Thursday, June 19, 2025

Latest Posts

ಸಿದ್ಧರಾಮಣ್ಣನ ಅಧಿಕಾರದಲ್ಲಿಯೇ ಹೆಚ್ಚಿದ ರೈತ ಆತ್ಮಹತ್ಯೆ: ಒಳಜಗಳದಿಂದ ಸರ್ಕಾರ ಬೀಳುತ್ತೆ ಎಂದ ಕಟೀಲ್

- Advertisement -

Hubballi political News: ಹುಬ್ಬಳ್ಳಿ: ಸಿದ್ಧರಾಮಣ್ಣನವರ ಸರ್ಕಾರ ಬಂದಮೇಲೆ ರಾಜ್ಯದಲ್ಲಿ 250ಕ್ಕೂ ಹೆಚ್ಚಿನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿದ್ಯುತ್ ಕ್ಷಾಮ ಹೆಚ್ಚಾಗಿದೆ. ಅಲ್ಲದೇ ನೀರಿನ ಸಮಸ್ಯೆಯಿಂದ ಜನರು ಕಂಗಾಲಾಗಿದ್ದಾರೆ. ಈ ನಿಟ್ಟಿನಲ್ಲಿ ಬರ ಪರಿಶೀಲನೆ ಅಧ್ಯಯನ ತಂಡವನ್ನು ಮಾಡಿ ನಾಳೆಯಿಂದ ಸಮೀಕ್ಷೆ ಮಾಡಲಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲು ಹೇಳಿದರು.

ಬಿಜೆಪಿ ಪ್ರಶಿಕ್ಷಣ ಕಾರ್ಯಾಗಾರಕ್ಕೆ ಚಾಲನೆ ನೀಡಿದ ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ನಮ್ಮಲ್ಲಿರುವ ಎಲ್ಲ ನಾಯಕರು ಸಮರ್ಥರೇ. ಈ ನಿಟ್ಟಿನಲ್ಲಿ ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡಿ ಸೂಕ್ತ ಸಮಯದಲ್ಲಿ ನಮ್ಮ ವರಿಷ್ಠರು ನಿರ್ಧಾರವನ್ನು ಕೈಗೊಳ್ಳುತ್ತಾರೆ ಎಂದರು.

ಕೇಂದ್ರ ಸರ್ಕಾರಕ್ಕೆ ತನ್ನದೇ ಆದ ಗೈಡ್ ಲೈನ್ ಇದೆ. ಎನ್.ಡಿ.ಆರ್.ಎಫ್ ಹಾಗೂ ಎಸ್‌.ಡಿ.ಆರ್.ಎಫ್ ವರದಿ ಮೇಲೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಪ್ರಸ್ತಾವನೆಯನ್ನು ಪರಿಶೀಲನೆ ನಡೆಸಿ ಮುಂದಿನ ನಿರ್ಧಾರವನ್ನು ಕೈಗೊಳ್ಳುತ್ತದೆ. ಕಂಡಿತವಾಗಿಯೂ ಸರ್ಕಾರ ಹಣವನ್ನು ಬಿಡುಗಡೆ ಮಾಡುತ್ತದೆ ಎಂದು ಅವರು ಮಾಹಿತಿ ನೀಡಿದರು.

ಕಾಂಗ್ರೆಸ್ ಶಾಸಕರಿಗೆ ಐವತ್ತು ಕೋಟಿ ಆಫರ್ ನೀಡುವ ಅವಶ್ಯಕತೆ ಆಗಲಿ, ಅನಿವಾರ್ಯತೆಯಾಗಲಿ ಬಿಜೆಪಿಗೆ ಇಲ್ಲ. ಕಾಂಗ್ರೆಸ್ ಆಂತರಿಕ ಜಗಳದಿಂದಲೇ ಸರ್ಕಾರ ಬಿದ್ದು ಹೋಗುತ್ತದೆ. ಆದರೆ ಜನರಿಗೆ ದಾರಿ ತಪ್ಪಿಸುವ ಹಿನ್ನೆಲೆಯಲ್ಲಿ ಹೀಗೆ ಬಿಜೆಪಿ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಮಾಡುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪತ್ನಿ ಜತೆ ಅಕ್ರಮ ಸಂಬಂಧ ಹೊಂದಿದ್ದ ಇನ್​ಸ್ಪೆಕ್ಟರ್​ನ ಮರ್ಮಾಂಗ ಕತ್ತರಿಸಿದ ಕಾನ್‌ಸ್ಟೇಬಲ್​

ಗೃಹಿಣಿ ಆತ್ಮಹತ್ಯೆ ಕೇಸ್, ವಾರದ ಬಳಿಕ ಹೊರಬಿತ್ತು ಸಾವಿನ ಹಿಂದಿನ ಅಸಲಿ ಕಹಾನಿ

‘ಬಿಜೆಪಿಯವರಿಗೆ ವಿರೋಧ ಪಕ್ಷದ ನಾಯಕನನ್ನ ನೇಮಕ ಮಾಡುವ ಸಾಮರ್ಥ್ಯ ಇಲ್ಲ’

- Advertisement -

Latest Posts

Don't Miss