Sunday, March 3, 2024

Latest Posts

ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಆದೇಶ

- Advertisement -

ದೆಹಲಿ: ಜೂನ್ ತಿಂಗಳಲ್ಲಿ ತಮಿಳುನಾಡಿಗೆ 9.19 ಟಿಎಂಸಿ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶಿಸಿದೆ.

ಈ ಕುರಿತು ದೆಹಲಿಯಲ್ಲಿ ಉಭಯ ರಾಜ್ಯಗಳ ಅಧಿಕಾರಿಗಳ ಜೊತೆ ಸಭೆ ನಡೆಸಿದ ಪ್ರಾಧಿಕಾರ, ರಾಜ್ಯದ ಜಲಾಶಯದಲ್ಲಿ  ಒಳಹರಿವು ಹೆಚ್ಚಾದರೆ ಜೂನ್ ತಿಂಗಳಲ್ಲಿ ತಮಿಳುನಾಡಿಗೆ 9.19ಟಿಎಂಸಿ ನೀರು ಬಿಡುವಂತೆ ಆದೇಶಿಸಿದೆ. ಈ ಮೂಲಕ ರಾಜ್ಯಕ್ಕೆ ಸದ್ಯದ ಮಟ್ಟಿಗೆ ತಲೆನೋವು ತಪ್ಪಿದಂತಾಗಿದೆ.

ಸದ್ಯ ರಾಜ್ಯದ ಪ್ರಮುಖ ಜಲಾಶಯಗಳಾದ ಕೆ.ಆರ್ ಎಸ್, ಕಬಿನಿ, ಹಾರಂಗಿ, ಹೇಮಾವತಿ ಈ ನಾಲ್ಕು ಜಲಾಶಯಗಳಲ್ಲಿ ಒಟ್ಟು 14 ಟಿಎಂಸಿ ಮಾತ್ರ ನೀರು ಸಂಗ್ರಹವಾಗಿದೆ. ಇದರಲ್ಲಿ ಬೆಂಗಳೂರು ಮಹಾನಗರಕ್ಕೆ ಪ್ರತಿ ತಿಂಗಳು ಒಂದೂವರೆ ಟಿಎಂಸಿ ಯಿಂದ 2 ಟಿಎಂಸಿ ನೀರು ಪೂರೈಕೆ ಮಾಡಲಾಗ್ತಿದೆ. ಅಲ್ಲದೆ ಮಂಡ್ಯ, ಮೈಸೂರು ಸುತ್ತಮುತ್ತಲಿನ ನಗರ ಪ್ರದೇಶಗಳೂ ಇದೇ ನೀರನ್ನೇ ಅವಲಂಭಿಸಿವೆ.

ಸದ್ಯಕ್ಕೆ ಒಳ ಹರಿವು ಹೆಚ್ಚಾದ್ರೆ ಮಾತ್ರ ತಮಿಳು ನಾಡಿಗೆ ನೀರು ಹರಿಸಿ ಅಂತ ಪ್ರಾಧಿಕಾರ ಆದೇಶ ನೀಡಿ ರಾಜ್ಯದ ಜನ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಜಲಾಶಯದಲ್ಲಿರೋ ನೀರು ಸದ್ಯದ ಮಟ್ಟಿಗೆ ಅಗತ್ಯ ಪೂರೈಸಲಿದೆ. ಒಂದು ವೇಳೆ ರಾಜ್ಯದಲ್ಲಿ ಮುಂಗಾರು ಕೈಕೊಟ್ಟರೆ ರಾಜ್ಯದೆಲ್ಲೆಡೆ ನೀರಿಗಾಗಿ ಹಾಹಾಕಾರ ಶುರುವಾಗಲಿದೆ.

ಎಲೆಕ್ಷನ್ ರಿಸಲ್ಟ್ ನೋಡಿ ಡಿಕೆಶಿಗೆ ಶಾಕ್…!ಈ ವಿಡಿಯೋ ತಪ್ಪದೇ ನೋಡಿ

https://www.youtube.com/watch?v=IOlIJ_dsQkk

- Advertisement -

Latest Posts

Don't Miss