Kaveri water: ಬಿಬಿಎಂಪಿ ಕಛೇರಿ ಮುಂಭಾಗ ಕಾರ್ಯಕರ್ತರಿಂದ ಕೇಶಮುಂಡನ.

ರಾಜ್ಯ ಸುದ್ದಿ: ಬರಗಾಲ ಸಂದರ್ಭದಲ್ಲೂ ತಮಿಳುನಾಡಿಗೆ ಕಾವೇರಿ ನದಿ ನೀರು ಹಂಚಿಕೆ ಮಾಡುತ್ತಾ ರಾಜ್ಯದ ರೈತರಿಗೆ ಹಾಗೂ ಜನರಿಗೆ ಅನ್ಯಾಯವಾಗುತ್ತಿರುವ ನಡೆಯನ್ನು ಖಂಡಿಸಿ ಬೆಂಗಳೂರಿನ ಕೆಆರ್ ಪುರದಲ್ಲಿ ರತ್ನ ಭಾರತ ರೈತ ಸಮಾಜದ ವತಿಯಿಂದ ಪ್ರತಿಭಟನಾ ಧರಣಿಯನ್ನು ಹಮ್ಮಿಕೊಳ್ಳಲಾಗಿತ್ತು.

ಮೊದಲಿಗೆ ವೃತ್ತದ ಕಟ್ಟೆ ವಿನಾಯಕ ದೇವಾಲಯ ಸಮೀಪದ ಕಾವೇರಿ ದೇವಿ ಪುತ್ಥಳಿಗೆ ಹಾಲಿನ ಅಭಿಷೇಕ ಮಾಡಿ ಪ್ರತಿಭಟನೆಗೆ ಚಾಲನೆ ನೀಡಿದರು. ಬಳಿಕ ಬಿಬಿಎಂಪಿ ಕಛೇರಿ ಮುಂಭಾಗಕ್ಕೆ ತೆರಲಿ ರಾಜ್ಯ ಹಾಗೂ ಕೇಂದ್ರ ವಿರುದ್ಧ ದಿಕ್ಕಾರ ಕೂಗಿ, ಸಂಘಟನೆಯ ಕಾರ್ಯಕರ್ತರು ಕೇಶಮುಂಡನ ಮಾಡಿಕೊಂಡರು.

ಇನ್ನೂ ಇದೇ ವೇಳೆ ರತ್ನ ಭಾರತ ರೈತ ಸಮಾಜದ ರಾಜ್ಯಾಧಕ್ಷ ಲಕ್ಷ್ಮಣ್ ಮಾತನಾಡಿ ಕಾವೇರಿ ನೀರು ಹಂಚಿಕೆಯಲ್ಲಿ ರಾಜ್ಯ, ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅನ್ಯಾಯವನ್ನು ಮಾಡುತ್ತಿದೆ , ರೈತಪರ ಬೆಂಬಲ ಸೂಚಿಸುವ ಸಲುವಾಗಿ ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ . ಇನ್ನೂ ಮುಖ್ಯವಾಗಿ ಕಾವೇರಿ ನೀರು ಬೆಂಗಳೂರಿನ ಅಧಾರವಾಗಿದೆ .ರೈತ ಹೋರಾಟಕ್ಕೆ ಬೆಂಗಳೂರಿಗರು ಜೊತೆಗೂಡಬೇಕು ಎಂದು ಆಗ್ರಹಿಸಿದರು.

BJP Titcket: ಟಿಕೆಟ್ ಆಮಿಷವೊಡ್ಡಿ ಕೋಟಿ ವಂಚಿಸಿದ ಹಾಲಾಶ್ರೀ; ಮತ್ತೊಂದು ವಂಚನೆ ಪ್ರಕರಣ..!

Laxmi hebbalkar: ಜನರು‌ ಅನುಭವಿಸುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಗಮನಹರಿಸಬೇಕು..!

Justin Trudeau: ಕಿರಿಕ್ ಮಾಡಿದ ಕೆನಡಾ ಪ್ರಧಾನಿಗೆ ಭಾರೀ ಹಿನ್ನಡೆ

About The Author