Tuesday, April 8, 2025

Latest Posts

Kerala News: ಇದೆಂಥಾ ಅಮಾನವೀಯತೆ..? :ಕೇರಳ ಕಂಪನಿಯ ಬ್ಯಾಡ್‌ ಸ್ಟೋರಿ..!

- Advertisement -

Kerala News: ದಿನಕಳೆದಂತೆಲ್ಲ ಈ ಆಧುನಿಕ ಸಮಾಜದಲ್ಲಿ ಕೇವಲ ದರ್ಪ, ದೌಲತ್ತು, ದೌರ್ಜನ್ಯಗಳೇ ಹೆಚ್ಚಾಗಿ ಮಾನವೀಯತೆಯೇ ಕಡಿಮೆಯಾಗುತ್ತಿದೆ. ಇದಕ್ಕೆ ಪೂರಕವಾಗುವಂತೆ ಕೇರಳದಲ್ಲಿ ಒಂದು ಪ್ರಕರಣ ಬೆಳಕಿಗೆ ಬಂದಿದ್ದು, ಸಾರ್ವಜನಿಕರ ರಕ್ತ ಕುದಿಯುವಂತೆ ಮಾಡಿದೆ. ಇನ್ನೂ ತಾನು ನೀಡಿರುವ ಕೆಲಸದ ಗುರಿಯನ್ನು ತಲುಪಿಲ್ಲ ಎನ್ನುವ ಕಾರಣಕ್ಕೆ ಕಂಪನಿಯೊಂದು ತನ್ನ ನೌಕರರನ್ನು ಅಮಾನವೀಯವಾಗಿ ನಡೆಸಿಕೊಂಡಿದೆ. ಕೇರಳದ ಕೊಚ್ಚಿಯಲ್ಲಿನ ಖಾಸಗಿ ಮಾರ್ಕೆಟಿಂಗ್‌ ಕಂಪನಿಯು ನೌಕರರ ಪ್ಯಾಂಟ್‌ ಬಿಚ್ಚಿಸಿ ಅರೆನಗ್ನರನ್ನಾಗಿಸುವುದು, ಮಂಡಿಗಾಲಲ್ಲಿ ನಡೆಸುವುದು ಹಾಗೂ ನಾಯಿಯಂತೆ ನೆಲನೆಕ್ಕಿಸುವುದನ್ನು ಮಾಡುವ ಮೂಲಕ ವ್ಯಾಪಕ ಜನಾಕ್ರೋಶಕ್ಕೆ ಗುರಿಯಾಗಿದೆ.

ತನಿಖೆಗೆ ಆದೇಶಿಸಿದ ಕಾರ್ಮಿಕ ಇಲಾಖೆ..

ಇನ್ನೂ ಈ ಕುರಿತು ಎಲ್ಲೆಡೆ ವಿಡಿಯೋವಂದು ತುಂಬಾ ವೈರಲ್‌ ಆಗಿದ್ದು, ಅದರಲ್ಲಿ ಕೆಲ ನೌಕರರನ್ನು ಈ ರೀತಿ ಅಮಾನುಷವಾಗಿ ನಡೆಸಿಕೊಳ್ಳುತ್ತಿದ್ದರೆ, ಉಳಿದವರು ನಿಂತು ಸಿನಿಮಾ ರೀತಿ ತಮಾಷೆ ನೋಡುತ್ತಿರುವುದು ಕಂಡುಬಂದಿದೆ. ಇವರೆಲ್ಲಾ ಕೇವಲ 6,000 ರಿಂದ 8000 ರೂಪಾಯಿಗಳ ಕನಿಷ್ಠ ವೇತನಕ್ಕೆ ಕೆಲಸ ಮಾಡುವವರಾಗಿದ್ದಾರೆ ಎನ್ನುವುದು ಪ್ರಾಥಮಿಕ ಮಾಹಿತಿಯಾಗಿದೆ. ಅಲ್ಲದೆ ಈ ವಿಡಿಯೋ ಎಲ್ಲೆಡೆ ಭಾರೀ ಜನಾಕ್ರೋಶಕ್ಕೆ ಒಳಗಾಗುತ್ತಿದ್ದಂತೆ ಕೇರಳ ಕಾರ್ಮಿಕ ಇಲಾಖೆಯು ಅಲರ್ಟ್‌ ಆಗಿದೆ. ಈ ಘಟನೆಗೆ ಸಂಬಂಧಿಸಿದ ಸೂಕ್ತ ತನಿಖೆಗೆ ಆದೇಶ ನೀಡಿದ್ದು, ಕಂಪನಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದೆ.

ಅಂದಹಾಗೆ ವೈರಲ್ ವಿಡಿಯೋದಲ್ಲಿ ಕಂಡುಬರುವ ನೌಕರರ ಹೇಳಿಕೆಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದು, ಘಟನೆಗೆ ಮಾಜಿ ವ್ಯವಸ್ಥಾಪಕರೇ ಕಾರಣ ಎಂದು ಅವರು ಆರೋಪಿಸಿದ್ದಾರೆ. ಇನ್ನೂ ಮಾಜಿ ಮ್ಯಾನೇಜರ್, ಕಂಪನಿಯ ಮಾಲೀಕರೊಂದಿಗೆ ಜಗಳವಾಡಿದ್ದನು. ನೂತನ ಟ್ರೈನಿಗಳೊಂದಿಗೆ ವೀಡಿಯೊ ಚಿತ್ರೀಕರಿಸಿದ್ದನು, ಇದು ತರಬೇತಿಯ ಭಾಗವಾಗಿದೆ ಎಂದು ಆತ ಹೇಳಿಕೊಂಡಿದ್ದಾರೆ. ಅದರೂ ಸಹ ಪೊಲೀಸರು ಆ ಕ್ಲಿಪ್ ಕುರಿತು ಇದೊಂದು ವಂಚನೆಯ ವೀಡಿಯೊ ಆಗಿದೆ ಎಂದು ಕಿಡಿ ಕಾರಿದ್ದಾರೆ. ಇನ್ನೂ ಕುತ್ತಿಗೆಗೆ ಸರಪಣಿ ಕಟ್ಟಿಕೊಂಡು ನಾಯಿಯಂತೆ ಮನುಷ್ಯನನ್ನು ತೆವಳುವಂತೆ ಒತ್ತಾಯಿಸುವ ವೈರಲ್ ವೀಡಿಯೊವನ್ನು ಸುಮಾರು ನಾಲ್ಕು ತಿಂಗಳ ಹಿಂದೆ ಚಿತ್ರೀಕರಿಸಲಾಗಿತ್ತು. ಆ ಮ್ಯಾನೇಜರ್ ಈಗ ಕಂಪನಿಯನ್ನು ತೊರೆದಿದ್ದಾನೆ ಎಂಬುದು ಪೊಲೀಸ್‌ ಮೂಲಗಳ ಮಾಹಿತಿಯಾಗಿದೆ.

ಹಿಂದೂಸ್ತಾನ್‌ ಪವರ್‌ ಲಿಂಕ್ಸ್‌ ಕಂಪನಿಯ ಅಮಾನವೀಯತೆ..

ಇವರೆಲ್ಲರೂ ಮಾರ್ಕೆಟಿಂಗ್ ಉದ್ಯೋಗಿಗಳಾಗಿದ್ದಾರೆ, ಅವರೆಲ್ಲರೂ ಮನೆ ಮನೆಗಳಿಗೆ ಹೋಗಿ ಕಂಪನಿಯ ಉತ್ಪನ್ನಗಳನ್ನು ಮಾರಾಟ ಮಾಡುವ ಕೆಲಸ ಹೊಂದಿದ್ದಾರೆ. ಟಾರ್ಗೆಟ್ ರೀಚ್ ಆಗಲು ವಿಫಲರಾದವರಿಗೆ ಇಂತಹ ಶಿಕ್ಷೆಯನ್ನು ವಿಧಿಸಲಾಗುತ್ತದೆ. ಪೊಲೀಸರ ಪ್ರಕಾರ, ಈ ಘಟನೆ ಕಲೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿಂದೂಸ್ತಾನ್ ಪವರ್ ಲಿಂಕ್ಸ್ ಖಾಸಗಿ ಮಾರ್ಕೆಟಿಂಗ್ ಸಂಸ್ಥೆಯಲ್ಲಿ ನಡೆದಿದ್ದು, ಅಪರಾಧವು ಹತ್ತಿರದ ಪೆರುಂಬವೂರಿನಲ್ಲಿ ನಡೆದಿದೆ ಎಂದು ವರದಿಯಾಗಿದೆ. ಈ ಘಟನೆಯ ಕುರಿತು ಕಂಪನಿಯ ಕೆಲ ನೌಕರರು, ಗುರಿಗಳನ್ನು ಸಾಧಿಸುವಲ್ಲಿ ವಿಫಲರಾದವರಿಗೆ ಆಡಳಿತ ಮಂಡಳಿಯು ಇಂತಹ ಶಿಕ್ಷೆಯನ್ನು ನಮಗೆ ನೀಡುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

- Advertisement -

Latest Posts

Don't Miss