕ ಮಾಸದಲ್ಲಿ ಸೋಮವಾರದಂದು ವಿಶೇಷ ಆಚರಣೆಗಳು ಮತ್ತು ಉಪವಾಸವನ್ನು ಆಚರಿಸಲಾಗುತ್ತದೆ.ಶಿವನ ಜಡೆಯಲ್ಲಿ ಸ್ಥಾನ ಪಡೆಯಲು ಚಂದ್ರನು ಕಾರ್ತಿಕಮಾಸದಲ್ಲಿ ಬರುವ ಸೋಮವಾರ ವ್ರತವನ್ನು ಆಚರಿಸುತ್ತಾನೆ ಎಂದು ಪುರಾಣಗಳಲ್ಲಿ ಉಲ್ಲೇಖವಿದೆ .

1ನೇ ದಿನ: ನಿಮ್ಮ ಹತ್ತಿರದ ಶಿವಾಲಯಕ್ಕೆ ಹೋಗಿ ಶಿವನಿಗೆ ಪೂಜೆಯನ್ನು ಸಲ್ಲಿಸಬೇಕು.
ಅಕ್ಟೋಬರ್26:ನಿಮ್ಮ ಸಹೋದರ ಸಹೋದರಿಯರ ಮನೆಗೆ ಹೋಗಿ ಅವರು ಮಾಡಿದ ಆಹಾರ ಸೇವಿಸಿ, ಉಡುಗೊರೆ ನೀಡಿ ಆರ್ಶೀವದಿಸಬೇಕು.
ಅಕ್ಟೋಬರ್ 27:ಪಾರ್ವತಿ ದೇವಿಗೆ ಕುಂಕುಮಾರ್ಚನೆ ಮಾಡಬೇಕು.
ಅಕ್ಟೋಬರ್ 28:ಸುಬ್ರಹ್ಮಣ್ಯ ಸ್ವಾಮಿಗೆ ಪೂಜೆಯನ್ನು ಸಲ್ಲಿಸಬೇಕು. ಪಂಚಮಿ,
ಅಕ್ಟೋಬರ್ 29:ಈ ದಿನವನ್ನು ಜ್ಞಾನ ಪಂಚಮಿಯೆಂದು ಕೂಡ ಕರೆಯಲಾಗುವುದು. ಈ ದಿನ ಬ್ರಹ್ಮಣ್ಯ ಸ್ವಾಮಿಗೆ ಪೂಜೆಯನ್ನು ಸಲ್ಲಿಸಬೇಕು.
ಅಕ್ಟೋಬರ್ 30:ನಿಮಗೆ ಇಷ್ಟವಾದ ಆಹಾರವನ್ನು ಈ ದಿನ ಸೇವಿಸಬಾರದು.
ಅಕ್ಟೋಬರ್ 31:ಸೂರ್ಯನಿಗೆ ಪೂಜೆ ಸಲ್ಲಿಸಿ ನುಚ್ಚು ಗೋಧಿಯನ್ನು ಕೆಂಪು ಬಟ್ಟೆಯಲ್ಲಿ ದಾನ ಮಾಡಬೇಕು. ಅಷ್ಟಮಿ,
ನವೆಂಬರ್ 1:ಗೋ ಮಾತೆಗೆ ಪೂಜೆಯನ್ನು ಸಲ್ಲಿಸಬೇಕು. ನವಮಿ,ತಿರುಮಲದಲ್ಲಿ ಪುಷ್ಪಯಾಗ ಮಹೋತ್ಸವ
ನವೆಂಬರ್ 2:ವಿಷ್ಣು ತ್ರಿರಥ್ರ ವ್ರತ ಪ್ರಾರಂಭಿಸಲು ಒಳ್ಳೆಯ ದಿನ ಇದನ್ನು 3 ದಿನ ಮಾಡಬೇಕು ಸಂಜೆ ಹೊತ್ತು ದೀಪ ಹಚ್ಚಿ ವಿಷ್ಣುವನ್ನು ಪೂಜಿಸಬೇಕು.
ನವೆಂಬರ್ 3:ವಿಷ್ಣುವನ್ನು ಪೂಜಿಸಿ. ಏಕಾದಶಿ,
ನವೆಂಬರ್ 4:ಕಾರ್ತಿಕ ಏಕಾದಶಿ, ಉತ್ಥಾನ ಏಕಾದಶಿ, ಪ್ರಬೋಧಿನಿ ಏಕಾದಶಿ, ಚಾತುರ್ಮಾಸ್ಯ ವ್ರತ ಸಮಾಪ್ತಿ.
ನವೆಂಬರ್ 5:ವಿಷ್ಣುವಿಗೆ ಪೂಜೆಯನ್ನು ಸಲ್ಲಿಸಬೇಕು. ತುಳಸಿ ಹಾಗೂ ನೆಲ್ಲಿಕಾಯಿ ಗಿಡಕ್ಕೆ ಪೂಜೆಯನ್ನು ಸಲ್ಲಿಸಿ. ತ್ರಯೋದಶಿ, ತುಳಸಿ ವಿವಾಹ
ನವೆಂಬರ್ 6:ರಾತ್ರಿ ಊಟ ಬಿಡುವುದು ಒಳ್ಳೆಯದು, ಈ ಪವಿತ್ರ ದಿನ ಬ್ರಾಹ್ಮಣನಿಗೆ ಸಾಲಿಗ್ರಾಮ ಶಿಲೆ ನೀಡಿ. ಚತುರ್ದಶಿ,ವಿಶ್ವೇಶ್ವರ ವ್ರತ, ವೈಕುಂಠ ಚತುರ್ದಶಿ.
ನವೆಂಬರ್ 7:ದಾನ ಮಾಡಿ ಅಲ್ಲದೆ ನಿಮ್ಮ ನೆಚ್ಚಿನ ಆಹಾರ ಸೇವಿಸಬೇಡಿ. ಪೌರ್ಣಮಿ,
ನವೆಂಬರ್ 8:ಕಾರ್ತಿಕ ಪೌರ್ಣಮಿ, ಶ್ರೀ ಸತ್ಯನಾರಾಯಣ ಪೂಜೆ ,ಉಮಾ ಮಹೇಶ್ವರ ವ್ರತ ,ಪೌರ್ಣಮಿ ವ್ರತಂ , ಪೌರ್ಣಮಿ.
ನವೆಂಬರ್ 9:ಹಳೆಯ ಆಹಾರ ಹಾಗೂ ಮೊಸರು ಸೇವಿಸಬಾರದು. ವಿದಿಯಾ,
ನವೆಂಬರ್10: ನೆಲ್ಲಿಕಾಯಿ ಗಿಡಕ್ಕೆ ಪೂಜೆಯನ್ನು ಸಲ್ಲಿಸಿ, ಮನೆಯವರ ಜೊತೆ ಆಹಾರ ಸೇವಿಸಬೇಕು. ಥದಿಯಾ,
ನವೆಂಬರ್11: ಈ ದಿನ ಬ್ರಾಹ್ಮಣರಿಗೆ ತುಳಸಿ ಮಾಲೆ ನೀಡಬೇಕು. ಚವಿಥಿ,
ನವೆಂಬರ್12: ಈ ದಿನ ವಿನಾಯನಿಕನಿಗೆ ಗರಿಕೆ ಸಮರ್ಪಿಸಿ ಪೂಜೆ ಸಲ್ಲಿಸಬೇಕು. ಪಂಚಮಿ,
ನವೆಂಬರ್13: ಈ ದಿನ ಪ್ರಾಣಿಗಳಿಗೆ ಆಹಾರ ದಾನ ಮಾಡಬೇಕು. ಷಷ್ಠಿ,
ನವೆಂಬರ್14: ಈ ದಿನ ಗ್ರಾಮ ದೇವತೆಗೆ ಪೂಜೆ ಸಲ್ಲಿಸಬೇಕು. ಈ ದಿನ ನಿಮ್ಮ ಸ್ಥಿತಿಗೆ ತಕ್ಕಂತೆ ದಾನ ಮಾಡಿ. ಸಪ್ತಮಿ,
ನವೆಂಬರ್15: ಈ ದಿನ ಶಿವನಿಗೆ ಎಕ್ಕೆ ಹೂವನ್ನು ಸಮರ್ಪಿಸಿ ಪೂಜೆ ಸಲ್ಲಿಸಬೇಕು. ಅಷ್ಟಮಿ,
ನವೆಂಬರ್16: ಈ ದಿನ ಕಾಲ ಭೈರವನಿಗೆ ಪೂಜೆ ಸಲ್ಲಿಸಬೇಕು. ನವಮಿ,
ನವೆಂಬರ್17: ಈ ದಿನ ನೀರು, ಕೆಂಪು ಸೀರೆ, ಬ್ಲೌಸ್ ಪೀಸ್, ಬಳೆ ಇವುಗಳನ್ನು ದಾನ ಮಾಡಿ. ದಶಮಿ,
ನವೆಂಬರ್18: ಈ ದಿನ ಉಪವಾಸವಿರುವುದು ಒಳ್ಳೆಯದು ಹಾಗೂ ನಿರ್ಗತಿಕರಿಗೆ ಆಹಾರ ದಾನ ಮಾಡಬೇಕು. ಏಕಾದಶಿ,
ನವೆಂಬರ್19 ಈ ದಿನ ದೀಪಾರಾಧನೆ ಬಳಿಕ ಪೌರಾಣಿಕ ಕತೆಗಳನ್ನು ಕೇಳುವುದು ತುಂಬಾ ಒಳ್ಳೆಯದು. ದ್ವಾದಶಿ,
ನವೆಂಬರ್20: ಅಗ್ಯತವಿರುವವರಿಗೆ ಆಹಾರ ದಾನ ಮಾಡಿ. ತ್ರಯೋದಶಿ,
ನವೆಂಬರ್21: ನವಗ್ರಹಗಳಿಗೆ ಪೂಜೆಯನ್ನು ಸಲ್ಲಿಸಬೇಕಯ. ಚತುದರ್ಶಿ,
ನವೆಂಬರ್22: ಈ ದಿನ ಉಪವಾಸವಿದ್ದು ಶಿವನನ್ನು ಪೂಜಿಸಬೇಕು. ಅಮವಾಸ್ಯೆ,
ನವೆಂಬರ್ 23: ಪಿತೃ ದೇವತೆಗಳ ಹೆಸರಿನಲ್ಲಿ ಆಹಾರ ದಾನ ಮಾಡಬೇಕು, ದೇವಾಸ್ಥಾನಕ್ಕೆ ಹೋಗಿ ದೀಪ ಹಚ್ಚಿ, ದೇವರಿಗೆ ತೆಂಗಿನಕಾಯಿ ಸಮರ್ಪಿಸಬೇಕು,ಅಮವಾಸ್ಯೆ, ಕಾರ್ತಿಕ ಮಾಸ ಮುಕ್ತಾಯ.

ಕಾರ್ತಿಕಮಾಸದಲ್ಲಿ ಬರುವ ಸೋಮವಾರದ ದಿನಾಂಕಗಳು:
ಅಕ್ಟೋಬರ್ 31
ನವೆಂಬರ್ 7
ನವೆಂಬರ್ 14
ನವೆಂಬರ್ 21

ಕಾರ್ತಿಕ ಮಾಸ ಆರಂಭ, ಅಂತ್ಯ, ಹಾಗೂ ಆಚರಣೆ…!

ದಶಕಂಠ ರಾವಣ ರಚಿಸಿದ ಸ್ತೋತ್ರ ….!

ಜ್ಯೋತಿಷ್ಯದ ಪ್ರಕಾರ ಶುಕ್ರವಾರ ಜನಿಸಿದವರ ಗುಣ ಲಕ್ಷಣಗಳು ಹೇಗಿರುತ್ತದೆ ಗೊತ್ತಾ …?

 

- Advertisement -

Latest Posts

Don't Miss