Kalaburagi News: ಕಲಬುರಗಿ: KEA ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಕ್ಕೆ, ವಿಷಯ ಬಗೆದಷ್ಟು ಬಯಲಾಗುತ್ತಲೇ ಇದೆ. KEA ಪರೀಕ್ಷೆ ನಡೆದ ಅಕ್ಟೋಬರ್ 28 ರಂದು ತಾನು ಡೀಲ್ ಮಾಡಿಕೊಂಡಿರುವ ಎಲ್ಲಾ ಅಭ್ಯರ್ಥಿಗಳ ಜೊತೆ ಆರ್.ಡಿ ಪಾಟೀಲ್ ಕಾಲ್ ಮಾಡಿ ಮಾತನಾಡಿದ್ದಾರೆ.
ಅಷ್ಟೇ ಅಲ್ಲದೇ ವಾಟ್ಸ್ ಆ್ಯಪ್ ನಲ್ಲೆ ಅಪ್ಲಿಕೇಶನ್ ಹಾಕುವಂತೆ ಆರ್ ಡಿ ಪಾಟೀಲ್ ಚಾಟ್ ಕೂಡ ಮಾಡಿದ್ದಾನೆ. ನಾರ್ಮಲ್ ಕಾಲ್ ಬಿಟ್ಟು, ವಾಟ್ಸಾಪ್‌ನಲ್ಲಿ ಚಾಟ್ ಮತ್ತು ಕಾಲ್ ಮಾಡಲು ಕಾರಣವೇನು ಎಂದರೆ, ಯಾರಿಗೂ ಈ ಬಗ್ಗೆ ಸುಳಿವು ಸಿಗಬಾರದು ಎಂಬ ಕಾರಣಕ್ಕೆ, ಆರ್.ಡಿ.ಪಾಟೀಲ್ ವಾಟ್ಸಪ್ ಚಾಟ್, ಕಾಲ್ ಮಾಡುತ್ತಿದ್ದ.
ಇದೀಗ ಪಾಟೀಲ್ ಚಾಟ್ ಮತ್ತು ಕಾಲ್ ಮಾಡಿದ್ದ ಸ್ಕ್ರೀನ್ ಶಾರ್ಟ್ಸ್ ಲಭ್ಯವಾಗಿದ್ದು, ಇದರಲ್ಲಿ ಪರೀಕ್ಷೆಗೆ ಅಪ್ಲಿಕೇಶನ್ ಹಾಕುವಂತೆ ಹೇಳಿರುವ ಚಾಟ್ ಸಿಕ್ಕಿದೆ. ನಮ್ಮ ತಂದೆ ಕಾಲ್ ಮಾಡ್ತಿದ್ದಾರೆ ರಿಸೀವ್ ಮಾಡಿ ಮಾತಾಡಿ ಅಂತ ಅಭ್ಯರ್ಥಿ ಕೂಡ ಹೇಳಿದ್ದಾನೆ.
FDA ಪರೀಕ್ಷೆ ನಡೆಯುವ ಮುನ್ನ ಎಲ್ಲಾ ಅಭ್ಯರ್ಥಿಗಳಿಗೆ ಕಾಲ್ ಮಾಡಿ ಪಾಟೀೀಲ್ ಮಾತನಾಡಿದ್ದಾನೆ. ಅಕ್ಟೋಬರ್ 28ಕ್ಕೆ ಬೆಳಗ್ಗೆ 5 ಗಂಟೆ ಇಂದ ಅಭ್ಯರ್ಥಿಗಳ ಜೊತೆ ಟಚ್ ನಲ್ಲಿ ಇದ್ದ. ಪರೀಕ್ಷೆ ಬರೆಯುವವರಿಗೆಲ್ಲ ಕಾಲ್ ಮಾಡಿ, ಪಾಟೀಲ್ ಗೈಡ್ ಕೂಡ ಮಾಡಿದ್ದ. ಪರೀಕ್ಷೆಯಲ್ಲಿ ಹೇಗೆ ಅಕ್ರಮ ಎಸಗಬೇಕು ಅಂತ ಮೊದಲೇ ಪ್ಲಾನ್ ಮಾಡಿದ್ದ. ಅದರಂತೆ ಎಲ್ಲರಿಗೂ ತಮ್ಮ ಆಪ್ತರ ಮೂಲಕ ಬ್ಲೂ ಟೂಥ್ ಕೂಡ ನೀಡಿದ್ದ.
ಕರ್ನಾಟಕದ ಕಲೆಕ್ಷನ್ ಕಿಂಗ್ ಅಪ್ಪ, ಕರ್ನಾಟಕದ ಕಲೆಕ್ಷನ್ ಪ್ರಿನ್ಸ್ ಮಗ: ಹೆಚ್.ಡಿ.ಕುಮಾರಸ್ವಾಮಿ
ನಮ್ಮ ಹುಡುಗರ ಆಟವು ಚಂದ, ಗೆಲವಿನ ಹಠವೂ ಬಲು ಚಂದ: ಕ್ರಿಕೇಟ್ ತಂಡಕ್ಕೆ ಅಭಿನಂದಿಸಿದ ಡಿಕೆಶಿ
ಧಾರವಾಡದಲ್ಲಿ ಬಿಜೆಪಿ ಭಿನ್ನಮತ, ಆಹ್ವಾನವಿದ್ದರೂ ಕಾರ್ಯಕ್ರಮಕ್ಕೆ ಗೈರಾದ ನಾಯಕರು