Monday, June 2, 2025

Latest Posts

ರಾಕಿಂಗ್ ಸ್ಟಾರ್ ಯಶ್ ಹಾಗೂ ಇಳಯದಳಪತಿ ವಿಜಯ್ ಫ್ಯಾನ್ಸ್ ಗೆ ಇಲ್ಲಿದೆ ಗುಡ್ ನ್ಯೂಸ್…! ಮಾಸ್ಟರ್ ಜೊತೆ ಕೆಜಿಎಫ್-2..!

- Advertisement -

ಚೀನಿ ವೈರಸ್ ಬಂದ್ಮೇಲೆ ಕಳೆದ ಏಳೆಂಟು ತಿಂಗಳಿನಿಂದ ಸಿನಿ ಪ್ರೇಕ್ಷಕ ಥಿಯೇಟರ್ ನತ್ತ ಮುಖ ಮಾಡಿಲ್ಲ. ಸ್ಟಾರ್ ಹೀರೋ ಸಿನಿಮಾಗಳು ಬೆಳ್ಳಿ ಪರದೆಯ ಮೇಲೆ ರಾರಾಜಿಸಿಲ್ಲ. ಅಲ್ಲೊಂದು ಇಲ್ಲೊಂದು ಬಂದ ಹೊಸಬರ ಸಿನಿಮಾಗಳು ರಿಲೀಸ್ ಆದ್ರೂ ಹೇಳಿಕೊಳ್ಳುವಷ್ಟು ಸಕ್ಸಸ್ ಕಂಡಿಲ್ಲ. ಆದ್ರೀಗ ಸೌತ್ ಇಂಡಸ್ಟ್ರೀಯಲ್ಲಿ ಮೊದಲ ಬಾರಿಗೆ ಸ್ಟಾರ್ ಸಿನಿಮಾವೊಂದು ಲಾಕ್ ಡೌನ್ ಬಳಿಕ ತೆರೆಗೆ ಬರ್ತಿದೆ. ಅದುವೇ ಮಾಸ್ಟರ್.

ಇಳಯದಳಪತಿ ವಿಜಯ್ ಹಾಗೂ ವಿಜಯ್ ಸೇತಪುತಿ ಅಭಿನಯದ ಬಹುನಿರೀಕ್ಷಿತ ಸಿನಿಮಾ ಮಾಸ್ಟರ್ ತೆರೆಯಲ್ಲಿ ಅಬ್ಬರಿಸಲು ರೆಡಿಯಾಗಿದೆ. ಇದೇ ಜನವರಿ 13ರಂದು ತಮಿಳು, ಕನ್ನಡ, ಹಿಂದಿ, ತೆಲುಗು ಹಾಗೂ ಮಾಲಯಾಳಂ ಭಾಷೆಯಲ್ಲಿ ಥಿಯೇಟರ್ ಅಂಗಳಕ್ಕೆ ಬರ್ತಿದೆ. ಇಂಟ್ರೆಸ್ಟಿಂಗ್ ಅಂದ್ರೆ ವಿಜಯ್ ಜೊತೆ ಕೆಜಿಎಫ್-2 ಕೂಡ ಥಿಯೇಟರ್ ಗೆ ಬರ್ತಿದೆ.

ಅರೇ.. ಕೆಜಿಎಫ್-2 ಜನವರಿ 13ರಂದು ಮಾಸ್ಟರ್ ಸಿನಿಮಾದ ಜೊತೆ ರಿಲೀಸ್ ಆಗ್ತಿದೆ ಅಂದುಕೊಳ್ಳಬೇಡಿ. ಅಸಲಿ ಮ್ಯಾಟರ್ ಬೇರೆ ಇದೆ. ಅದೇನಪ್ಪ ಅಂದ್ರೆ ವಿಜಯ್ ಮಾಸ್ಟರ್ ಸಿನಿಮಾದ ವೇಳೆ ಕೆಜಿಎಫ್-2 ಸಿನಿಮಾದ ಟೀಸರ್ ಟೆಲಿಕಾಸ್ಟ್ ಆಗಲಿದೆಯಂತೆ.  ಹಾಗಂತ ಸೌತ್ ಇಂಡಸ್ಟ್ರೀಯ ಖ್ಯಾತ ಚಿತ್ರ ವಿಶ್ಲೇಷಕ ರಮೇಶ್ ಬಾಲ ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬ ಜನವರಿ 8ರಂದು ಕೆಜಿಎಫ್-2 ಟೀಸರ್ ರಿಲೀಸ್ ಆಗ್ತಿದ್ದು, ಆ ಟೀಸರ್ ಯೂಟ್ಯೂಬ್ ನಲ್ಲಿ ಧೂಳ್ ಎಬ್ಬಿಸೋದ್ರ ಜೊತೆಗೆ ಥಿಯೇಟರ್ ನಲ್ಲೂ ಸೌಂಡ್ ಮಾಡಲಿದೆ. ಈ ವಿಷ್ಯ ಕೇಳಿ ರಾಕಿ ಭಕ್ತಗಣ ಸಖತ್ ಖುಷಿಯಾಗಿದ್ದಾರೆ.

- Advertisement -

Latest Posts

Don't Miss