Kerala Viral News: ಸಾಮಾನ್ಯ ಮದುವೆ ಅಂದ್ರೆ ನಮಗೆ ನೆನಪಿಗೆ ಬರೋದು ಚಿನ್ನ, ರೇಷ್ಮೆ ಸೀರೆ, ಮೇಕಪ್ ಮಾಡಿದ ವಧು, ಜಿಗಿ ಜಿಗಿಯಾಗಿ ಮಿಂಚುವ ವರ, ಭರ್ಜರಿ ಊಟ, ಡೆಕೋರೇಷನ್. ಅದರಲ್ಲೂ ಕೇರಳದ ಮದುವೆಗೆ ಹೋದ್ರೆ, ಅಲ್ಲಿನ ವಧುವಿಗೆ ಕೆಜಿ ಕೆಜಿ ಬಂಗಾರವನ್ನೇ ಹಾಕಲಾಗತ್ತೆ.
ಆದರೆ ಇಲ್ಲಿ ಓರ್ವ ಯುವತಿ 1 ಗ್ರಾಮ್ ಬಂಗಾರವಾಗಲಿ, ನಕಲಿ ಆರ್ನ್‌ಮೆಂಟ್ಸ್ ಆಗಲಿ ಧರಿಸದೇ, ಸಿಂಪಲ್ ಆಗಿ ಬರೀ ಚಂದದ ಕೆಂಪು-ಮೆರುನ್ ಬಣ್ಣದ ಸೀರೆ ಧರಿಸಿ ವಿವಾಹವಾಗಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ವೀಡಿಯೋ ವೈರಲ್ ಆಗಿದ್ದು, ಇಲ್ಲಿ ವಧು ಹೈನೆಕ್-ಫುಲ್ ಸ್ಲಿವ್ಸ್ ಇರುವ ಸೀರೆ ಧರಿಸಿ, ತಲೆಗೆ ದುಪಟ್ಟಾ ಧರಿಸಿ, ಮುಖದ ಮೇಲೆ ಲೈಟ್ ಆಗಿರುವ ಮೇಕಪ್ ಹಾಕಿದ್ದಾಳೆ.
ಆಕೆ ಆಭರಣ ಧರಿಸದಿದ್ದರೂ, ಅತೀ ಸುಂದರವಾಗಿ ಕಂಡಿದ್ದಾಳೆ. ದೇವತೆಯಂತೆ ಕಾಣುತ್ತಿದ್ದಾಳೆ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಆಕೆಯ ನಗುಮುಖ ಆಕೆಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿತ್ತು. ಇನ್ನು ಈ ವೀಡಿಯೋ ನೋಡಿದ ಇಂದಿನ ಯುವ ಪೀಳಿಗೆ, ಇಂಥ ಮದುವೆ ಟ್ರೆಂಡ್ ಆಗಲಿ, ಆಭರಣ ಧರಿಸಿ, ರಾಶಿ ರಾಶಿ ಮೇಕಪ್ ಹಾಕಿ ಮಾಡುವ ಆಡಂಬರದ ಮದುವೆಗೆ ಅಂತ್ಯ ಹಾಡಲಿ ಎಂದು ಹೇಳಿದ್ದಾರೆ. ನೋ ಗೋಲ್ಡ್ ಮದುವೆಗೆ ಜನ ಜೈ ಎಂದಿದ್ದಾರೆ.
#TerePaasMain Meets the unique “Zero Ornament Wedding” in Kerala 💝 pic.twitter.com/a8ix1hsuko
— Karim ~ ARR❤️ (@arr_karim) July 3, 2026




