Thursday, February 6, 2025

Latest Posts

ಮದುವೆ ಮನೆಗೆ ನುಗ್ಗಿ ಕನ್ನ ಹಾಕಿದ ಖದೀಮ: ಚಿನ್ನ, ವಜ್ರ ಲಕ್ಷ ಲಕ್ಷ ಹಣ ಲೂಟಿ

- Advertisement -

Dharwad News: ಧಾರವಾಡ: ಧಾರವಾಡದ ಸಣ್ಣ ನೀರಾವರಿ ಇಲಾಖೆಯ ಎಕ್ಸಿಕ್ಯೂಟಿವ್ ಎಂಜಿನಿಯರ್ ಪುತ್ರನ ಮದುವೆಯಲ್ಲಿ ಖದೀಮರು ಲಕ್ಷಾಂತರ ರೂಪಾಯಿ ಮೌಲ್ಯದ ವಜ್ರ, ಚಿನ್ನ, ನಗದು ದೋಚಿ ಪರಾರಿಯಾಗಿರುವ ಘಟನೆ ಧಾರವಾಡದ ವಿದ್ಯಾನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಗಂಗಾದರಪ್ಪ ಪಟ್ಟಣಶೆಟ್ಟಿ ಎಂಬುವವರ ಮಗ ಡಾ.ಶರಣಪ್ಪ ಹಾಗೂ ಹುಬ್ಬಳ್ಳಿ ಅಧ್ಯಾಪಕನಗರದ ಅರುಣಕುಮಾರ ಗಿರಿಯಾಪುರ ಅವರ ಪುತ್ರಿ ಡಾ.ಪೂಜಾ ಅವರ ಮದುವೆಯ ಕಾರ್ಯಕ್ರಮದಲ್ಲಿ ಖದೀಮರು ತಮ್ಮ ಕೈಚಳಕ ತೋರಿಸಿದ್ದಾರೆ.

800 ಗ್ರಾಂ ಚಿನ್ನ, ಲಕ್ಷಾಂತರ ರೂಪಾಯಿ ಮೌಲ್ಯದ ವಜ್ರ ಹಾಗೂ ಸುಮಾರು 50 ಲಕ್ಷ ರೂಪಾಯಿ ನಗದನ್ನು ಖದೀಮರು ದೋಚಿದ್ದಾರೆ. ಕಳ್ಳ ತನ್ನ ಬ್ಯಾಗಿನಲ್ಲಿ ಎಲ್ಲವನ್ನೂ ಹಾಕಿಕೊಂಡು ಹೋಗುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು. ವಿದ್ಯಾಗಿರಿ ಠಾಣೆ ಪೊಲೀಸರು ಪ್ರಕರಣದ ಕುರಿತು ವಿಷಯ ಸಂಗ್ರಹಿಸುತ್ತಿದ್ದು, ಆರೋಪಿಯ ಪತ್ತೆಗಾಗಿ ಜಾಲ ಬೀಸಿದ್ದಾರೆ.

ನಟಿ ಕಾಜಲ್ ಅಗರ್ವಾಲ್ ಜೊತೆ ಅಸಭ್ಯ ವರ್ತನೆ ತೋರಿದ ವ್ಯಕ್ತಿ: ನೆಟ್ಟಿಗರ ಆಕ್ರೋಶ

ರಷ್ಯಾ- ಉಕ್ರೇನ್ ಯುದ್ಧ: ಹೈದರಾಬಾದ್ ಯುವಕ ಸಾವು

ನೀರಿನ ಸಮಸ್ಯೆ ಪರಿಹರಿಸಲು BWSSB ಚೇರ್ಮನ್‌ರನ್ನು ಭೇಟಿಯಾಗಿ ಸಲಹೆ ನೀಡಿದ ಸಂಸದ ತೇಜಸ್ವಿ ಸೂರ್ಯ

- Advertisement -

Latest Posts

Don't Miss