www.karnatakatv.netಇದು.. ಇದು.. ಬೆಂಕಿ ಸುದ್ದಿ ಅಂದರೆ. ಕೇಳಿದ್ರೆ ಇಂತಹ ನ್ಯೂಸ್ ಕೇಳಬೇಕು. ಆಗ ಭಗವಂತ ಎರಡು ಕಿವಿ ಕೊಟ್ಟಿದ್ದಕ್ಕೂ ಸಾರ್ಥಕ. ಈಗ ಡೈರೆಕ್ಟಾಗಿ ಮ್ಯಾಟರ್‌ಗೆ ಬರೋಣ. ಕನ್ನಡದ ಕೆಜಿಎಫ್ ಚಾಪ್ಟರ್-2 ಚಿತ್ರ ಬಾಹುಬಲಿ ಚಿತ್ರವನ್ನು ಹಿಂದಿಕ್ಕಿದೆ. ಈ ಸುದ್ದಿಯ ಸವಿಸ್ತಾರವನ್ನು ತಿಳಿದುಕೊಳ್ಳುವುದಕ್ಕೂ ಮೊದಲೇ ಕನ್ನಡಿಗರು ಎದ್ದುನಿಂತು ಸೆಲ್ಯೂಟ್ ಹೊಡೆಯುತ್ತೀರಾ ಅದರಲ್ಲಿ ಎರಡು ಮಾತೆಯಿಲ್ಲ. ಯಾಕಂದ್ರೆ, ಕೆಜಿಎಫ್ ಕನ್ನಡದ ಮಹೋನ್ನತ ಚಿತ್ರ. ಕನ್ನಡಿಗರ ತಾಕತ್ತೇನು ಎಂಬುದನ್ನು ಇಡೀ ದೇಶಕ್ಕೆ ತೋರಿಸಿಕೊಟ್ಟ ಹೆಮ್ಮೆಯ ಸಿನಿಮಾ. ಇಂತಹ ಅಮೋಘ ಚಿತ್ರದ ಪಾರ್ಟ್2ನ ಕಣ್ತುಂಬಿಕೊಳ್ಳೋದಕ್ಕೆ ಇಡೀ ದೇಶವೇ ಕಣ್ಣರಳಿಸಿ ಕಾಯ್ತಿದೆ. ನರಾಚಿ ಲೋಕದಲ್ಲಿ ತಲ್ಲಣ ಸೃಷ್ಟಿಸುವ ರಾಕಿಭಾಯ್‌ಗೆ ಜೈಕಾರ ಹಾಕೋದಕ್ಕೆ ಪ್ರೇಕ್ಷಕಮಹಾಷಯರು ಒಂಟಿಕಾಲಿನಲ್ಲಿ ನಿಂತು ಕಾಯ್ತಿದ್ದಾರೆ. ಈ ನಡುವೆ ರಾಕಿಂಗ್‌ಸ್ಟಾರ್‌ಗೆ ಜೈಕಾರ ಹಾಕುವ ಕೆಜಿಎಫ್ ಚಿತ್ರತಂಡಕ್ಕೆ ಉಘೇ ಉಘೇ ಎನ್ನುವ ಸಂತಸದ ಸುದ್ದಿ ಕೇಳಿಬಂದಿದೆ ಅದುವೇ ಬಾಹುಬಲಿಯನ್ನ ಸೈಡಿಗಟ್ಟಿರುವುದು. ಅಷ್ಟಕ್ಕೂ, ಯಾವ ವಿಚಾರದಲ್ಲಿ ಬಾಹುಬಲಿಯನ್ನ ಬೀಟ್ ಮಾಡಿದೆ ಎನ್ನುವ ಪ್ರಶ್ನೆಗೆ ಉತ್ತರ ಆಡಿಯೋ ರೈಟ್ಸ್. ಯಸ್, ಕೆಜಿಎಫ್-2 ಚಿತ್ರದ ಆಡಿಯೋ ರೈಟ್ಸ್ ದುಬಾರಿ ಮೊತ್ತಕ್ಕೆ ಸೇಲಾಗಿದೆ. ಬರೋಬ್ಬರಿ 7.2 ಕೋಟಿ ಕೊಟ್ಟು ಖ್ಯಾತ ಮ್ಯೂಸಿಕ್ ಸಂಸ್ಥೆ ಲಹರಿಯವರು ಕೆಜಿಎಫ್ ಚಿತ್ರದ ಐದು ಭಾಷೆಯ ಆಡಿಯೋ ರೈಟ್ಸ್ನ ಕೊಂಡು ಕೊಂಡಿದ್ದಾರೆ. ಇಷ್ಟೊಂದು ದಾಖಲೆಯ ಮೊತ್ತಕ್ಕೆ ಆಡಿಯೋ ರೈಟ್ಸ್ ಸೋಲ್ಡ್ಔಟ್ ಆಗಿರುವುದು ಸೌತ್ ಸಿನಿಮಾ ಇಂಡಸ್ಟಿಯಲ್ಲಿ ಇದೇ ಮೊದಲು. ಈ ಹಿಂದೆ ಇದೇ ಲಹರಿ ಸಂಸ್ಥೆ ಬಾಹುಬಲಿ ಚಿತ್ರದ ಆಡಿಯೋ ರೈಟ್ಸ್ ಪಡೆದುಕೊಂಡಿತ್ತು. ಬಾಹುಬಲಿ ಪಾರ್ಟ್1 ಆಡಿಯೋ ರೈಟ್ಸ್ 3.6 ಕೋಟಿಗೆ ಖರೀದಿಸಿದ್ರೆ, ಪಾರ್ಟ್ 2 ಆಡಿಯೋ ಹಕ್ಕಿಗೆ 5.4 ಕೋಟಿ ಕೊಟ್ಟಿದ್ದರು. ಇದೀಗ ಅದಕ್ಕಿಂತ ದುಪ್ಪಟ್ಟು ಹಣವನ್ನು ನೀಡಿ ಕೆಜಿಎಫ್ ಚಾಪ್ಟರ್-2 ಚಿತ್ರದ ಆಡಿಯೋ ಹಕ್ಕುಗಳನ್ನು ಖರೀದಿ ಮಾಡಿದ್ದಾರೆ. ಅಲ್ಲಿಗೆ, ಆಡಿಯೋ ರೈಟ್ಸ್ ವಿಚಾರದಲ್ಲಿ ಬಾಹುಬಲಿ ಚಿತ್ರವನ್ನು ಕೆಜಿಎಫ್ ಹಿಂದಿಕ್ಕಿದೆ. ಬಿಡುಗಡೆಗೂ ಮೊದಲೇ ರೆಕಾರ್ಡ್ ಬ್ರೇಕ್ ಮಾಡಿದೆ. ತಿಕ್ಕಿಅಳಿಸಲಾಗದ ಇತಿಹಾಸಕ್ಕೆ ಮ್ಯೂಸಿಕ್ ಲೋಕದಲ್ಲಿ ಸಾಕ್ಷಿಯಾಗಿದೆ. ಶೀಘ್ರದಲ್ಲೇ ರವಿಬಸ್ರೂರ್ ಮ್ಯೂಸಿಕ್ ಕಂಪೋಸ್ ಮಾಡಿರುವ ಹಾಡುಗಳು ಲಹರಿ ಸಂಸ್ಥೆಯಿಂದ ನಿಮ್ಮ ಮನೆಮನ ತಲುಪಲಿವೆ.