Political News: 2025ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಯಾಗಿದ್ದು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದ್ದಾರೆ. ಈ ಬಜೆಟ್ ಬಗ್ಗೆ ಎಂದಿನಂತೆ, ವಿಪಕ್ಷಗಳು ಟೀಕೆ ಮಾಡಿದೆ.
ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಬಜೆಟ್ ಬಗ್ಗೆ ವ್ಯಂಗ್ಯವಾಡಿದ್ದು, ಈ ಬಾರಿಯ ಬಜೆಟ್ ಬೆಕ್ಕು 900 ಇಲಿಗಳನ್ನು ತಿಂದು ಹಜ್‌ಗೆ ಹೋಯಿತು ಅಂದ ಹಾಾಗಿದೆ ಎಂದಿದ್ದಾರೆ. ದೇಶದಲ್ಲಿ ಹಣದುಬ್ಬರ ಹೆಚ್ಚಾಗಿ, ನಿರುದ್ಯೋಗ ಉಂಟಾದರೂ ಕೂಡ, ಮೋದಿ ಸರ್ಕಾರಕ್ಕೆ ಹೊಗಳಿಕೆ ಪಡೆಯುವುದೇ ಹೆಚ್ಚಾಗಿದೆ. ಕಳೆದ 10 ವರ್ಷಗಳಲ್ಲಿ ಮೋದಿ ಸರ್ಕಾರ ಜನತೆಯಿಂದ 54 ಲಕ್ಷ ಕೋಟಿಗೂ ಹೆಚ್ಚು ಟ್ಯಾಕ್ಸ್ ಪಡೆದಿದೆ. ಅಲ್ಲದೇ ಈ ಬಜೆಟ್‌ನಲ್ಲಿ ಯುವಕರಿಗೆ ಏನೂ ಲಾಭವಿಲ್ಲ. ತಮ್ಮ ನ್ಯೂನ್ಯತೆಯನ್ನು ಮುಚ್ಚಿಹಾಕಲು ಕೇಂದ್ರ ಸರ್ಕಾರ ಈ ಬಜೆಟ್‌ನಲ್ಲಿ ಪ್ರಯತ್ನಿಸಿದೆ ಎಂದು ಖರ್ಗೆ ಅಸಮಾಧಾನ ಹೊರಹಾಕಿದ್ದಾರೆ.
ದಲಿತ, ಬುಡಕಟ್ಟು ಮಹಿಳೆ ಮಕ್ಕಳಿಗೆ ಅಂಥ ಲಾಭವೇನೂ ಆಗಿಲ್ಲ. ಮಹಿಳೆಯರಿಗೆ ಹೆಚ್ಚು ಲಾಭವಿದೆ ಎಂದಿದ್ದರೂ, ಆದರೆ ಇಂದಿನ ಬಜೆಟ್‌ನಲ್ಲಿ ಅಂಥದ್ದೇನೂ ಇರಲೇ ಇಲ್ಲವೆಂದು ಕೇಂದ್ರ ಸರ್ಕಾರದ ಬಜೆಟ್ ವಿರುದ್ಧ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.