Canada News: ಅಯೋಧ್ಯೆಯ ರಾಮಮಂದಿರ ಉದ್ಘಾಟನೆಯಾಗಿ ಒಂದು ವರ್ಷ ಕೂಡ ಆಗಲಿಲ್ಲ. ಆಗಲೇ ಖಲಿಸ್ತಾನಿ ಉಗ್ರ ಪನ್ನು, ತಾನು ರಾಮಮಂದಿರದ ಮೇಲೆ ದಾಳಿ ನಡೆಸಿ, ಅದನ್ನು ನಾಶ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.
ಕೆನಡಾದಲ್ಲಿ ರೆಕಾರ್ಡ್ ಮಾಡಿರುವ ಈ ವೀಡಿಯೋದಲ್ಲಿ ಹಿಂದೂ ದೇವಾಲಯಗಳನ್ನು ಧ್ವಂಸ ಮಾಡುವುದಾಗಿ ಪನ್ನು ಬೆದರಿಕೆ ಹಾಕಿದ್ದಾನೆ. ಅದರಲ್ಲೂ ರಾಮಮಂದಿರದ ಬುಡ ಅಲ್ಲಾಡಿಸುವುದಾಗಿ, ನೇರವಾಗಿ ಬೆದರಿಕೆ ಹಾಕಿದ್ದಾನೆ.
ಇನ್ನು ಕೆಲ ದಿನಗಳ ಹಿಂದಷ್ಟೇ ಏರ್ ಇಂಡಿಯಾ ವಿಮಾನದಲ್ಲಿ ಹಾರಾಡದಂತೆ ಪನ್ನು ಪ್ರಯಾಣಿಕರಿಗೆ ಕರೆ ನೀಡಿದ್ದ. ಈ ವಿಮಾನದಲ್ಲಿ ತಾನು ಬಾಂಬ್ ಇಡುವುದಾಗಿ, ಬೆದರಿಕೆ ಹಾಕಿದ್ದ. ಅಲ್ಲದೇ ಗೋಡೆಬರಹ ಸೇರಿ ಬೇರೆ ಬೇರೆ ರೀತಿಯಲ್ಲಿ ಹಿಂದೂಗಳ ವಿರುದ್ಧ ಪನ್ನು ಬೆದರಿಕೆ ಹಾಕಿದ್ದಾನೆ.
ಕೆನಡಾದಲ್ಲಿರುವ ಹಿಂದೂ ದೇವಾಲಯಗಳ ಮೇಲೆ ದಾಳಿ ಮಾಡಿ, ಧ್ವಂಸ ಮಾಡಿದ್ದು, ಈ ಕೃತ್ಯಕ್ಕೆ ಪ್ರಧಾನಿ ಮೋದಿ ಸೇರಿ, ಹಲವು ಭಾರತೀಯರು ಆಕ್ಷೇಪ ವ್ಯಕ್ತಪಡಿಸಿದ್ದರು.
ಇದೇ ವರ್ಷ ಜನವರಿ 22ರಂದು ಪ್ರಧಾನಿ ಮೋದಿ ಅಯೋಧ್ಯೆಯಲ್ಲಿರುವ ರಾಮಮಂದಿರವನ್ನು ಉದ್ಘಾಟಿಸಿ, ರಾಮಲಲ್ಲಾ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ದರು. ಈ ದಿನ ಭಾರತೀಯರು ರಾಮ ಬರುವ ದಿನವೆಂದು ಮನೆಯಲ್ಲಿ ಸಿಹಿ ತಯಾರಿಸಿ, ರಾಮನನ್ನು ಪೂಜಿಸಿ, ದೀಪವನ್ನೂ ಬೆಳಗಿದ್ದರು. ಭಾರತದಲ್ಲಿರುವ ಅತ್ಯಂತ ಸುಂದರ ಮತ್ತು, ಶ್ರೀಮಂತ ದೇವಸ್ಥಾನಗಳಲ್ಲಿ ರಾಮಮಂದಿರ ಕೂಡ ಒಂದಾಗಿದೆ.