ಅಭಿನಯ ಚಕ್ರವರ್ತಿ ಸುದೀಪ್‌ರ ಅಭಿಮಾನಿಯೊಬ್ಬ ಪ್ರತಿ ಜಿಲ್ಲೆಯಲ್ಲಿ ತೆಂಗಿನ ಮರಗಳನ್ನು ನೆಡುವ ಮೂಲಕ ಪರಿಸರ ಕಾಳಜಿಗೆ ಮುಂದಾಗಿದ್ದಾರೆ.
ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ಸವಳೇಶ್ವರ ಗ್ರಾಮದ ಶಿವಕುಮಾರ್ ಹಿರೇಮಠ ಎಂಬುವವರೇ ಈ ಕಾರ್ಯಕ್ಕೆ ಮುಂದಾಗಿದ್ದಾರೆ. ಅವರು ತಮ್ಮ ಚಿಕ್ಕ ವಯಸ್ಸಿನಲ್ಲೇ ಸಮಾಜ ಸೇವೆ ಮಾಡಬೇಕು ಎಂಬ ಮಹದಾಸೆ ಹೊಂದಿದ್ದರು. ತಮ್ಮ ಸ್ವಂತ ದುಡಿಮೆಯಲ್ಲಿ ಸ್ವಲ್ಪ ಪ್ರಮಾಣ ಸಮಾಜಕ್ಕೆ ಏನಾದರು ಸೇವೆ ಮಾಡಬೇಕು ಎಂಬುವ ಉದ್ದೇಶ ಹೊಂದಿದ್ದರು. ಸುದೀಪ ಹೆಸರಿನಲ್ಲಿ ಪ್ರತಿ ಜಿಲ್ಲೆಯಲ್ಲಿ ೧೦೦ ತೆಂಗಿನ ಮರವನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಅವರ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಈ ದಿಸೆಯಲ್ಲಿ ನಗರದ ಹಳೆಹುಬ್ಬಳ್ಳಿಯ ಜಂಗಳೀಪೇಟ ಪ್ರದೇಶದಲ್ಲಿ ತೆಂಗಿನ ಸಸಿಗಳನ್ನು ವಿತರಣೆ ಮಾಡಿ ಸಸಿ ನೆಡುವ ಕಾರ್ಯಕ್ಕೆ ಮುಂದಾದರು. ಈ ಸಂದರ್ಭದಲ್ಲಿ ಶರಣು ಕಂಬಾರ, ಪ್ರೀತಿಶ್ ಹಾಗೂ ಜಂಗಳಿಪೇಟಿಯ ಲೋಕೇಶ್ ಗುಂಜಾಳ, ವೀರಯ್ಯಸ್ವಾಮಿ ಸಾಲಿಮಠ, ಯಲ್ಲಪ್ಪಾ ದೇವಕ್ಕಿ ಸೇರಿದಂತೆ ರೈತರು ಉಪಸ್ಥಿತರಿದ್ದರು.