Saturday, October 25, 2025

Latest Posts

ಗ್ರಾನೈಟ್ ವ್ಯಾಪಾರಿಯ ಮನೆಗೆ ಕನ್ನ ಹಾಕಿದ ಖದೀಮರು

- Advertisement -

Dharwad News: ಧಾರವಾಡ: ಧಾರವಾಡದ ಗ್ರಾನೈಟ್ ವ್ಯಾಪಾರಿಯೊಬ್ಬರ ಮನೆಯ ಕೀಲಿ ಮುರಿದು ಒಳನುಗ್ಗಿದ ಖದೀಮರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿದ ಘಟನೆ ಧಾರವಾಡದ ಸಂಗಮ ಚಿತ್ರಮಂದಿರ ಬಳಿಯ ಕೆಂಪಗೇರಿಯಲ್ಲಿ ನಡೆದಿದೆ.

ಅರುಣ ಬಸವರಾಜ ಹುನಗುಂದ ಎಂಬುವರ ಮನೆಯಲ್ಲೇ ಈ ಕಳ್ಳತನ ನಡೆದಿದ್ದು, ಹುನಗುಂದ ಕುಟುಂಬದವರು ಸಂಬಂಧಿಯೊಬ್ಬರ ಮದುವೆ ಕಾರ್ಯಕ್ಕೆ ಯಾದಗಿರಿಗೆ ತೆರಳಿದ್ದಾಗ ಕಳ್ಳರು ತಮ್ಮ ಕೈ ಚಳಕ ತೋರಿದ್ದಾರೆ.

ಮನೆಯ ಮುಂಬಾಗಿಲಿನ ಕೀಲಿಮುರಿದು ಒಳ ನುಗ್ಗಿದ ಕಳ್ಳರು, ಮನೆಯಲ್ಲಿನ 250 ಗ್ರಾಂ ನಷ್ಟು ಚಿನ್ನದ ಆಭರಣಗಳನ್ನು ದೋಚಿದ್ದಾರೆ. ಇಂದು ಬೆಳಗ್ಗೆ ಮನೆಯವರು ಬಂದು ನೋಡಿದಾಗ ಮನೆಯಲ್ಲಿ ಕಳ್ಳತನ ಆಗಿದ್ದು ಗೊತ್ತಾಗಿದೆ. ಸ್ಥಳಕ್ಕೆ ಸಿಪಿಐ ವಿಶ್ವನಾಥ ಚೌಗಲೆ, ಶ್ವಾನ ದಳದವರು, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಶಹರ ಠಾಣೆಯಲ್ಲಿ ದೂರು ದಾಖಲಾಗಿದೆ.

2ನೇಯ ಬಾರಿಗೆ ಪಾಕ್ ಪ್ರಧಾನಿಯಾಗಿ ಆಯ್ಕೆಯಾದ ಶೆಹಬಾಜ್ ಷರೀಫ್

ಜಮ್ಮು-ಕಾಶ್ಮೀರದಲ್ಲಿ ಧಾರಾಕಾರ ಮಳೆ: ಮನೆ ಕುಸಿದು ನಾಲ್ವರ ಸಾವು

ಟಿಕೇಟ್ ಘೋಷಣೆಯಾದರೂ ಚುನಾವಣಾ ಕಣದಿಂದ ಹಿಂದೆ ಸರಿದ ನಟ

- Advertisement -

Latest Posts

Don't Miss